Friday, 2nd June 2023

ಸ್ಟಂಪ್‌ ಒದ್ದು, ಕಿತ್ತು ಬಿಸಾಕಿದ ಶಕೀಬ್: ಅಂಪಾಯರ್‌ ಜತೆ ಫೀಲ್ಡ್’ನಲ್ಲೇ ದುರ್ವರ್ತನೆ

ಢಾಕಾ: ಬಾಂಗ್ಲಾದೇಶದ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಆನ್-ಫೀಲ್ಡ್ ಅಂಪೈರ್ ಅವರ ಎಲ್‌ಬಿಡಬ್ಲ್ಯು ನಿರ್ಧಾರಕ್ಕೆ ಸಂಬಂಧಿಸಿ ಆಕ್ರೋಶಗೊಂಡು ಅಂಪೈರ್ ರೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ ಸ್ಟಂಪ್ ಗೆ ಕಾಲಿನಿಂದ ಒದ್ದು, ಅದನ್ನು ಬೇರು ಸಹಿತ ಕಿತ್ತು ಹಾಕಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಘಟನೆ ಢಾಕಾ ಪ್ರೀಮಿಯರ್ ಡಿವಿಜನ್ ಟ್ವೆಂಟಿ -20 ಕ್ರಿಕೆಟ್ ಲೀಗ್‌ ಪಂದ್ಯದಲ್ಲಿ ನಡೆಯಿತು.

ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಅಬಹಾನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ ಮೊಹಮ್ಮದನ್ ಪರ ಆಡುತ್ತಿರುವ ಶಾಕೀಬ್, ತನ್ನ ಬಾಂಗ್ಲಾದೇಶ ತಂಡದ ಸಹ ಆಟಗಾರ ಮುಶ್ಫಿಕುರಹೀಮ್ ವಿರುದ್ಧ ಎಲ್‌ಬಿಡಬ್ಲ್ಯು ಗಾಗಿ ಮನವಿ ಮಾಡಿದ್ದರು. ಅಂಪೈರ್ ಔಟ್ ತೀರ್ಪು ನೀಡಲು ನಿರಾಕರಿಸಿದಾಗ ಅಂಪೈರ್‌ರೊಂದಿಗೆ ಮಾತಿನ ಚಕಮಕಿ ನಡೆಸಿದ್ದಲ್ಲದೆ ಹತಾಶೆಯಿಂದ ಸ್ಟಂಪ್‌ ಗಳನ್ನು ಒದ್ದಿದ್ದಾರೆ.

ಸ್ವಲ್ಪ ಸಮಯದ ನಂತರ, ಮತ್ತೊಮ್ಮೆ ತನ್ನ ತಾಳ್ಮೆಯನ್ನು ಕಳೆದುಕೊಂಡು ಸ್ಟಂಪ್‌ಗಳನ್ನು ಬೇರು ಸಹಿತ ಕಿತ್ತುಹಾಕಿ ಎಸೆದಿ ದ್ದಾರೆ. ಶಾಕಿಬ್ ಈ ಪಂದ್ಯಾವಳಿಗಾಗಿ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹೊರಗುಳಿದಿದ್ದರು.

error: Content is protected !!