Thursday, 19th September 2024

ಮಾರ್ಕ್ ವುಡ್ ದಾಳಿಗೆ ಫಿಂಚ್ ಬೌಲ್‌ಡ್‌

ಮ್ಯಾಾಂಚೆಸ್ಟರ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆೆಂಡ್ ನಡುವಿನ ದ್ವಿಪಕ್ಷೀಯ ಸರಣಿಯ ಮೊದಲ ಏಕದಿನ ಪಂದ್ಯ ಶುಕ್ರವಾರ ಮ್ಯಾಾಂಚೆಸ್ಟರ್‌ನಲ್ಲಿ ಆರಂಭವಾಗಿದೆ.

ಎಮಿರೇಟ್‌ಸ್‌ ಓಲ್‌ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಏಕದಿನ ಪಂದ್ಯದಲ್ಲಿ ಇಂಗ್ಲೆೆಂಡ್ ತಂಡ ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡಿದ್ದು, ಆರಂಭದಲ್ಲೇ ಎರಡು ವಿಕೆಟ್ ಕೆಡವಿದೆ. ಆಸೀಸ್ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಆರನ್ ಫಿಂಚ್ ತಂಡದ ಮೊತ್ತ 43 ರನ್  ತಲುಪಿದಾಗಲೇ ವಿಕೆಟ್ ಕಳೆದುಕೊಂಡರು.

ಆಂಗ್ಲ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ ಒಂದು ವಿಕೆಟ್ ಕಿತ್ತು ಕಡಿವಾಣ ಹಾಕಿದರು. ಸದ್ಯ ಕ್ರೀಸ್‌ನಲ್ಲಿ ಆಲ್ರೌೌಂಡರ್ ಮಾರ್ಕಸ್ ಸ್ಟಾಯಿನಿಸ್ ಹಾಗೂ ಮಾರ್ಕಸ್ ಲ್ಯಾಾಂಬುಶ್ಗನ್ನೆೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಎರಡನೇ ಪಂದ್ಯ ಸೆಪ್ಟೆೆಂಬರ್ 13 ರಂದು ಹಾಗೂ ಮೂರನೇ ಪಂದ್ಯ ಸೆ.16ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *