ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಚಾಂಪಿಯನ್ಸ್‌ ಟ್ರೋಫಿ ವೇಳೆ ತುಂಬಾ ಅತ್ತಿದ್ದೆʼ: ಅಚ್ಚರಿ ಹೇಳಿಕೆ ನೀಡಿದ ಶ್ರೇಯಸ್‌ ಅಯ್ಯರ್‌!

Shreyas Iyer on emotional moment during CT 2025: ಭಾರತ ತಂಡದ ಬ್ಯಾಟ್ಸ್‌ಮನ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರು 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿನ ಭಾವನಾತ್ಮಕ ಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ. ಭಾರತ ತಂಡದ ಜತೆ ಮೊದಲ ತರಬೇತಿ ಅವಧಿಯಲ್ಲಿ ಆಗಿದ್ದ ಅನುಭವವನ್ನು ಶ್ರೇಯಸ್‌ ಅಯ್ಯರ್‌ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ನನಗೆ ಅಳು ಬರಲ್ಲ, ಆದ್ರೆ ಅವತ್ತು ಬಂತು: ಶ್ರೇಯಸ್‌ ಅಯ್ಯರ್‌!

ಶ್ರೇಯಸ್‌ ಅಯ್ಯರ್‌

Profile Ramesh Kote Apr 8, 2025 5:06 PM

ನವದೆಹಲಿ: ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ (Shreyas Iyer) ಅವರು ಕಳೆದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಯ ವೇಳೆ ತನ್ನ ಭಾವನಾತ್ಮಕ ಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನ ದುಬೈನಲ್ಲಿ ಭಾರತ ತಂಡದ (India) ನಿರಾಶದಾಯಕ ಮೊದಲ ತರಬೇತಿ ಅವಧಿಯ ನಂತರ ಕಣ್ಣೀರು ಹಾಕುತ್ತಾ, ಕೋಪಗೊಂಡಿದ್ದೆ ಎಂದು ಬಲಗೈ ಬ್ಯಾಟ್ಸ್‌ಮನ್‌ ಹೇಳಿಕೊಂಡಿದ್ದಾರೆ. ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಈ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು.

ಪಜಾಂಬ್‌ ಕಿಂಗ್ಸ್‌ ಜತೆಗಿನ ಸಂಭಾಷಣೆಯಲ್ಲಿ ಶ್ರೇಯಸ್‌ ಅಯ್ಯರ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೂ ಮುನ್ನ ನಡೆದಿದ್ದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲನೇ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿ ಲಯವನ್ನು ಕಂಡುಕೊಳ್ಳುವಲ್ಲಿ ವಿಫಲವಾದ ಬಳಿಕ ತುಂಬಾ ಹಿನ್ನಡೆ ಅನುಭವಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಸತತ ವೈಫಲ್ಯ ಅನುಭವಿಸಿದ್ದನ್ನು ಬಲಗೈ ಬ್ಯಾಟ್ಸ್‌ಮನ್‌ ಹೇಳಿಕೊಂಡಿದ್ದಾರೆ.

IPL 2025: ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದ ಬೆನ್ನಲ್ಲೆ ರಜತ್‌ ಪಾಟಿದಾರ್‌ಗೆ ಶಾಕ್‌ ನೀಡಿದ ಬಿಸಿಸಿಐ!

ಪಾಕಿಸ್ತಾನ ಆತಿಥ್ಯದಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೂ ಮುನ್ನ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ 181 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆ ಮೂಲಕ ಚಾಂಪಿಯನ್ಸ್‌ ಟ್ರೋಫಿ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು. ಆದರೆ, ಟೂರ್ನಿಗೂ ಮುನ್ನ ಲಯವನ್ನು ಕಂಡುಕೊಳ್ಳಲು ಶ್ರೇಯಸ್‌ ಅಯ್ಯರ್‌ ತುಂಬಾ ಕಷ್ಟಪಟ್ಟಿದ್ದರು.

"ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಮೊದಲ ಪ್ರಾಕ್ಟೀಸ್‌ ಸೆಷನ್‌ನಲ್ಲಿ ಕೊನೆಯ ಬಾರಿ ನಾನು ಅತ್ತಿದ್ದೆ. ನಾನು ಅಕ್ಷರಶಃ ಅಳುತ್ತಿದ್ದೆ. ಏಕೆಂದರೆ, ನೆಟ್ಸ್‌ನಲ್ಲಿ ನಾನು ಬ್ಯಾಟ್‌ ಮಾಡಿದ್ದೆ ಹಾಗೂ ಉತ್ತಮವಾಗಿ ಆಡಲು ಸಾಧ್ಯವಾಗಿರಲಿಲ್ಲ. ನನ್ನ ಮೇಲೆ ನನಗೆ ಕೋಪ ಬಂದು ಅತ್ತಿದ್ದೆ. ನನಗೆ ಸಾಮಾನ್ಯವಾಗಿ ಅಳು ಬರುವುದಿಲ್ಲ ಆದರೆ, ಅಂದು ಅತ್ತಿದ್ದಕ್ಕೆ ನನಗೆ ಶಾಕ್‌ ಆಗಿತ್ತು," ಎಂದು ಕ್ಯಾಂಡಿಡ್‌ ವಿತ್‌ ಕಿಂಗ್ಸ್‌ ಶೋನಲ್ಲಿ ಶ್ರೇಯಸ್‌ ಅಯ್ಯರ್‌ ರಿವೀಲ್‌ ಮಾಡಿದ್ದಾರೆ.

IPL 2025: ಸದ್ದಿಲ್ಲದೆ ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌!

"ನನ್ನ ಬ್ಯಾಟಿಂಗ್‌ ಲಯವನ್ನು ಅದೇ ರೀತಿ ಅಲ್ಲಿಗೂ ತೆಗೆದುಕೊಂಡು ಹೋಗಿದ್ದೆ ಆದರೆ ದುಬೈ ವಿಕೆಟ್‌ ವಿಭಿನ್ನವಾಗಿತ್ತು ಹಾಗೂ ಮೊದಲನೇ ದಿನ ಅಲ್ಲಿನ ಕಂಡೀಷನ್ಸ್‌ಗೆ ಹೊಂದಿಕೊಳ್ಳುವುದು ಕಷ್ಟಕರವಾದ ಸವಾಲಾಗಿತ್ತು. ಒಮ್ಮೆ ಅಭ್ಯಾಸ ಮುಗಿದ ಬಳಿಕ, ನಾನು ಹೆಚ್ಚುವರಿ ಸಮಯ ಅಭ್ಯಾಸ ನಡೆಸಬೇಕೆಂದು ಅನಿಸಿತ್ತು. ಆದರೆ, ನನಗೆ ಅವಕಾಶ ಸಿಕ್ಕಿರಲಿಲ್ಲ. ಅದರಿಂದ ನನಗೆ ಕೋಪ ಬಂದಿತ್ತು," ಎಂದು ಪಂಜಾಬ್‌ ಕಿಂಗ್ಸ್‌ ನಾಯಕ ತಿಳಿಸಿದ್ದಾರೆ.

ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ ಶ್ರೇಯಸ್‌ ಅಯ್ಯರ್‌ 15 ರನ್‌ ಗಳಿಸಿದ್ದರು. ನಂತರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಗುಂಪು ಹಂತದ ಪಂದ್ಯಗಳಲ್ಲಿ ಅಯ್ಯರ್‌ ತಲಾ ಅರ್ಧಶತಕಗಳನ್ನು ಸಿಡಿಸಿದ್ದರು. ನಾಕ್‌ಔಟ್‌ ಹಂತದಲ್ಲಿಯೂ ಅದೇ ರೀತಿಯ ಲಯವನ್ನು ಅವರು ಮುಂದುವರಿಸಿ 45 ರನ್‌ ಗಳಿಸಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ ಪಂದ್ಯದಲ್ಲಿಯೂ ಶ್ರೇಯಸ್‌ ಅಯ್ಯರ್‌ 48 ರನ್‌ ಗಳಿಸಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.



ಇದೀಗ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಗುಜರಾತ್‌ ಟೈಟನ್ಸ್‌ ವಿರುದ್ಧ 97 ರನ್‌ ಸಿಡಿಸಿದ್ದ ಶ್ರೇಯಸ್‌, ನಂತರ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ 52 ರನ್‌ಗಳನ್ನು ಸಿಡಿಸಿದ್ದರು.