ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನರೇಗಾ ಅನುದಾನ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಮಿ ಕುಟುಂಬಸ್ಥರು..!

ಶಮಿ ಅವರ ಸಹೋದರಿ ಶಬಿನಾ, ಅವರ ಪತಿ ಘಜ್ನವಿ ಮತ್ತು ಅವರ ಸೋದರಳಿಯರಾದ ಅಮೀರ್ ಸುಹೈಲ್, ನಸ್ರುದ್ದೀನ್ ಮತ್ತು ಶೇಖ್‌ ಕೂಡ ಸೇರಿದ್ದಾರೆ. ಇವರೆಲ್ಲ ನಕಲಿ ನರೇಗಾ ಜಾಬ್‌ಕಾರ್ಡ್‌ (ಉದ್ಯೋಗಚೀಟಿ) ಹೊಂದಿದ್ದರು. ಈ ಪ್ರಕರಣ ಶಮಿಗೆ ಮುಜುಗರ ತಂದಿದೆ.

ನರೇಗಾ ಅನುದಾನ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಮಿ ಕುಟುಂಬಸ್ಥರು..!

Profile Abhilash BC Apr 3, 2025 1:03 PM

ಲಕ್ನೋ: ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ(Mohammed Shami ಅವರ ಸಹೋದರಿ(Sabina Anjum) ಮತ್ತು ಪತಿ ಸೇರಿದಂತೆ ಇತರ ಸಂಬಂಧಿಕರ ವಿರುದ್ಧ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA)ಯಲ್ಲಿ ಅಕ್ರಮವಾಗಿ ಹಣ ಪಡೆದ ಆರೋಪವೊಂದು ಕೇಳಿಬಂದಿದೆ. ಒಟ್ಟು 18 ಮಂದಿ ವಿರುದ್ಧ ವಂಚನೆ ಆರೋಪ ಹೊರಿಸಲಾಗಿದೆ. ಜಿಲ್ಲಾ ಮಟ್ಟದ ತನಿಖೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಆರೋಪಿಗಳು ಯಾವುದೇ ಕೆಲಸ ಮಾಡದೆ ಗ್ರಾಮೀಣ ಉದ್ಯೋಗ ಯೋಜನೆಯಡಿ ವಂಚನೆಯಿಂದ ವೇತನ ಪಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಎರಡು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ಮನರೇಗಾ ಯೋಜನೆಯಡಿ ರಾಜ್ಯಗಳಿಗೆ ನೀಡುವ ಅನುದಾನವನ್ನು ಬಹುತೇಕ ರಾಜ್ಯ ಸರ್ಕಾರಗಳು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಇದರ ಬೆನಲ್ಲೇ ಶಮಿ ಅವರ ಸಹೋದರಿ ಕೂಡ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ

ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ನಿಧಿ ಗುಪ್ತಾ ವತ್ಸ್ ಬುಧವಾರ ಈ ಹಗರಣದಲ್ಲಿ 18 ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಘೋಷಿಸಿದ್ದರು. ಅವರಲ್ಲಿ ಶಮಿ ಅವರ ಸಹೋದರಿ ಶಬಿನಾ, ಅವರ ಪತಿ ಘಜ್ನವಿ ಮತ್ತು ಅವರ ಸೋದರಳಿಯರಾದ ಅಮೀರ್ ಸುಹೈಲ್, ನಸ್ರುದ್ದೀನ್ ಮತ್ತು ಶೇಖ್‌ ಕೂಡ ಸೇರಿದ್ದಾರೆ. ಇವರೆಲ್ಲ ನಕಲಿ ನರೇಗಾ ಜಾಬ್‌ಕಾರ್ಡ್‌ (ಉದ್ಯೋಗಚೀಟಿ) ಹೊಂದಿದ್ದರು. ಈ ಪ್ರಕರಣ ಶಮಿಗೆ ಮುಜುಗರ ತಂದಿದೆ.

ಅಕ್ರಮಗಳು ದೃಢಪಟ್ಟ ನಂತರ, ಜಿಲ್ಲಾಡಳಿತವು ಎಲ್ಲಾ ಆರೋಪಿತ ಕಾರ್ಮಿಕರನ್ನು ಅಮಾನತುಗೊಳಿಸಲು, ಔಪಚಾರಿಕ ಪೊಲೀಸ್ ದೂರು ದಾಖಲಿಸಲು ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಇಲಾಖಾ ಕ್ರಮ ಕೈಗೊಳ್ಳಲು ಆದೇಶಿಸಿದೆ. ಹೆಚ್ಚುವರಿಯಾಗಿ, ದುರುಪಯೋಗಪಡಿಸಿಕೊಂಡ ಹಣವನ್ನು ಮರುಪಡೆಯಲು ಆದೇಶಿಸಲಾಗಿದೆ.