ನವದೆಹಲಿ: ಬಹುನಿರೀಕ್ಷಿತ ೨೦೨೫ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಮೆಗಾ ಹರಾಜಿಗೆ ಇನ್ನೂ ಕೆಲವೇ ದಿನಗಳ ಬಾಕಿ ಇವೆ. ಇದರ ನಡುವೆ ಎಲ್ಲಾ 10 ಫ್ರಾಂಚೈಸಿಗಳು ಬೇಡಿಕೆಗಳಿಗೆ ತಕ್ಕಂತೆ ಆಟಗಾರರನ್ನು ಉಳಿಸಿಕೊಂಡು ಇನ್ನುಳಿದ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿವೆ. ಇದೀಗ ಎಲ್ಲಾ ತಂಡಗಳು ಮೆಗಾ ಹರಾಜಿನಲ್ಲಿ ಯಾರೆಲ್ಲಾ ಆಟಗಾರರನ್ನು ಖರೀದಿಸಬೇಕೆಂಬ ಲೆಕ್ಕಾಚಾರಗಳಲ್ಲಿ ತೊಡಗಿವೆ.
ಅದರಂತೆ ೨೦೨೪ರ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡ ಮೆಗಾ ಹರಾಜಿಗೆ ಸೂಕ್ತ ತಯಾರಿ ನಡೆಸುತ್ತಿದೆ. ಮೆಗಾ ಹರಾಜಿಗೂ ಮುನ್ನ ಕೋಲ್ಕತಾ ಫ್ರಾಂಚೈಸಿಯು ಆರು ಮಂದಿ ಆಟಗಾರರನ್ನು ಉಳಿಸಿಕೊಂಡಿದೆ. ರಿಂಕು ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಆಂಡ್ರೆ ರಸೆಲ್, ಸುನೀಲ್ ನರೇನ್ ಹಾಗೂ ರಮಣ್‌ದೀಪ್ ಅವರನ್ನು ಉಳಿಸಿಕೊಂಡಿದೆ.
ಆದರೆ, 2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ಕೂಡ ಹರಾಜಿಗೆ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಕೋಲ್ಕತಾ ಫ್ರಾಂಚೈಸಿ ಅಚ್ಚರಿ ಮೂಡಿಸಿತ್ತು. ಆ ಮೂಲಕ ಶ್ರೇಯಸ್ ಅಯ್ಯರ್ ಅವರು ಮುಂದಿನ ಟೂರ್ನಿಯಲ್ಲಿ ಬೇರೆ ಫ್ರಾಂಚೈಸಿ ಪರ ಆಡುವುದು ಬಹುತೇಕ ಖಚಿತವಾಗಿದೆ. ಅಂದ ಹಾಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ, ಮೆಗಾ ಹರಾಜಿನಲ್ಲಿ ಖರೀದಿಸಬಲ್ಲ ಆರು ಮಂದಿ ಸ್ಟಾರ್ ಆಟಗಾರರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
- ವೆಂಕಟೇಶ್ ಅಯ್ಯರ್
2024೪ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಕೆಕೆಆರ್ ತಂಡಕ್ಕೆ ಕೀ ಬ್ಯಾಟ್ಸ್‌ಮನ್ ಆಗಿದ್ದ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಖರೀದಿಸಲು ಎದುರು ನೋಡುತ್ತಿದೆ. ಏಕೆಂದರೆ, ಕಳೆದ ಹಲವು ಆವೃತ್ತಿಗಳಲ್ಲಿ ಎಡಗೈ ಬ್ಯಾಟ್ಸ್‌ಮನ್ ಕೆಕೆಆರ್ ತಂಡದ ಕೀ ಆಟಗಾರರಾಗಿದ್ದರು.
- ಫಿಲ್ ಸಾಲ್ಟ್
೨೦೨೪ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಕೂಡ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅಂದ ಹಾಗೆ ೨೦೨೪ರ ಟೂರ್ನಿಗೂ ಮುನ್ನ ಗಾಯದ ಕಾರಣ ರೆಹಮಾನುಲ್ಲಾ ಗುರ್ಬಾಝ್ ಗಾಯದ ಕಾರಣ ಟೂರ್ನಿಯಿಂದ ಹೊರ ನಡೆದಿದ್ದರು. ಇವರ ಸ್ಥಾನಕ್ಕೆ ಬಂದಿದ್ದ ಫಿಲ್ ಸಾಲ್ಟ್, ಸುನೀಲ್ ನರೇನ್ ಜೊತೆಗೂಡಿ ತಂಡಕ್ಕೆ ಸ್ಪೋಟಕ ಆರಂಭವನ್ನು ನೀಡಿದ್ದರು.
- ಇಶಾನ್ ಕಿಶನ್
೨೦೨೫ರ ಮೆಗಾ ಹರಾಜಿನ ನಿಮಿತ್ತ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿತ್ತು. ಇದೀಗ ಅವರನ್ನು ಹರಾಜಿನಲ್ಲಿ ಖರೀದಲಸು ಕೋಲ್ಕತಾ ಫ್ರಾಂಚೈಸಿ ಎದುರು ನೋಡುತ್ತಿದೆ. ಆ ಮೂಲಕ ಅವರಿಗೆ ವಿಕೆಟ್ ಕೀಪಿಂಗ್ ಸ್ಥಾನವನ್ನುನೀಡಬಹುದು.
- ಜೋಸ್ ಬಟ್ಲರ್
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹಲವು ವರ್ಷಗಳ ಕಾಲ ಕೀ ಬ್ಯಾಟ್ಸ್‌ಮನ್ ಆಗಿದ್ದ ಇಂಗ್ಲೆಂಡ್ ವೈಟ್‌ಬಾಲ್ ತಂಡದ ನಾಯಕ ಜೋಸ್ ಬಟ್ಲರ್ ಅವರನ್ನು ಮೆಗಾ ಹರಾಜಿಗೆ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಖರೀದಿಸಲು ಕೋಲ್ಕತಾ ಫ್ರಾಂಚೈಸಿ ಮುಂದಾಗಬಹುದು. ಐಪಿಎಲ್ ಟೂರ್ನಿಯಲ್ಲಿ ಜೋಸ್ ಬಟ್ಲರ್ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ.
- ಅರ್ಷದೀಪ್ ಸಿಂಗ್
ಪಂಜಾಬ್ ಕಿಂಗ್ಸ್ ಪರ ಕಳೆದ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು, ಭಾರತ ತಂಡಕ್ಕೆ ಹಲವು ವರ್ಷಗಳಿಂದ ಕೀ ಬೌಲರ್ ಆಗಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿಯೂ ಅರ್ಷದೀಪ್ ಸಿಂಗ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇದೀಗ ಅವರನ್ನು ಖರೀದಿಸಲು ಕೋಲ್ಕತಾ ಫ್ರಾಂಚೈಸಿ ಮುಂದಾಗಬಹುದು.
- ಟ್ರೆಂಟ್ ಬೌಲ್ಟ್
ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದ ಟ್ರೆಂಟ್ ಬೌಲ್ಟ್ ಅವರನ್ನು ಈ ಬಾರಿ ಮೆಗಾ ಹರಾಜಿಗೆ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಕೆಆರ್ ಅವರನ್ನು ಖರೀದಿಸಿ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿಕೊಳ್ಳಲು ಎದುರು ನೋಡುತ್ತಿದೆ.
ಈ ಸುದ್ದಿಯನ್ನು ಓದಿ: IPL 2025 : ಕೆ. ಎಲ್ ರಾಹುಲ್ ಸೇರಿದಂತೆ ಐಪಿಎಲ್ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಇಲ್ಲಿದೆ