ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕ್ರಿಸ್‌ ಗೇಲ್‌ ದಾಖಲೆ ಮುರಿದ ಸಾಯಿ ಸುದರ್ಶನ್

Sai Sudharsan: ಪ್ರಸಕ್ತ ಐಪಿಎಲ್‌(IPL 2025) 2025ರ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಆರಂಭಿಸಿದ ಸುದರ್ಶನ್, ಒಟ್ಟಾರೆಯಾಗಿ 30 ಇನ್ನಿಂಗ್ಸ್‌ಗಳಲ್ಲಿ 1,307 ರನ್ ಗಳಿಸಿದ್ದಾರೆ. ಐಪಿಎಲ್​ನ ಮೊದಲ 30 ಇನಿಂಗ್ಸ್​ಗಳಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಶಾನ್ ಮಾರ್ಷ್(1338) ಹೆಸರಿನಲ್ಲಿದೆ.

ಕ್ರಿಸ್‌ ಗೇಲ್‌ ದಾಖಲೆ ಮುರಿದ ಸಾಯಿ ಸುದರ್ಶನ್

Profile Abhilash BC Apr 10, 2025 12:20 PM

ಅಹಮದಾಬಾದ್‌: ಗುಜರಾತ್ ಟೈಟಾನ್ಸ್(Gujarat Titans) ತಂಡದ ಉದಯೋನ್ಮುಖ ಆರಂಭಿಕ ಆಟಗಾರ ಸಾಯಿ ಸುದರ್ಶನ್(Sai Sudharsan) ಅವರು ಕ್ರಿಸ್ ಗೇಲ್(Chris Gayle) ಮತ್ತು ಕೇನ್ ವಿಲಿಯಮ್ಸನ್‌ ಅವರನ್ನು ಹಿಂದಿಕ್ಕಿ ಐಪಿಎಲ್‌ ಇತಿಹಾಸದಲ್ಲಿ 30 ಇನ್ನಿಂಗ್ಸ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಹಾಗೂ ಒಟ್ಟಾರೆಯಾಗಿ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಐಪಿಎಲ್‌(IPL 2025) 2025ರ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಆರಂಭಿಸಿದ ಸುದರ್ಶನ್, ಒಟ್ಟಾರೆಯಾಗಿ 30 ಇನ್ನಿಂಗ್ಸ್‌ಗಳಲ್ಲಿ 1,307 ರನ್ ಗಳಿಸಿದ್ದಾರೆ. ಐಪಿಎಲ್​ನ ಮೊದಲ 30 ಇನಿಂಗ್ಸ್​ಗಳಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಶಾನ್ ಮಾರ್ಷ್(1338) ಹೆಸರಿನಲ್ಲಿದೆ.

ಬುಧವಾರ ನಡೆದಿದ್ದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿದ ಸಾಯಿ ಸುದರ್ಶನ್ 53 ಎಸೆತಗಳಿಂದ 82(8 ಬೌಂಡರಿ 3 ಸಿಕ್ಸರ್)‌ ರನ್‌ ಬಾರಿಸಿದ್ದರು. ಹಾಲಿ ಆವೃತ್ತಿಯಲ್ಲಿ 5 ಪಂದ್ಯಗಳಿಂದ 273 ರನ್‌ ಪೇರಿಸಿ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.

30 ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ಐಪಿಎಲ್ ರನ್‌

ಶಾನ್‌ ಮಾರ್ಷ್‌ - 1,328 ರನ್‌

ಸಾಯಿ ಸುದರ್ಶನ್‌ - 1,307 ರನ್‌

ಕ್ರಿಸ್‌ ಗೇಲ್‌- 1,141 ರನ್‌

ಕೇನ್‌ ವಿಲಿಯಮ್ಸನ್‌ - 1,096 ರನ್‌

ಮ್ಯಾಥ್ಯೂ ಹೇಡನ್‌ - 1,082 ರನ್‌



ಇದನ್ನೂ ಓದಿ IPL 2025: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ; ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡ, ಸಾಯಿ ಸುದರ್ಶನ್‌ ( 82) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 6 ವಿಕೆಟ್‌ ನಷ್ಟಕ್ಕೆ 217 ರನ್‌ಗಳನ್ನು ಕಲೆ ಹಾಕಿತು. ಗುರಿ ಬೆನ್ನಟಿದ ರಾಜಸ್ಥಾನ್‌ 19.2 ಓವರ್‌ಗಳಲ್ಲಿ 159 ರನ್‌ಗೆ ಆಲೌಟ್‌ ಆಯಿತು. ರಾಜಸ್ಥಾನ್‌ ಪರ ಸಂಜು 41, ಶಿಮ್ರಾನ್‌ ಹೆಟ್‌ಮೈರ್‌ 52 ಮತ್ತು ರಿಯಾನ್‌ ಪರಾಗ್‌ 26 ರನ್‌ ಗಳಿಸಿದರು.

ಪವರ್‌ ಪ್ಲೇಯಲ್ಲಿ ವಿಶೇಷ ದಾಖಲೆ ಬರೆದ ಸಿರಾಜ್‌

ಅಮೋಘ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ ಮಿಂಚುತ್ತಿರುವ ಗುಜರಾತ್‌ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ ಅವರು ಈ ಬಾರಿಯ ಐಪಿಎಲ್​ನ ಪವರ್​ಪ್ಲೇಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 5 ಪಂದ್ಯಗಳಿಂದ ಸಿರಾಜ್ ಈವರೆಗೆ 7 ವಿಕೆಟ್​ ಕಬಳಿಸಿದ್ದಾರೆ. ಇದು ಮಾತ್ರವಲ್ಲದೆ, ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್​ಗಳ ಪಟ್ಟಿಯಲ್ಲೂ ಮೊಹಮ್ಮದ್ ಸಿರಾಜ್ ಮೊದಲ ಸ್ಥಾನದಲ್ಲಿದ್ದಾರೆ. ಈವರೆಗೆ 20 ಓವರ್​ಗಳನ್ನು ಎಸೆದಿರುವ ಸಿರಾಜ್ 68 ಎಸೆತಗಳಲ್ಲಿ ಯಾವುದೇ ರನ್ ಬಿಟ್ಟು ಕೊಟ್ಟಿಲ್ಲ.