RCB vs DC: ಇಂದಿನ ಆರ್‌ಸಿಬಿ-ಡೆಲ್ಲಿ ಪಂದ್ಯಕ್ಕೆ ಮಳೆ ಭೀತಿ ಇದೆಯೇ?
ಐಪಿಎಲ್‌ನಲ್ಲಿ ದೊಡ್ಡ ಪ್ರಮಾಣದ ರನ್ಮಳೆಯನ್ನೇ ಕಂಡಿರುವ ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ಬೌಲರ್ಗಳಿಗೆ ನಿಜವಾದ ಸತ್ವಪರೀಕ್ಷೆ ಎದುರಾಗಲಿದೆ. ಕಿರು ಬೌಂಡರಿ ಮತ್ತು ವೇಗವಾದ ಔಟ್ಫೀಲ್ಡ್ ಹೊಂದಿರುವ ಸ್ಟೇಡಿಯಂನಲ್ಲಿ ಬೌಲರ್‌ಗಳು ಯಶಸ್ಸು ಸಾಧಿಸಬೇಕಾದರೆ ಶಕ್ತಿಗಿಂತ ಯುಕ್ತಿ ಪ್ರದರ್ಶನ ತೋರಬೇಕಿದೆ.


ಬೆಂಗಳೂರು: ಸತತ 3 ಗೆಲುವಿನೊಂದಿಗೆ ಐಪಿಎಲ್ 18ನೇ(IPL 2025) ಆವೃತ್ತಿಯಲ್ಲಿ ಅಜೇಯವಾಗಿರುವ ಏಕೈಕ ತಂಡವೆನಿಸಿರುವ ಡೆಲ್ಲಿ ಕ್ಯಾಪಿಟಲ್ಸ್(RCB vs DC) ತಂಡ ಇಂದು(ಗುರುವಾರ) ನಡೆಯುವ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ ತಂಡದ ಸವಾಲು ಎದುರಿಸಲಿದೆ. ಇತ್ತಂಡಗಳ ಈ ಮುಖಾಮಿಖಿಗೆ ಚಿನ್ನಸ್ವಾಮಿ ಸ್ಟೇಡಿಯಂ(M Chinnaswamy Stadium) ಅಣಿಯಾಗಿದೆ. ಆರ್‌ಸಿಬಿ ತವರಿನ ಲಾಭವನ್ನು ಬಳಸಿಕೊಂಡು ಗೆಲುವು ದಾಖಲಿಸುವ ತವಕದಲ್ಲಿದ್ದರೆ, ಅತ್ತ ಡೆಲ್ಲಿ ತನ್ನ ಗೆಲುವಿನ ಜೈತ್ರಯಾತ್ರೆಯನ್ನು ಮುಂದುವರಿಸುವ ಹಂಬಲದಲ್ಲಿದೆ.
ಮಳೆ ಭೀತಿ ಇಲ್ಲ
ರಾಜ್ಯದ ಹಲವೆಡೆ ಬುಧವಾರ ಭಾರೀ ಮಳೆಯಾಗಿತ್ತು. ಗುರುವಾರವೂ ಮಳೆಯ ಎಚ್ಚರಿಕೆ ಇದೆ. ಆದರೆ ಪಂದ್ಯ ನಡೆಯುವ ಬೆಂಗಳೂರಿನಲ್ಲಿ(RCB vs DC Weather Update) ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ವೇಳೆ ತಾಪಮಾನವು ಗರಿಷ್ಠ 34 ಡಿಗ್ರಿ ಮತ್ತು ಕನಿಷ್ಠ 22 ಡಿಗ್ರಿ ಇರಬಹುದೆಂದು ಊಹಿಸಲಾಗಿದೆ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ಸಾಗಲಿದೆ. ಮಳೆ ಇಲ್ಲವಾದರೂ ರಾತ್ರಿ ವೇಳೆ ಇಬ್ಬನಿ ಸಮಸ್ಯೆ ಮಾತ್ರ ತಪ್ಪದು.
ಮುಖಾಮುಖಿ
ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗಿನ ಐಪಿಎಲ್‌ನಲ್ಲಿ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಆರ್‌ಸಿಬಿ 19 ಪಂದ್ಯ ಗೆದ್ದರೆ, ಡೆಲ್ಲಿ 11 ಪಂದ್ಯ ಜಯಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಎರಡು ಮುಖಾಮುಖಿಯಲ್ಲಿಯೂ ಆರ್‌ಸಿಬಿ ಗೆಲುವು ಕಂಡಿತ್ತು.
ಇದನ್ನೂ ಓದಿ IPL 2025 Points Table: ಡೆಲ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗುಜರಾತ್
ಸಂಭಾವ್ಯ ತಂಡಗಳು
ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್.
𝐓𝐞𝐥𝐥 𝐲𝐨𝐮 𝐚𝐥𝐥 𝐚𝐛𝐨𝐮𝐭 𝐢𝐭 𝐰𝐡𝐞𝐧 𝐈 𝐬𝐞𝐞 𝐲𝐨𝐮 𝐚𝐠𝐚𝐢𝐧. 🥹
— Royal Challengers Bengaluru (@RCBTweets) April 9, 2025
Great to catch up with you, Faf! ❤@faf1307 | #PlayBold #ನಮ್ಮRCB pic.twitter.com/0on8t9miDI
ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮ
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಪ್ಲೇಯರ್: ಮೋಹಿತ್ ಶರ್ಮಾ