Florida shooting: ಫ್ಲೋರಿಡಾ ವಿವಿಯಲ್ಲಿ ಭಾರೀ ಶೂಟೌಟ್; ಇಬ್ಬರು ಬಲಿ
Florida State University shootout: ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಭಾರೀ ಗುಂಡಿನ ದಾಳಿ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಇನ್ನು ಗುಂಡಿನ ದಾಳಿ ನಡೆಸಿದ ಶಂಕಿತನನ್ನು 20 ವರ್ಷದ ಫೀನಿಕ್ಸ್ ಇಕ್ನರ್ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಫ್ಲೋರಿಡಾ: ಅಮೆರಿಕದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದ್ದು, ವಿಶ್ವ ವಿದ್ಯಾನಿಯಲದಲ್ಲಿ ಶೂಟೌಟ್(Florida shooting) ನಡೆದಿರುವ ಬಗ್ಗೆ ವರದಿಯಾಗಿದೆ. ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಭಾರೀ ಗುಂಡಿನ ದಾಳಿ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಇನ್ನು ಗುಂಡಿನ ದಾಳಿ ನಡೆಸಿದ ಶಂಕಿತನನ್ನು 20 ವರ್ಷದ ಫೀನಿಕ್ಸ್ ಇಕ್ನರ್ ಎಂದು ಗುರುತಿಸಲಾಗಿದ್ದು, ಈತನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಅರೆಸ್ಟ್ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಏನಿದು ಘಟನೆ?
ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪ್ರಮುಖ ಸುದ್ದಿ ಮಾಧ್ಯಮ ವರದಿ ಮಾಡಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಬಳಿ 20 ವರ್ಷದ ಯುವಕನೊಬ್ಬ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಈ ನಡುವೆ ತಕ್ಷಣ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಆತ ಶರಣಾಗತಿಗೆ ಒಪ್ಪಿರಲಿಲ್ಲ. ಕೊನೆಗೆ ಪೊಲೀಸರ ಆತನ ಮೇಲೆ ಪೊಲೀಸರು ಗುಂಡು ಹಾರಿಸಬೇಕಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Bidar ATM robbery: ಬೀದರ್ ಶೂಟೌಟ್ ಪ್ರಕರಣದ ಖದೀಮರ ಗುರುತು ಪತ್ತೆ; ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ಘೋಷಣೆ
ತಾಯಿಯ ಗನ್ ತಂದಿದ್ದ ಹಂತಕ
ಶಂಕಿತ ಫೀನಿಕ್ಸ್ ಇಕ್ನರ್ ತನ್ನ ತಾಯಿಯ ಆಯುಧವನ್ನು ತೆಗೆದುಕೊಂಡು ಬಂದಿದ್ದ. ಅಧಿಕಾರಿಗಳು ವ್ಯಕ್ತಿಯಿಂದ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದಲ್ಲಿ ಶಾಟ್ ಗನ್ ಕೂಡ ಪತ್ತೆಯಾಗಿದ್ದು, ಶಂಕಿತ ವಾಹನದಲ್ಲಿ ಮತ್ತೊಂದು ಬಂದೂಕು ಇರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ ಅಧ್ಯಕ್ಷ ರಿಚರ್ಡ್ ಮೆಕ್‌ಕುಲೋ ಪ್ರತಿಕ್ರಿಯಿಸಿದ್ದು, ಇದನ್ನು ದುರಂತದ ದಿನ ಎಂದು ಕರೆದಿದ್ದಾರೆ. ಗುಂಡಿನ ದಾಳಿಯ ಘಟನೆಯ ನಂತರ ನಿನ್ನೆ ಮತ್ತು ಇಂದು ಕೂಡಾ ಎಲ್ಲ ತರಗತಿಗಳು, ಈವೆಂಟ್‌ಗಳು ಮತ್ತು ಇನ್ನಿತರ ಕಾರ್ಯಾಚರಣೆಗಳನ್ನು ರದ್ದುಗೊಳಿಸುವುದಾಗಿ ವಿಶ್ವ ವಿದ್ಯಾನಿಲಯ ಘೋಷಿಸಿದೆ.
ಟ್ರಂಪ್ ಪ್ರತಿಕ್ರಿಯೆ
ಇನ್ನು ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತ ವ್ಯಕ್ತಪಡಿಸಿದ್ದು, ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ, ತಲ್ಲಾಹಸ್ಸಿ, ಸಕ್ರಿಯ ಶೂಟಿಂಗ್ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಆತ ಸಕ್ರಿಯ ಶೂಟರ್ ಎಂದು ನಾನು ಭಾವಿಸುತ್ತೇನೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಅಷ್ಟೇ ಅಲ್ಲ ಇದು ಭಯಾನಕ ವಿಷಯ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ