Thursday, 19th September 2024

ಬಿಗ್ ಬ್ಯಾಶ್ ಲೀಗ್‌ನತ್ತ ಯುವಿ

ಮೆಲ್ಬರ್ನ್: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ,  ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌೌಂಡರ್ ಹಾಗೂ 2011 ವಿಶ್ವಕಪ್‌ನ ಹೀರೋ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಆಡುವ
ಇಂಗಿತ ವ್ಯಕ್ತಪಡಿಸಿದ್ದಾರೆ.

ಇಲ್ಲಿಯವರೆಗೆ, ಭಾರತದ ಯಾವುದೇ ಕ್ರಿಕೆಟ್ ಆಟಗಾರ ಬಿಬಿಎಲ್‌ನಲ್ಲಿ ಭಾಗವಹಿಸಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ, ಯಾವುದೇ ತಮ್ಮದೇ ದೇಶದ  ಆಟಗಾರನನ್ನು ವಿದೇಶೀ ಕೂಟದಲ್ಲಿ ಭಾಗವಹಿಸಲು ಅನುಮತಿ ನೀಡುವುದಿಲ್ಲ.
38 ವರ್ಷದ ಯುವರಾಜ್ ಕಳೆದ ವರ್ಷ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು ಹಾಗೂ
ವಿದೇಶೀ ಲೀಗ್‌ನಲ್ಲಿ ತಮ್ಮ ಛಾಪು ತೋರಿಸಲು ಸಿದ್ದತೆ ನಡೆಸಿದ್ದಾರೆ. ಇದನ್ನು ಯುವಿಯ ಮ್ಯಾಣಜರ್
ಜಾಸನ್ ವಾರ್ನ್ ಕೂಡ ಇದನ್ನು ಸ್ಥಳೀಯ ಪತ್ರಿಕೆಗೆ ಖಚಿತ ಪಡಿಸಿದ್ದಾರೆ. ಆಸ್ಟ್ರೇಲಿಯಾದ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ, ಯುವಿಗಾಗಿ ಕ್ಲಬ್‌ನ ಹುಡುಕಾಟದಲ್ಲಿದೆ.

2011ರ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ, 2017ರಲ್ಲಿ ಕೊನೆಯ ಪಂದ್ಯವನ್ನು  ಆಡಿದ್ದರು. 304 ಏಕದಿನ ಪಂದ್ಯಗಳಲ್ಲಿ 8701 ರನ್‌ಗಳು, 111 ವಿಕೆಟ್ ಪಡೆದಿದ್ದಾರೆ. 40 ಟೆಸ್‌ಟ್‌‌ಗಳು ಹಾಗೂ 58 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟರ್‌ಸ್‌ ಅಸೋಸಿಯೇಶನ್ ಅಧ್ಯಕ್ಷ, ಮಾಜಿ ಆಲ್ರೌೌಂಡರ್ ಶೇನ್ ವಾಟ್ಸನ್, ಯುವರಾಜ್ ಬಿಬಿಎಲ್‌ನಲ್ಲಿ ಆಡುವುದು ಆ ತಂಡಕ್ಕೆೆ ಹೆಮ್ಮೆಯ ವಿಷಯವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *