ಪಾವಗಡ: ಪುರಸಭೆ ಮಾಜಿ ಅಧ್ಯಕ್ಷರ ಮನೆಯಿಂದ ಹಾಡಹಗಲೇ ಕಳವು
Theft Case: ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶ್ರೀನಿವಾಸ ನಗರದಲ್ಲಿರುವ ಪುರಸಭೆ ಮಾಜಿ ಅಧ್ಯಕ್ಷರ ಮನೆಯಿಂದ ಕಳ್ಳರು ಹಾಡಹಗಲೇ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಪ್ರದೇಶದಲ್ಲಿ ನಡೆಯುತ್ತಿರುವ 7ನೇ ಕಳವು ಪ್ರಕರಣ ಇದಾಗಿದೆ.
ಜೊಹೊ 25ಕ್ಕೂ ಹೆಚ್ಚು ಪ್ರಿ-ಬಿಲ್ಟ್ ಏಜೆಂಟ್ಸ್ ಬಿಡುಗಡೆ ಮಾಡಿದ್ದು ಅವುಗಳಲ್ಲಿ ಕೆಲವನ್ನು ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಪರಿಶೀಲನೆಗಳಿಗೆ ಭಾರತದ ಮಾರುಕಟ್ಟೆಗೇ ರೂಪಿಸಲಾಗಿದೆ. ಇದಲ್ಲದೆ, ಕಂಪನಿಯು ಭಾರತದಲ್ಲಿ 2024ರಲ್ಲಿ ಶೇ.32ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದೆ. ಬೆಂಗಳೂರಿ ನಲ್ಲಿ ಈ ವರ್ಷ ನಡೆದ ಕಂಪನಿಯ ವಾರ್ಷಿಕ ಬಳಕೆದಾರರ ಸಮ್ಮೇಳನ ಜೊಹೊಲಿಕ್ಸ್ ಇಂಡಿಯಾದಲ್ಲಿ ಇದನ್ನು ಪ್ರಕಟಿಸಲಾಯಿತು.
ರಾಜ್ಯ ಸರ್ಕಾರವು 2021ರಲ್ಲಿ 402 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 4 ವರ್ಷಗಳ ನಂತರ ಪರೀಕ್ಷೆ ನಡೆಸಿತ್ತು. 2024 ಡಿಸೆಂಬರ್ 26ರಂದು ಫಲಿತಾಂಶವನ್ನೂ ಪ್ರಕಟಿಸಿತ್ತು. ಅದಾದ ಮೇಲೆ ಪರೀಕ್ಷೆಯಲ್ಲಿ ಅರ್ಹರಾದ ಎಲ್ಲಾ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ನಡೆದು 7 ತಿಂಗಳು ಕಳೆದರೂ ಇನ್ನೂ ನೇಮಕಾತಿ ಆದೇಶ ನೀಡದಿರುವುದು ಸರಿಯಲ್ಲ. ಕೂಡಲೇ ನೇಮಕಾತಿ ಆದೇಶ ಪತ್ರಗಳನ್ನು ನೀಡಬೇಕು ಎಂದು ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಒತ್ತಾಯಿಸಿದ್ದಾರೆ.
Laxmi Hebbalkar: ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಆದರೆ, ಕರ್ನಾಟಕ ಮಾಡೆಲ್ ಇಟ್ಟುಕೊಂಡು ನರೇಂದ್ರ ಮೋದಿ ರಾಜಕಾರಣ ಮಾಡುತ್ತಿದ್ದಾರೆ. ಕರ್ನಾಟಕದ ಯೋಜನೆಗಳನ್ನು ಹಾಗೂ ಮಾಡೆಲ್ ಅನ್ನು ಟೀಕೆ ಮಾಡುವ ನೈತಿಕತೆ ಇದೆಯೇ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
ಮುಂಚೂಣಿಯ ಎಐ-ಸನ್ನದ್ಧ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೊ ಲಿಮಿಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂಐಟಿ, ಬಿ.ಎಸ್.ಇ: 507685, ಎನ್.ಎಸ್.ಇ: ವಿಪ್ರೊ) ಜೂನ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆ ಮಾನದಂಡಗಳು (ಐ.ಎಫ್.ಆರ್.ಎಸ್.) ಅನ್ವಯ ಪ್ರಕಟಿಸಿದೆ
ಉನ್ನತ ಅನುಭವಗಳು, ವೈಯಕ್ತೀಕರಿಸಿದ ಸೇವೆಗಳು, ಹೊಸ ಯುಗದ ಐಷಾರಾಮಿ, ನಾವೀನ್ಯತೆ ಮತ್ತು ಸುಸ್ಥಿರತೆಯೊಂದಿಗೆ ಬೆರೆತ ಅಪ್ರತಿಮ ಉತ್ಪನ್ನ ಶ್ರೇಣಿಯನ್ನು ನೀಡುವ MG SELECT ಅನುಭವ ಕೇಂದ್ರಗಳು. ಎಲೆಕ್ಟ್ರಾನಿಕ್ ಸಿಟಿ ಮತ್ತು ಅಶೋಕ್ ನಗರದಲ್ಲಿರುವ ಈ MG SELECT ಅನುಭವ ಕೇಂದ್ರಗಳು ಬೆಂಗಳೂರು ಪ್ರದೇಶದ ಹೊಸ ಯುಗದ ಐಷಾರಾಮಿ ಕಾರು ಖರೀದಿದಾರರಿಗೆ ಸೇವೆ ಸಲ್ಲಿಸಲಿವೆ. ನಮ್ಮ ಹೊಸ ಯುಗದ ಐಷಾರಾಮಿ ಬ್ರಾಂಡ್ ಗೆ ಗ್ರಾಹಕರನ್ನು ಒಂದು ಹೆಜ್ಜೆ ಹತ್ತಿರ ತರಲು, ನಾವು ಭಾರತದಾದ್ಯಂತ 13 ಪ್ರಮುಖ ನಗರಗಳಲ್ಲಿ 14 ಕೇಂದ್ರಗಳನ್ನು ಉದ್ಘಾಟಿಸುತ್ತಿದ್ದೇವೆ.
Bengaluru Stampede: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ನಡೆಯಿತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಕಾಲ್ತುಳಿತದಿಂದ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟ ಪ್ರಕರಣ ಸಂಬಂಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವಿರುದ್ದ ಎಫ್‌ಐಆರ್ ದಾಖಲಿಸಲು ಕರ್ನಾಟಕ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
Supreme Court: ದರ್ಶನ್ ಅವರಿಗೆ ಜಾಮೀನು ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಕರ್ನಾಟಕ ಹೈಕೋರ್ಟ್‌ನ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ದರ್ಶನ್ ಅವರಿಗೆ ಜಾಮೀನು ನೀಡುವ ವೇಳೆ ಕರ್ನಾಟಕ ಹೈಕೋರ್ಟ್ ಸೂಕ್ತ ವಿವೇಚನೆಯನ್ನು ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Jockey 42 Movie: ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ʼಜಾಕಿ-42ʼ ಚಿತ್ರಕ್ಕೆ ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಹಾರ್ಸ್ ರೇಸ್ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.
CM Siddaramaiah: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿ ರಾಜೀನಾಮೆಗೆ ಮುಂದಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ವಿ. ಭರಮನಿ ಅವರಿಗೆ ಇದೀಗ ರಾಜ್ಯ ಸರ್ಕಾರ ಪದೋನ್ನತಿ ನೀಡಿದ್ದು, ಬೆಳಗಾವಿ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ (ಡಿಸಿಪಿ)ರಾಗಿ ನೇಮಿಸಿದೆ.
Crime News: ಕೋಲ್ಕತಾ ಕಾಲೇಜು ಹಾಸ್ಟೆಲ್ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ ಟೋಪಣ್ಣವರ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾಗಿರುವ ಪರಮಾನಂದನನ್ನು ಜು. 12ರಂದೇ ಪೊಲೀಸರು ಬಂಧಿಸಿದ್ದಾರೆ.
Actor Darshan: ಬಂಧನದ ಕಾರಣಗಳನ್ನಷ್ಟೇ ನಾವು ಕೇಳುತ್ತಿದ್ದೇವೆ. ಬೇರೆ ಕೇಳುತ್ತಿಲ್ಲ. ಬಂಧನ ಕಾನೂನುಬದ್ಧವಾಗಿಲ್ಲ ಎನ್ನುವುದಾಗಿದೆ, ಇದಕ್ಕೆ ಉತ್ತರ ಕೊಡಿ ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಬಳಿಕ ವಿಚಾರಣೆಯನ್ನು ಜುಲೈ 22ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.
Bengaluru Stampede: ಬೆಂಗಳೂರು ಕಾಲ್ತುಳಿತಕ್ಕೆ ಕರ್ನಾಟಕ ಸರ್ಕಾರ ಆರ್‌ಸಿಬಿಯನ್ನು ದೂಷಿಸಿದ್ದು, ಇದೇ ವರದಿಯಲ್ಲಿ ವಿರಾಟ್ ಕೊಹ್ಲಿ ಹೆಸರನ್ನೂ ಉಲ್ಲೇಖಿಸಲಾಗಿದೆ. ಕ್ರೀಡಾಂಗಣದಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳನ್ವು ಆಹ್ವಾನಿಸಲಾಗಿತ್ತು. ಆದರೆ ಇದಕ್ಕೆ ತಂಡದ ಆಡಳಿತ ಮಂಡಳಿ ರಾಜ್ಯ ಸರ್ಕಾರದ ಅಥವಾ ಪೊಲೀಸ್ ಇಲಾಖೆಯ ಅನುಮತಿ ಪಡೆದಿರಲಿಲ್ಲ ಎಂದಿದೆ.
ಬಿಐಎಸ್ ಬೆಂಗಳೂರು ವಿಭಾಗದ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಸುಷ್ಮಾ ರಾವ್ ಮಂತ್ರಾಡಿ ಮಾತನಾಡಿ, ಬಿಐಎಸ್ನ ಸಾರ್ವಜನಿಕ ಸೇವೆಗಳು ಮತ್ತು ಉತ್ಪನ್ನಗಳಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಎಲ್ಲಾ ಹಂತಗಳಲ್ಲಿ ಬಿಐಎಸ್ ಕಣ್ಗಾವಲು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಬಿಐಎಸ್ ಪಾತ್ರ ಅತ್ಯಂತ ನಿರ್ಣಾಯಕ ಎಂದರು.
ಸಾಮಾನ್ಯವಾಗಿ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದಕ್ಕೂ ವಯಸ್ಸಿಗೂ ಸಂಬಂಧವಿರುತ್ತದೆ. ಆದರೂ, 30ರ ಹರೆಯದವರಲ್ಲೂ, 20ರ ಹರೆಯದವರಲ್ಲೂ ಕೆಲವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದು ರೋಗನಿರ್ಣಯದಲ್ಲಿ ಪತ್ತೆಯಾಗಿದೆ. ಅಧಿಕವಾಗಿರುವ ಕೊಲೆಸ್ಟ್ರಾಲ್, ನಿಶ್ಶಬ್ದ ಕೊಲೆಗಾರ. ಏಕೆಂದರೆ ಇದು ಯಾವುದೇ ರೋಗಲಕ್ಷಣಗಳನ್ನು ಅಥವಾ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ
ಹೊಸ CGL, ತನ್ನ ಮೂಲ ಸಂಸ್ಥೆಗಳಾದ ಆರ್ಸಿಲಾರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್‌ನ ಸುದೀರ್ಘ ಜಾಗತಿಕ ನೈಪುಣ್ಯತೆಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡು, ಉನ್ನತ-ದರ್ಜೆಯ, ವಿಶೇಷ ಸ್ಟೀಲ್‌ಗಗಿ ಬಹುತೇಕವಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಆಟೋಮೋಟಿವ್ ಕ್ಷೇತ್ರಕ್ಕೆ ಒಂದು ಮಹತ್ತರ ಪರಿವರ್ತನೆ ತರಲು ಸಜ್ಜಾಗಿದೆ. ಇದು, ನಿಪ್ಪಾನ್ ಸ್ಟೀಲ್‌ನ ಪರವಾನಗಿ ಪಡೆದ ಉತ್ಪನ್ನಗಳೂ ಒಳಗೊಂಡಂತೆ, ಗಾಲ್ವನೈಜ್ಡ್ (GI) ಮತ್ತು ವಾಲ್ವ ನ್ನೀಲ್ಡ್ (GA) ಕೋಟಿಂಗ್ ಮಾಡಲಾದ ಮಟ್ಟಸ ಸ್ಟೀಲ್‌ಗಳನ್ನು ಉತ್ಪಾದಿಸಲಿದೆ.