Viral Video: ಹುಲ್ಲು ತಿನ್ನಲು ವಿದ್ಯುತ್ ತಂತಿ ಏರಿತೇ ಈ ಮೇಕೆ?
ಹುಲ್ಲು ತಿನ್ನಲು ಮೇಕೆಯೊಂದು ವಿದ್ಯುತ್ ತಂತಿಯ ಮೇಲೆ ಹತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಗಮನ ಸೆಳೆದಿದೆ. ಕೆಲವರು ಇದು ನಿಜವೋ ಇಲ್ಲ ಎಡಿಟ್ ಮಾಡಿರೋದೋ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಇದನ್ನು ಎಐ ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ತಂತಿ ಹತ್ತಿದ ಮೇಕೆ.

ಹೊಸದಿಲ್ಲಿ: ಹುಲ್ಲು ತಿನ್ನಲು ಮೇಕೆಯೊಂದು (Goat) ವಿದ್ಯುತ್ ತಂತಿಯ ಮೇಲೆ ಹತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಅನೇಕರ ಗಮನ ಸೆಳೆದಿದೆ. ಕೆಲವರು ಇದು ನಿಜವೋ ಇಲ್ಲ ಎಡಿಟ್ ಮಾಡಿರೋದೋ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಇದನ್ನು ಎಐ ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಈಗ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ. ಈಗಿನ ಕಾಲದಲ್ಲಿ ಚಿತ್ರ, ವಿಡಿಯೊವನ್ನು ಎಡಿಟ್ ಮಾಡಿ ಸಹಜವಾಗಿರುವಂತೆ ಮಾಡಬಹುದು. ಇಂತಹ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹ ಒಂದು ವಿಡಿಯೋ ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ಈ ವಿಡಿಯೋದಲ್ಲಿ ಮೇಕೆಯೊಂದು ವಿದ್ಯುತ್ ತಂತಿಯ ಮೇಲೆ ಇದ್ದ ಹುಲ್ಲು ತಿನ್ನಲು ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಮೇಕೆ ಮೇಲೆ ಹೇಗೆ ಹೋಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಸುಮ್ಮನೆ ಮನೋರಂಜನೆಗಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮತ್ತೆ ಕೆಲವರು ಇದು ಎಐನಿಂದ ಮಾಡಿರುವ ವಿಡಿಯೊ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊದಿಂದಾಗಿ ಕಾಮೆಂಟ್ ವಿಭಾಗದಲ್ಲಿ ಮೇಕೆಯ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ನೆಲಕ್ಕಿಂತ ಮೇಲೆ ಸಾಕಷ್ಟು ಎತ್ತರದಲ್ಲಿರುವ ವಿದ್ಯುತ್ ತಂತಿಗಳ ಮೇಲೆ ನಿಂತು ಎಲೆಗಳನ್ನು ತಿನ್ನುತ್ತಿರುವಂತೆ ತೋರುವ ಮೇಕೆಯ ವಿಡಿಯೊ ವೀಕ್ಷಕರಿಗೆ ನಂಬಲು ಅಸಾಧ್ಯವಾಗಿದೆ. ಆದರೂ ಈ ವಿಡಿಯೊದಲ್ಲಿ ಬಿಳಿ ಮೇಕೆಯು ತಂತಿಗಳ ಮೇಲೆ ಸಮತೋಲನ ಸಾಧಿಸುತ್ತಾ ನಡೆದು ಅದರ ಮೇಲೆ ಬಿದ್ದಿದ್ದ ಎಲೆಗಳನ್ನು ತಿನ್ನುತ್ತಿರುವುದನ್ನು ಕಾಣಬಹುದು. ಮೇಕೆಯಲ್ಲಿ ಯಾವುದೇ ಭಯ ಕಾಣುವುದಿಲ್ಲ.
ಇದನ್ನೂ ಓದಿ: Pawan Kalyan: ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ: ಗಾಯಗೊಂಡ ಪವನ್ ಕಲ್ಯಾಣ್ ಪುತ್ರನ ಆರೋಗ್ಯ ಹೇಗಿದೆ?
ಈ ವಿಡಿಯೊದಲ್ಲಿ ಹಲವಾರು ಕೇಬಲ್ ಲೈನ್‌ಗಳು ಮತ್ತು ವಿದ್ಯುತ್ ಕಂಬಗಳನ್ನು ಹೊಂದಿರುವ ರಸ್ತೆಯನ್ನು ಕಾಣಬಹುದು. ಮೇಕೆಯು ನೆಲದಿಂದ ಆರು ಮೀಟರ್‌ಗಳಿಗಿಂತ ಹೆಚ್ಚು ಎತ್ತರದ ಸೂಕ್ಷ್ಮ ತಂತಿಯ ಮೇಲೆ ನಿಂತಿರುವುದಾಗಿ ವಿಡಿಯೊದಲ್ಲಿ ಹೇಳಲಾಗಿದೆ. ಘಟನೆಯನ್ನು ಚಿತ್ರೀಕರಿಸಿದ ನಿಖರ ಸ್ಥಳ ಯಾವುದೆಂದು ಸ್ಪಷ್ಟವಾಗಿಲ್ಲ.
ಮೇಕೆಗಳು ಸಾಮಾನ್ಯವಾಗಿ ಮೇಲೆ ಹತ್ತುತ್ತವೆ. ಮರ, ಬೆಟ್ಟ ಮತ್ತು ಪರ್ವತಗಳನ್ನು ಏರುತ್ತವೆ. ಆದರೂ ವಿದ್ಯುತ್ ಕೇಬಲ್‌ಗಳ ಮೇಲೆ ಏರುವುದು ನಂಬಲು ಅಸಾಧ್ಯವಾದ ಸಂಗತಿ. ಅದರಲ್ಲೂ ಕೆಳಗೆ ಜನ, ವಾಹನ ಓಡಾಡುತ್ತಿರುವಾಗ ಮೇಲಿದ್ದ ಮೇಕೆಯನ್ನು ಯಾರೂ ಗಮನಿಸುವುದಿಲ್ಲ ಎಂಬುದು ಆಶ್ಚರ್ಯ ಉಂಟು ಮಾಡುತ್ತದೆ.
ಇದೇ ರೀತಿಯ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ನಡೆದಿತ್ತು. ಮನೆಯ ಛಾವಣಿಯ ಮೇಲೆ ಮೇಕೆಯೊಂದು ಹತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.