Saturday, 23rd November 2024

Viral Video: ಭಕ್ತರು ನದಿಗೆ ಎಸೆದ ನಾಣ್ಯಗಳೇ ಈತನ ಕುಟುಂಬಕ್ಕೆ ಆಧಾರವಂತೆ! ಅಯಸ್ಕಾಂತದಿಂದ ಇಷ್ಟೆಲ್ಲಾ ಸಾಧ್ಯನಾ…?

Viral Video

ಲಖನೌ: ಗಂಗಾ ನದಿಯನ್ನು ಭಾರತದ ಅತ್ಯಂತ ಪವಿತ್ರ ನದಿ ಎಂದು ಪರಿಗಣಿಸಲಾಗಿದೆ.  ಅಲ್ಲಿ ಅನೇಕ ಜನರು ಪ್ರಾರ್ಥಿಸುವುದು ಮಾತ್ರವಲ್ಲದೆ ವಿವಿಧ ಧಾರ್ಮಿಕ ಆಚರಣೆಗಳನ್ನು ಸಹ ಮಾಡುತ್ತಾರೆ. ಅಷ್ಟೇ ಅಲ್ಲದೇ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಎಂಬ ನಂಬಿಕೆಯ ಜೊತೆಗೆ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದ  ಬಯಕೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಅನೇಕ ಭಕ್ತರು ಈ ನದಿಗೆ ನಾಣ್ಯಗಳನ್ನು ಎಸೆಯುತ್ತಾರೆ. ಇದೀಗ ಆಯಸ್ಕಾಂತ ಬಳಸಿ ಯುವಕನೊಬ್ಬ ಈ ನಾಣ್ಯಗಳನ್ನು ಹೊರತೆಗೆದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಗಂಗಾ ತೀರದಲ್ಲಿ ವಾಸವಾಗಿರುವ ಅನೇಕ ಜನರು ನದಿಗೆ ಎಸೆದ ಈ ನಾಣ್ಯಗಳು ಮತ್ತು ಇತರ ಲೋಹದ ವಸ್ತುಗಳನ್ನು ಅಯಸ್ಕಾಂತದ ಸಹಾಯದಿಂದ ಹೊರತೆಗೆಯುತ್ತಾರೆ. ಇದು ಅನೇಕ ಕುಟುಂಬಗಳಿಗೆ ಜೀವನೋಪಾಯದ ಮೂಲವಾಗಿದೆ. ಈ ವೈರಲ್ ವಿಡಿಯೊದಲ್ಲಿ ಯುವಕನೊಬ್ಬ ದೋಣಿಯನ್ನು ನದಿಯ ಮಧ್ಯಕ್ಕೆ ತೆಗೆದುಕೊಂಡು ಹೋಗಿ ಹಗ್ಗವೊಂದಕ್ಕೆ ಆಯಸ್ಕಾಂತವನ್ನು ಕಟ್ಟಿ ನೀರಿಗೆ ಎಸೆದಿದ್ದಾನೆ. ನಂತರ ಅಯಸ್ಕಾಂತವನ್ನು ಎಳೆದಾಗ, ಅದಕ್ಕೆ ಒಂದಷ್ಟು ನಾಣ್ಯಗಳು ಅಂಟಿಕೊಂಡಿವೆ. ಇದನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ.

ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯೊಂದಿಗೆ ಮಾತನಾಡಿದ ಯುವಕ, ನನ್ನ ಕುಟುಂಬವು ಅಯಸ್ಕಾಂತಕ್ಕೆ ಸಿಕ್ಕಿದ  ಹಣದಿಂದ ಬದುಕುತ್ತಿದೆ ಎಂದು ಹೇಳಿದ್ದಾನೆ. ಜನರು ದಾನದ ರೂಪದಲ್ಲಿ ಎಸೆದ ನಾಣ್ಯಗಳನ್ನು ಹೊರತೆಗೆಯುತ್ತೇನೆ. ಕೆಲವೊಮ್ಮೆ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಸಹ ಸಿಕ್ಕಿರುವುದಾಗಿ ಆತ ತಿಳಿಸಿದ್ದಾನೆ. ಈ ವಿಡಿಯೊವನ್ನು @social_sandesh1 ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ 6.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಕೆಲವು ವೀಕ್ಷಕರು ವಿಡಿಯೊದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಚಿನ್ನ ಮತ್ತು ಬೆಳ್ಳಿಯ ನಾಣ್ಯ ಸಿಕ್ಕಿರುವ ಬಗ್ಗೆ  ಅನುಮಾನ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ:ಅಳಿಲನ್ನು ಸಹೋದರ ಎಂದು ಭಾವಿಸಿ ಪೂಜಿಸಿದ ಯುವತಿ! ವಿಡಿಯೊ ನೋಡಿ

ಗಂಗಾ ನದಿಗೆ ಎಸೆದ  ನಾಣ್ಯವನ್ನು ಆಯುವವರಲ್ಲಿ ಈ ಯುವಕ ಮಾತ್ರವಲ್ಲ ಈ ಹಿಂದೆ ರಾಹುಲ್ ಸಿಂಗ್ ಎಂಬ ಯುವಕ ಕೂಡ ಸುದ್ದಿಯಾಗಿದ್ದ. 13 ವರ್ಷದ ಬಾಲಕ ಪ್ರತಿದಿನ ಆರು ಗಂಟೆಗಳ ಕಾಲ ಆಳದ ನೀರಿಗೆ ಇಳಿದು ಉದ್ದನೆಯ ಕೋಲಿಗೆ ಆಯಸ್ಕಾಂತ ಕಟ್ಟಿ ನದಿಯಲ್ಲಿ ಈಜುತ್ತಾ ನಾಣ್ಯವನ್ನು ಸಂಗ್ರಹಿಸಿ ಜೀವನ ನಡೆಸುತ್ತಿದ್ದನಂತೆ.