ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ʼಬೆಸೋಸ್ʼ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ ಕಿಲಿ ಪೌಲ್‌; ಸಿಕ್ಕಾಪಟ್ಟೆ ವೈರಲ್‌ ಆಯ್ತು ವಿಡಿಯೊ!

ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್‌ ತನ್ನ ಸಹೋದರಿ ನೀಮಾ ಪೌಲ್ ಜೊತೆ ಸೇರಿಕೊಂಡು ಬೆಸೋಸ್ ಹಾಡಿನ ಬೀಟ್‍ಗೆ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾನೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ನೆಟ್ಟಿಗರು ಅವರ ಅದ್ಭುತ ಡ್ಯಾನ್ಸ್‌ ಕಂಡು ಫಿದಾ ಆಗಿದ್ದಾರೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಕಿಲಿಪೌಲ್‌ ಡ್ಯಾನ್ಸ್‌ ವಿಡಿಯೊ!

Profile pavithra May 16, 2025 2:31 PM

ಬೆಂಗಳೂರು: ಶ್ರೇಯಾ ಘೋಷಾಲ್ ಹಾಡಿರುವ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಶಿಖರ್ ಧವನ್ ಹೆಜ್ಜೆ ಹಾಕಿದ "ಬೆಸೋಸ್" ಹಾಡು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿಗೆ ಈಗಾಗಲೇ ಅನೇಕ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್‍ ನೃತ್ಯ ಪ್ರದರ್ಶನ ನೀಡಿದ್ದಾರೆ. ಈಗ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್‌ ತನ್ನ ಸಹೋದರಿ ನೀಮಾ ಪೌಲ್ ಜೊತೆ ಸೇರಿಕೊಂಡು ಬೆಸೋಸ್ ಹಾಡಿನ ಬೀಟ್‍ಗೆ ಡ್ಯಾನ್ಸ್‌ ಮಾಡಿದ್ದಾನೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಇವರಿಬ್ಬರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ"ಬೆಸೋಸ್" ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ.ಅವರ ಈ ಡ್ಯಾನ್ಸ್‌ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ನೆಟ್ಟಿಗರು ಕೂಡ ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ. "ತುಂಬಾ ಚೆನ್ನಾಗಿದೆ" ಎಂದು ಒಬ್ಬ ನೆಟಿಜನ್ ಕಾಮೆಂಟ್ ಮಾಡಿದ್ದಾರೆ. "ಅದ್ಭುತ ಪ್ರದರ್ಶನ " ಎಂದು ಮತ್ತೊಬ್ಬರು ಬರೆದಿದ್ದಾರೆ. ಅನೇಕ ನೆಟ್ಟಿಗರು ಕಾಮೆಂಟ್‌ವಿಭಾಗದಲ್ಲಿ 'ಹಾರ್ಟ್‌' ಮತ್ತು 'ಫೈಯರ್' ಇಮೋಜಿಗಳನ್ನು ಹಾಕುವ ಮೂಲಕ ಈ ಜೋಡಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಮತ್ತು 14,800 ಲೈಕ್‌ಗಳನ್ನು ಗಳಿಸಿದೆ.

ಕಿಲಿಪೌಲ್‌ ಡ್ಯಾನ್ಸ್‌ ವಿಡಿಯೊ ಇಲ್ಲಿದೆ ನೋಡಿ...

ಕಿಲಿಪೌಲ್ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದು ಇದೇ ಮೊದಲಲ್ಲ. ಈ ಹಿಂದೆ 2009 ರ ತುಮ್ ಮಿಲೆ ಚಿತ್ರದ 'ದಿಲ್ ಇಬಾದತ್' ಹಾಡಿಗೆ ಸಖತ್‌ ಆಗಿ ಕುಣಿದಿದ್ದಾನೆ. ಕಿಲಿ ಪೌಲ್‌ ಡ್ಯಾನ್ಸ್‌ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಸ್ಕೈಡೈವಿಂಗ್ ಮಾಡಿದ ಸಿಂಹ; ವಿಡಿಯೊ ನೋಡಿ ಶಾಕ್‌ ಆದ ನೆಟ್ಟಿಗರು ಹೇಳಿದ್ದೇನು?

ಬಾಲಿವುಡ್ ಹಾಡುಗಳ ಮೇಲಿನ ಕಿಲಿ ಪೌಲ್‌ ಪ್ರೀತಿಯನ್ನು ಕಂಡು ನೆಟ್ಟಿಗರು ಹೊಗಳಿದ್ದಾರೆ. "ಅದ್ಭುತ ಅಭಿನಯ” ಎಂದು ನೆಟ್ಟಿಗರು 'ಹಾರ್ಟ್' ಇಮೋಜಿಗಳನ್ನು ಹಂಚಿಕೊಂಡಿದ್ದಾರೆ. ಈ ರೀಲ್ ಅನ್ನು ಮಾರ್ಚ್ 25 ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗಿನಿಂದ ಇದು ಮೂರು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 25,000 ಲೈಕ್‍ಗಳೊಂದಿಗೆ ವೈರಲ್ ಆಗಿತ್ತು.