ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆನೆಯ ಲದ್ದಿಯಿಂದಲೂ ತಯಾರಿಸಲಾಗುತ್ತೆ ಸಿಹಿ ಖಾದ್ಯ! ಏನಿದು ವಿಚಿತ್ರ ರೆಸ್ಟೊರೆಂಟ್‌?

ಶಾಂಘೈನ ಹೊಸ ರೆಸ್ಟೋರೆಂಟ್‍ನಲ್ಲಿ ಒಣಗಿದ ಆನೆ ಸಗಣಿಯಿಂದ ಸಿಹಿತಿಂಡಿಯಲ್ಲಿ ತಯಾರಿಸಲಾಗುತ್ತದೆಯಂತೆ. ಈ ಖಾದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿ ವಿವಾದವನ್ನು ಹುಟ್ಟುಹಾಕಿದೆ. ಇದನ್ನು ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಅಂದ ಹಾಗೇ ಅದರ ರುಚಿ ಹೇಗಿದೆ, ಏನಿದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಆನೆಯ ಲದ್ದಿಯಿಂದಲೂ ತಯಾರಿಸಲಾಗುತ್ತೆ ಸಿಹಿ ಖಾದ್ಯ!

Profile pavithra Apr 24, 2025 5:54 PM

ಬೀಜಿಂಗ್:‌ ಸೋಶಿಯಲ್‌ ಮೀಡಿಯಾದಲ್ಲಿ ದಿನ ಒಂದಲ್ಲ ಒಂದು ಸುದ್ದಿಗಳು ವೈರಲ್‌ ಆಗುತ್ತಿರುತ್ತವೆ. ಅದು ಅಲ್ಲದೇ ಅಡುಗೆಗೆ ಸಂಬಂಧಪಟ್ಟ ವಿಚಿತ್ರ ನಳಪಾಕದ ವಿಡಿಯೊಗಳು ಸಾಕಷ್ಟು ಸದ್ದು ಮಾಡುತ್ತವೆ. ಇದೀಗ ಶಾಂಘೈನ ರೆಸ್ಟೋರೆಂಟ್‍ವೊಂದು ತನ್ನ ವಿಚಿತ್ರ ಸಿಹಿತಿಂಡಿಗಾಗಿ ಸುದ್ದಿಯಲ್ಲಿದೆ. ಅದು ಒಣಗಿದ ಆನೆ ಲದ್ದಿಯನ್ನು ತನ್ನ ಸಿಹಿತಿಂಡಿಯಲ್ಲಿ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಸಿಹಿ ತಿಂಡಿಯಲ್ಲಿ ಹೂವುಗಳು, ಗಿಡಮೂಲಿಕೆಗಳು ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಲಾಗಿದೆಯಂತೆ. ಈ ಖಾದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ವಿವಾದವನ್ನು ಹುಟ್ಟುಹಾಕಿದೆ.

ಫುಡ್ ಬ್ಲಾಗರ್ ಒಬ್ಬ ಶಾಂಘೈನ ಹೊಸ ರೆಸ್ಟೋರೆಂಟ್‍ನ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಮತ್ತು ಈ ರೆಸ್ಟೋರೆಂಟ್ ಪರಿಸರ ಸ್ನೇಹಿ ಭಕ್ಷ್ಯಗಳನ್ನು ನೀಡಲು ಹೆಸರುವಾಸಿಯಾಗಿದೆ ಮತ್ತು ಅದೇರೀತಿ ವಿವಿಧ ರೀತಿಯ ಹೊಸ ಭಕ್ಷ್ಯಗಳನ್ನು ನೀಡುತ್ತದೆ. ಇವುಗಳಲ್ಲಿ ಮರದ ಎಲೆಗಳು, ಜೇನುತುಪ್ಪದಿಂದ ಲೇಪಿತ ಐಸ್ ಕ್ಯೂಬ್‍ಗಳು ಮತ್ತು ಈಗ ಹೊಚ್ಚ ಹೊಸದಾಗಿ ತಯಾರಿಸಲಾದ ಆನೆಯ ಒಣಗಿದ ಲದ್ದಿಯಿಂದ ತಯಾರಿಸಿದ ಸಿಹಿ ತಿನಿಸು ಸೇರಿವೆ. ರೆಸ್ಟೋರೆಂಟ್‍ನಲ್ಲಿನ ಪಾನೀಯಗಳನ್ನು ಹೊರತುಪಡಿಸಿ, ಈ ಆನೆಯ ಒಣಗಿದ ಸಗಣಿಯಿಂದ ಮಾಡಿದ ಸಿಹಿತಿಂಡಿಗೆ ಗ್ರಾಹಕರಿಗೆ 3,888 ಯುವಾನ್ (46,000 ರೂ.) ಶುಲ್ಕ ವಿಧಿಸಲಾಗುತ್ತದೆಯಂತೆ.

ಆನೆಯ ಲದ್ದಿಯ ಸಿಹಿ ಖಾದ್ಯದ ವಿಡಿಯೊ ಇಲ್ಲಿದೆ ನೋಡಿ...



ವರದಿ ಪ್ರಕಾರ, ಈ ರೆಸ್ಟೋರೆಂಟ್‍ನ ಇಬ್ಬರು ಸಂಸ್ಥಾಪಕರಲ್ಲಿ ಒಬ್ಬರು ಚೀನಾದ ಬ್ಲಾಂಗ್ ಜನಾಂಗೀಯ ಗುಂಪಿಗೆ ಸೇರಿದವರು ಮತ್ತು ಇನ್ನೊಬ್ಬರು ಫ್ರಾನ್ಸ್‌ನವರು. ಶಾಂಘೈಗೆ ರೈನ್ ಫಾರೆಸ್ಟ್ ರೆಸ್ಟೋರೆಂಟ್ ಅನ್ನು ತರುವ ಮೊದಲು ಅವರು ಯುನ್ನಾನ್ ಪ್ರಾಂತ್ಯದ ಮಳೆಕಾಡುಗಳಲ್ಲಿ ಏಳು ವರ್ಷಗಳನ್ನು ಕಳೆದಿದ್ದಾರಂತೆ.

ಬ್ಲಾಗರ್ ತನ್ನ ವಿಡಿಯೊದಲ್ಲಿ ಆನೆಯ ಲದ್ದಿಯಿಂದ ಮಾಡಿದ ವಿಶಿಷ್ಟ ಸಿಹಿತಿಂಡಿಯನ್ನು ತೋರಿಸಿದ್ದಲ್ಲದೆ, ಆ ರೆಸ್ಟೋರೆಂಟ್‍ನ ಇನ್ನೂ ಕೆಲವು ವಿಚಿತ್ರ ಕೆಲಸಗಳನ್ನು ರೆಕಾರ್ಡ್ ಮಾಡಿದ್ದಾರೆ. ಅತಿಥಿಗಳು ಪಾಟ್‌ನಲ್ಲಿದ್ದ ಗಿಡದಿಂದ ನೇರವಾಗಿ ಎಲೆಯನ್ನು ಕಿತ್ತು ಸಾಸ್‍ನಲ್ಲಿ ಮುಳುಗಿಸಿ ಹಸಿಯಾಗಿ ತಿಂದಿದ್ದಾರೆ. ಊಟದ ಸಮಯದಲ್ಲಿ, ಅತಿಥಿಗಳಿಗೆ ವಿವಿಧ ಅಸಾಂಪ್ರದಾಯಿಕ ಭಕ್ಷ್ಯಗಳನ್ನು ಬಡಿಸಲಾಯಿತಂತೆ. ಅದರಲ್ಲಿ ಹೆಚ್ಚು ವೈರಲ್‌ ಆದ ಖಾದ್ಯವೆಂದರೆ ಆನೆಯ ಲದ್ದಿಯ ಸಿಹಿ. ಈ ಸಿಹಿತಿಂಡಿಯಲ್ಲಿ ಗಿಡಮೂಲಿಕೆ ಸುಗಂಧ ದ್ರವ್ಯಗಳು, ಹಣ್ಣಿನ ಜಾಮ್‍ಗಳು, ಪರಾಗ ಮತ್ತು ಜೇನು ಸಿರಪ್‍ನಿಂದ ಅಲಂಕರಿಸಲ್ಪಟ್ಟ ಆನೆಯ ಲದ್ದಿ ಬೇಸ್‍ಗಳು ಸೇರಿವೆ.

ಸಸ್ಯದ ನಾರುಗಳು ಆನೆಯ ಲದ್ದಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದನ್ನು ಹೆಚ್ಚಾಗಿ ವಿವಿಧ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ಕಾಗದವನ್ನು ತಯಾರಿಸುವುದರಲ್ಲಿ ಬಸಲಾಗುತ್ತದೆ. ಆದರೆ ಚೀನೀ ರೆಸ್ಟೋರೆಂಟ್‍ಗಳಲ್ಲಿ ಸಿಹಿತಿಂಡಿಗಳಲ್ಲಿ ಬಳಸಲಾಗುತ್ತಿದೆಯಂತೆ.

ಈ ಸುದ್ದಿಯನ್ನೂ ಓದಿ:Viral News: ಹೊರಗೆ ಸಿಗು ನೋಡ್ಕೊಳ್ತೇನೆ... ತನ್ನ ವಿರುದ್ಧ ತೀರ್ಪು ನೀಡಿದ ಜಡ್ಜ್‌ಗೆ ಕಟಕಟೆಯಲ್ಲೇ ನಿಂತು ಕಿಡಿಗೇಡಿಯ ಬೆದರಿಕೆ

ಈ ಅಸಾಂಪ್ರದಾಯಿಕ ಆಹಾರ ಪದಾರ್ಥವು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನು ನೋಡಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. "ಇದು ತುಂಬಾ ಅಸಹ್ಯಕರ ಮತ್ತು ಭಯಾನಕವಾಗಿದೆ" ಎಂದು ಒಬ್ಬರು ಹೇಳಿದ್ದಾರೆ. “ ನಾನು ಯುನ್ನಾನ್ ಪ್ರಾಂತ್ಯದವನು, ಆದರೆ ನಾವು ಇಲ್ಲಿ ಆನೆಯ ಸಗಣಿಯನ್ನು ಸೇವಿಸುವುದಿಲ್ಲ” ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ಶ್ರೀಮಂತರು ಏನು ಬೇಕಾದರೂ ತಿನ್ನಬಹುದು” ಎಂದಿದ್ದಾರೆ.