ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನೆಚ್ಚಿನ ಮಡದಿ ಹುಟ್ಟುಹಬ್ಬಕ್ಕೆ ಮಾರ್ಕ್ ಜುಕರ್‌ಬರ್ಗ್‌ ಕೊಟ್ಟ ಸರ್ಪ್ರೈಸ್‌ ಹೇಗಿತ್ತು ಗೊತ್ತಾ? ವಿಡಿಯೊ ಇಲ್ಲಿದೆ

ಪ‌ತ್ನಿ ಪ್ರಿಸಿಲ್ಲಾ 40ನೇ ಹುಟ್ಟುಹಬ್ಬಕ್ಕೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಹೊಳೆಯುವ ನೀಲಿ ಜಂಪ್‍ಸೂಟ್‍ನಲ್ಲಿ ಕಾಣಿಸಿಕೊಂಡು ಪತ್ನಿಗೆ ಅಚ್ಚರಿ ಮೂಡಿಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

ಪತ್ನಿ ಬರ್ತ್‌ಡೇಗೆ ಸರ್ಪ್ರೈಸ್‌ ಉಡುಗೊರೆ ಕೊಟ್ಟ ಜುಕರ್‌ಬರ್ಗ್‌!

Profile pavithra Mar 3, 2025 4:39 PM

ಪತ್ನಿ ಪ್ರಿಸಿಲ್ಲಾ ಚಾನ್ ಅವರ ಜನ್ಮದಿನದಂದು ಅಚ್ಚರಿಗೊಳಿಸಲು, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌(Mark Zuckerberg) ಬರ್ತ್‌ಡೇ ಪಾರ್ಟಿಯಲ್ಲಿ ಹೊಳೆಯುವ ಜಂಪ್‍ಸೂಟ್ ಧರಿಸಿ ಪತ್ನಿಗೆ ಅಚ್ಚರಿ ಮೂಡಿಸಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಪತ್ನಿ ಪ್ರಿಸಿಲ್ಲಾ 40ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜುಕರ್‌ಬರ್ಗ್‌ ಈ ದಿರಿಸು ಅಲ್ಲಿದ್ದ ಅತಿಥಿಗಳನ್ನು ರಂಜಿಸಿದ್ದಲ್ಲದೇ, ಪತ್ನಿ ಕೂಡ ಅವನನ್ನು ಕಂಡು ಜೋರಾಗಿ ನಕ್ಕಿದ್ದಾಳೆ. ಈ ವಿಡಿಯೊವನ್ನು ಜುಕರ್‌ಬರ್ಗ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೊದಲ್ಲಿ, ಜುಕರ್‌ಬರ್ಗ್‌ ಶುರುವಿನಲ್ಲಿ ಫಾರ್ಮಲ್ ಟಕ್ಸೆಡೋ ಧರಿಸಿ ಬಂದಿದ್ದಾರೆ. ನಂತರ ಅದನ್ನು ಇಬ್ಬರು ನಾಟಕೀಯವಾಗಿ ಹರಿದುಹಾಕಿದಾಗ ಅದರೊಳಗೆ ಎಲ್ಲರ ಕಣ್ಮನ ಸೆಳೆಯುವ ಜಂಪ್‍ಸೂಟ್ ಧರಿಸಿದ್ದರು. ಜುಕರ್‌ಬರ್ಗ್‌ ಅನಿರೀಕ್ಷಿತವಾಗಿ ಡ್ರೆಸ್ ಬದಲಾಯಿಸಿದ್ದು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಈ ವಿಡಿಯೊ ನಿಜವೇ ಅಥವಾ ಎಐ ಕರಾಮತ್ತೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಜುಕರ್‌ಬರ್ಗ್‌ ಹಂಚಿಕೊಂಡಿರುವ ಈ ವಿಡಿಯೊವನ್ನು ಪೋಸ್ಟ್ ಮಾಡಿದಾಗಿನಿಂದ 19.2 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಹಲವಾರು ನೆಟ್ಟಿಗರು ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಜುಕರ್‌ಬರ್ಗ್‌ ತನ್ನ ಪತ್ನಿಯನ್ನು ಪ್ರೀತಿಸುವ ರೀತಿಯಲ್ಲಿ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನನಗೆ ನನ್ನ ಕಣ್ಣುಗಳನ್ನು ನಂಬಲು ಸಾಧ್ಯವಿಲ್ಲ" ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. "ಇದು ಅದ್ಭುತವಾಗಿದೆ! ವಾವ್" ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ನೋಡಲು ಸುಂದರವಾಗಿದೆ" ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ. "ಜುಕ್ 2.0 ವಿಭಿನ್ನವಾಗಿ ಹಿಟ್ ಆಗುತ್ತದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.

ಹಾಗೇ ಸೋಶಿಯಲ್ ಮೀಡಿಯಾದಲ್ಲಿ ತನ್ನ ವಿಶೇಷ ದಿನದ ಕೆಲವು ಪೋಟೊಗಳನ್ನು ಹಂಚಿಕೊಂಡ ಪ್ರಿಸಿಲ್ಲಾ, "ಕುಟುಂಬ, ಸ್ನೇಹಿತರು, ಹಾಗೂ ನಗು ಮತ್ತು ನೃತ್ಯದಿಂದ ತುಂಬಿರುವ ಈ ದಿನ ನಲವತ್ತನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. ಎಲ್ಲರಿಂದ ಇಷ್ಟು ಪ್ರೀತಿ ಪಡೆದ ನಾನು ತುಂಬಾ ಅದೃಷ್ಟಶಾಲಿ." ಎಂದು ಬರೆದಿದ್ದಾಳೆ.

ಈ ಸುದ್ದಿಯನ್ನೂ ಓದಿ:Viral News: 18 ವರ್ಷದ ಹುಟ್ಟುಹಬ್ಬಕ್ಕೆ ಒಂದೇ ದಿನ ಇರುವಾಗಲೇ ಮಗನನ್ನು ಕೊಂದ ಸೈಕೋ ತಾಯಿ!

ಪತ್ನಿ, ಪ್ರೇಯಸಿಯ ಹುಟ್ಟಿದ ಹಬ್ಬಕ್ಕೆ ಕೆಲವರು ಏನೇನೋ ಮಾಡಿದ್ರೆ ಇಲ್ಲೊಬ್ಬಳು ತಾಯಿ ಮಗನನ್ನೇ ಕೊಂದಿದ್ದಾಳೆ.ಇತ್ತೀಚೆಗೆ ಮಿಚಿಗನ್‍ನಲ್ಲಿ ತಾಯಿಯೊಬ್ಬಳು ಹೆತ್ತ ಮಗನನ್ನೇ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಹದಿಹರೆಯದ ಮಗನನ್ನು ಅಪಾರ್ಟ್‍ಮೆಂಟ್‍ನಲ್ಲಿ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಹಾಗಾಗಿ ಆಕೆಯ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಕೊಲೆಯಾದ ಮಗ 17 ವರ್ಷದ ಆಸ್ಟಿನ್ ಪಿಕಾರ್ಟ್ ಆಗಿದ್ದು, ಆತನನ್ನು ಕೊಂದ ತಾಯಿ 39 ವರ್ಷದ ಕೇಟಿ ಲೀ ಎಂದು ಗುರುತಿಸಲಾಗಿದೆ. ಈಕೆ ತನ್ನ ಮಗನಿಗೆ 18 ವರ್ಷ ತುಂಬಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಆತನ ಜೀವ ತೆಗೆದಿದ್ದಾಳೆ.ಮಗನನ್ನು ಕೊಲೆ ಮಾಡಿದ ಸ್ವಲ್ಪ ಸಮಯದ ನಂತರ ಅವಳು ಪೊಲೀಸರಿಗೆ ಕರೆ ಮಾಡಿ ತನ್ನ ಮಗನ ಗಂಟಲನ್ನು ಚಾಕುವಿನಿಂದ ಕತ್ತರಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. 18 ವರ್ಷ ತುಂಬುವ ಮೊದಲು ತನ್ನನ್ನು ಕೊಲ್ಲುವಂತೆ ಮಗ ಕೇಳಿಕೊಂಡಿದ್ದಾನೆ ಹಾಗಾಗಿ ಈ ಕೊಲೆ ಮಾಡಿದ್ದೇನೆ ಎಂದು ಆಕೆ ಹೇಳಿದ್ದಾಳೆ.