Dr Karthik J S Column: ಎಲ್ಲಿದ್ರಿ ಇಲ್ಲಿ ತನಕ ? ಎಲ್ಲಿಂದ ಬಂದಿರಿ !
ಲಾಗಾರ್ ಹೆಡ್ ಆಮೆಯು ಸಾಗರದ ಮೃದ್ವಂಗಿ ಮತ್ತು ಇನ್ನಿತರ ಜಂತುಗಳನ್ನು ತಿಂದರೆ, ಹಸಿರು ಆಮೆ ಕಡಲಕಳೆಯನ್ನು ತಿನ್ನುತ್ತದೆ. ಕಡಲಾಮೆಗಳು ದೀರ್ಘಾಯುಷಿಗಳು. ಅವುಗಳ ರೆಕ್ಕೆಯಾಕಾರದ ಮುಂಗಾಲುಗಳು ಸುಗಮ ಸಂಚಾರಕ್ಕೆ ನೆರವಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಆಲಿವ್ ರಿಡ್ಲೆ ಮತ್ತು ಕೆಂಪ್ಸ್ ರೆಡ್ಲೆ ಕಡಲಾಮೆಗಳು ಕೆಲವು ಕಡಲು ತೀರಗಳಲ್ಲಿ ಒಟ್ಟುಗೂಡಿ, ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡಲು ತೀರಕ್ಕೆ ಬರುತ್ತವೆ

ಕಡಲಾಮೆ

ಡಾ.ಕಾರ್ತಿಕ ಜೆ.ಎಸ್
ಇತ್ತೀಚೆಗೆ ಒಡಿಶಾದಲ್ಲಿ ವಿಶಿಷ್ಟ ವಿದ್ಯಮಾನವೊಂದು ಜರುಗಿತು. ರುಶಿಕುಲ್ಯ ಕಡಲ ಕಿನಾ ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಆಲಿವ್ ರಿಡ್ಲೆ ಪ್ರಭೇದದ ಕಡಲಾಮೆಗಳು ಗೂಡು ಕಟ್ಟಲು ಮತ್ತು ಸಂತಾನೋತ್ಪತ್ತಿ ಮಾಡಲು ಏಕಕಾಲಕ್ಕೆ ಆಗಮಿಸಿದವು. ಅವುಗಳ ರಕ್ಷಣೆಗೆ ಅಲ್ಲಲ್ಲಿ ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದರು. ಪ್ರತಿ ವರ್ಷ ಕಡಲಿನಿಂದ ಬರುವ ಈ ಆಮೆ ಗಳು, ದಡದಲ್ಲಿ ಮೊಟ್ಟೆಯಿಟ್ಟು ಮತ್ತೆ ಕಡಲಿಗೆ ವಾಪಸಾಗುತ್ತವೆ! ಸಮುದ್ರದಲ್ಲೇ ಅವುಗಳ ವಾಸ; ಮೊಟ್ಟೆಯಿಡಲು ಒಡಿಶಾ ಕಡಲ ತೀರಕ್ಕೆ ಬರುತ್ತವೆ! ಇದೊಂದು ಪ್ರಾಕೃತಿಕ ವಿಸ್ಮಯ. ಆಮೆಗಳು ಅತ್ಯಂತ ಹಳೆಯ ಸರೀಸೃಪ ಗುಂಪುಗಳಲ್ಲಿ ಒಂದಾಗಿದೆ, ಅಂದರೆ ಅವು ಹಾವುಗಳು, ಮೊಸಳೆಗಳಿಗಿಂತಲೂ ಹಳೆಯವು.
ಆಮೆಗಳಲ್ಲಿ ಮೂರು ವಿಧಗಳಿವೆ. ಸಂಪೂರ್ಣ ಭೂವಾಸಿಗಳಾಗಿರುವ ‘ಟೋಟರ್ಸ್’ ಗಳು, ನೆಲ ಮತ್ತು ಸಿಹಿನೀರ ನೆಲೆಗಳಿಗೆ ಹೊಂದಿಕೊಂಡಿರುವ ‘ಟೆರ್ರಾಪಿನ್’ ಮತ್ತು ಸದಾ ಕಡಲ ಲ್ಲೇ ನೆಲೆಸಿರುವ ಕಡಲಾಮೆಗಳು. ಜಗತ್ತಿನಲ್ಲಿ ಏಳು ಪ್ರಭೇದದ ಕಡಲಾಮೆಗಳಿವೆ: ಫುಟ್ ಬ್ಯಾಕ್, ಲೆದರ್ ಬ್ಯಾಕ್, ಹಾಕ್ಸ್ ಬಿಲ್, ಲಾಗರ್ ಹೆಡ್, ಆಲಿವ್ ರಿಡ್ಲೆ, ಕೆಂಪ್ಸ್ ರಿಡ್ಲೆ ಮತ್ತು ಹಸಿರು ಕಡಲಾಮೆ ಹಸಿರು ಕಡಲಾಮೆ ಬಿಟ್ಟು ಇನ್ನುಳಿದ ಎಲ್ಲಾ ಕಡಲಾಮೆಗಳು ಮಿಶ್ರಾ ಹಾರಿಗಳು. ಜಲಸಸ್ಯಗಳು, ಸಣ್ಣ ಮೀನು, ಜೆಲ್ಲಿ ಮೀನು, ಏಡಿ ಮೊದಲಾದವುಗಳು ಇವುಗಳ ಪ್ರಿಯ ಆಹಾರ.

ಲಾಗಾರ್ ಹೆಡ್ ಆಮೆಯು ಸಾಗರದ ಮೃದ್ವಂಗಿ ಮತ್ತು ಇನ್ನಿತರ ಜಂತುಗಳನ್ನು ತಿಂದರೆ, ಹಸಿರು ಆಮೆ ಕಡಲಕಳೆಯನ್ನು ತಿನ್ನುತ್ತದೆ. ಕಡಲಾಮೆಗಳು ದೀರ್ಘಾಯುಷಿಗಳು. ಅವುಗಳ ರೆಕ್ಕೆಯಾಕಾರದ ಮುಂಗಾಲುಗಳು ಸುಗಮ ಸಂಚಾರಕ್ಕೆ ನೆರವಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಆಲಿವ್ ರಿಡ್ಲೆ ಮತ್ತು ಕೆಂಪ್ಸ್ ರೆಡ್ಲೆ ಕಡಲಾಮೆಗಳು ಕೆಲವು ಕಡಲು ತೀರಗಳಲ್ಲಿ ಒಟ್ಟುಗೂಡಿ, ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡಲು ತೀರಕ್ಕೆ ಬರುತ್ತವೆ.
ಸಂತಾನೋತ್ಪತ್ತಿ ಮಾಡುವ ಆಮೆಗಳು ಸಾಗರ ತೀರದಲ್ಲಿ 20- 80 ಮೀ. ನೀರಿನ ಅಂಚಿ ನಿಂದ ದೂರ ಸಾಗಿ ರಾತ್ರಿಯ ಸಮಯ ಮರಳಿನಲ್ಲಿ ಹಿಂಗಾಲಿನ ಉದ್ದದಷ್ಟು ಹೂಜಿಯಾ ಕಾರದ ತಗ್ಗು ತೊಡುತ್ತವೆ. ಒಂದೆರಡು ತಾಸುಗಳಲ್ಲಿ 50-200 ರವರೆಗೆ ಮೊಟ್ಟೆಗಳನ್ನಿಡು ತ್ತವೆ . ನಂತರ ಅವುಗಳ ಮೇಲೆ ಹಿಂಗಾಲಿನಿಂದ ಮರಳನ್ನು ಎಳೆದು ಮುಚ್ಚಿ ಮತ್ತೆ ಸಾಗರ ಸೇರುತ್ತವೆ. ಮುಂದೆ ಮೊಟ್ಟೆಗಳು ಬಿಸಿಲ ಕಾವಿಗೆ 2-3 ತಿಂಗಳ ನಂತರ ಒಡೆದು ಮರಿಗಳು ಹೊರ ಬೀಳುತ್ತವೆ.
ಮೊಟ್ಟೆಯೊಡೆದು ಹೊರ ಬಂದ ಮರಿಗಳು ಸಾಗರದ ನೀರನ್ನು ಸೇರಲು, ಅದೇ ದಿಕ್ಕಗೆ ತೆವಳುತ್ತಾ ಸಾಗುತ್ತವೆ. ನೀರಿನತ್ತ ಸಾಗಬೇಕು ಎಂಬುದು ಅವುಗಳ ತುಡಿತ; ಯಾರೂ ಪಾಠ ಹೇಳಿದ್ದಲ್ಲ. ಸಮುದ್ರನವನ್ನು ಸೇರಿ ಸಾವಿರಾರು ಮೈಲಿ ನಷ್ಟು ದೂರ ಈಜಿ ಹೋಗುತ್ತವೆ. ಮುಂದೆ ಸುಮಾರು 15 ವರ್ಷಗಳ ನಂತರ ಪ್ರಬುದ್ಧವಾಗಿ ಮೊಟ್ಟೆ ಇಡಲು ತಾವು ಜನಿಸಿದ ಸ್ಥಳಕ್ಕೇ ಹಿಂದಿರುಗುತ್ತವೆ. ಈ ತಾಯಿ ನೆಲದ ಪ್ರಜ್ಞೆ ಕಡಲಾಮೆ ಗಳಲ್ಲಿ ಉಂಟಾದ ಬಗೆ ವೈಜ್ಞಾನಿಕ ವಿಸ್ಮಯಗಳಲ್ಲೊಂದು!
ವಂಶವಾಹಿನಿಗಳಲ್ಲಿ ನೆನಇನ ಗಣಿ
ಆಮೆಗಳ ವಲಸೆ ಪ್ರಕ್ರಿಯೆ ಒಂದು ಸಂಕೀರ್ಣವಾದ ವಿದ್ಯಮಾನ. ತಮ್ಮ ಜನ್ಮಸ್ಥಳ ನೆನಪಿ ಟ್ಟುಕೊಳ್ಳುವ ಸಾಮರ್ಥ್ಯ ಅವುಗಳ ವಂಶವಾಹಿಗಳಲ್ಲಿ ಅಚ್ಚೊತ್ತಿದೆ. ಕಡಲಾಮೆಗಳು ನೀರಿನ ತಾಪಮಾನ ಮತ್ತು ಲವಣಾಂಶದಲ್ಲಿನ ಸೂಕ್ಷ್ಮ ಬದಲಾವಣೆ ಗಳನ್ನು ಗುರುತಿಸ ಬಲ್ಲವು. ‘ಕಡಲಾಮೆಗಳಿಗೆ ಭೂಮಿಯ ಕಾಂತ ಕ್ಷೇತ್ರವನ್ನು ಗ್ರಹಿಸುವ ವಿಶೇಷ ಸಾಮರ್ಥ್ಯ ವಿದೆ. ಈ ಭೂಕಾಂತೀಯ ಸಂವೇದನಾಶೀಲ ಗುಣ ಅವುಗಳಿಗೆ ತಮ್ಮ ಜನ್ಮಸ್ಥಳವನ್ನು ಗುರು ತಿಸಲು ಮತ್ತು ತೆರಳುವ ದಾರಿಯನ್ನು ಅಂದಾಜಿಸಲು ಸಹಾಯ ಮಾಡುತ್ತದೆ’ ಎಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ.
ಸಮುದ್ರದ ಗಾಳಿ, ಉಬ್ಬರವಿಳಿತ ಮತ್ತು ಸಾಗರ ಪ್ರವಾಹ ಇವುಗಳಿಗೆ ಬಹುದೂರ ವಲಸೆ ಹೋಗಲು ನೆರವಾಗುತ್ತದೆ. ಸಮುದ್ರ ಪರಿಸರ ವ್ಯವಸ್ಥೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಕಡಲಾಮೆಗಳ ಪಾತ್ರ ಪ್ರಮುಖ ವಾದುದು. ಕಡಲಾಮೆಗಳು ಕಡಲಕಳೆಯ ಬೆಳವಣಿಗೆ ಯನ್ನು ನಿಯಂತ್ರಿಸುತ್ತವೆ. ಆ ಮೂಲಕ ಇತರ ಕಡಲ ಸಸ್ಯಗಳ ಬೆಳವಣಿಗೆಗೆ ನೆರವಾಗು ತ್ತದೆ. ಪಾಚಿಗಳ ಬೆಳವಣಿಗೆ ಯನ್ನು ನಿಯಂತ್ರಿಸುವ ಮೂಲಕ, ಹವಳದ ದಿಬ್ಬಗಳ ಆರೋ ಗ್ಯವನ್ನು ಕಾಪಾಡುತ್ತದೆ. ಆವಾಸಸ್ಥಾನದ ನಾಶ, ಮೊಟ್ಟೆ, ಮಾಂಸ ಮತ್ತು ಚಿಪ್ಪಿಗಿರುವ ಬೇಡಿಕೆ, ಅದರಿಂದಾಗಿ ಅಕ್ರಮ ಬೇಟೆ ಮತ್ತು ಇತರ ಮಾಂಸಾಹಾರಿ ಪ್ರಾಣಿಗಳಿಂದ ಅವುಗಳ ಮೇಲಾಗುವ ಹಲ್ಲೆ- ಇವುಗಳಿಂದಾಗಿ ಕಡಲಾಮೆಗಳ ಸಂಖ್ಯೆ ಕುಸಿಯುತ್ತಿದೆ.
ಐ.ಯು.ಸಿ.ಎನ್ ವರದಿ ಪ್ರಕಾರ ಕಡಲಾಮೆಗಳು ಅಳಿವಿನ ಅಪಾಯದಲ್ಲಿರುವ ಜೀವಿಗಳಲ್ಲಿ ಪ್ರಮುಖವಾದವುಗಳು. ಜಗತ್ತಿನಾದ್ಯಂತ ಅನೇಕ ಸಂಘ ಸಂಸ್ಥೆಗಳು ಕಡಲಾಮೆಗಳ ಸಂರ ಕ್ಷಣೆಗೆ ಟೊಂಕಕಟ್ಟಿ ನಿಂತಿವೆ. ಕಡಲಾಮೆಗಳ ಉಳಿವಿಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವಿಶ್ವವಿಖ್ಯಾತ ವಿಜ್ಞಾನಿ ಡಾ. ಆರ್ಚಿಕರ್ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಜೂನ್ 16ರಂದು ‘ವಿಶ್ವ ಕಡಲಾಮೆಗಳ ದಿನ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರಸ್ತುತ ನಮ್ಮ ದೇಶದ ಪರಿಸರ ಮತ್ತು ಅರಣ್ಯ ಸಚಿವಾಲಯ ‘ಕಡಲಾಮೆ ಸಂರಕ್ಷಣೆ ಪ್ರಾಜೆಕ್ಟ್’ ಮೂಲಕ 10 ರಾಜ್ಯಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.