Narada Sanchara: ಹೀಗಿರ್ತಾರೆ ಖತರ್ನಾಕ್‌ಗಳು

Narada Sanchara: ಹೀಗಿರ್ತಾರೆ ಖತರ್ನಾಕ್‌ಗಳು

image-7685429c-1c4f-4b53-8dfd-6e770e5cd9a8.jpg
Profile Ashok Nayak January 13, 2025
ನಾರದ ಸಂಚಾರ ಕಲಹಪ್ರಿಯ ಇದು ‘ಸುಳ್‌ಸುದ್ದಿ’ ಅಲ್ಲ, ದೇಶದ ಉತ್ತರದ ತುದಿಯಿಂದ ಬಂದಿರುವ ‘ಕಳ್‌ಸುದ್ದಿ’! ಅಂದರೆ, ಮೊಬೈಲ್ ಫೋನ್ಕಳ್ಳತನದಲ್ಲಿ ಅಪ್ರಾಪ್ತರನ್ನು ಒಳಗೊಂಡ ದಂಧೆಯ ಸುದ್ದಿ. ದೆಹಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಅಂದ ಹಾಗೆ, ಈ ಕಳ್ಳತನದ ಜಾಲ ಕಾರ್ಯಾಚರಿಸುತ್ತಿದ್ದುದು ಹೀಗೆ: ಈ ‘ಕತ್ತರಿ ಕೆಲಸ’ದ ಮಾಸ್ಟರ್‌ಮೈಂಡ್ ಎನಿಸಿಕೊಂಡಾತ ಜಾರ್ಖಂಡ್ ರಾಜ್ಯದವನಂತೆ. ಈತ ಅಲ್ಲಿನ ಬಾಲಾಪರಾಧಿಗಳಿಗೆ ಆಮಿಷವೊಡ್ಡಿ ದೆಹಲಿಗೆ ಕಳಿಸುತ್ತಿದ್ದನಂತೆ. ಅವರ ಕೆಲಸವೇನು ಗೊತ್ತೇ? ಜನರಿಂದ ತುಂಬಿ ಗಿಜಿಗಿಜಿ ಎನ್ನುತ್ತಿರುವ ಮಾರುಕಟ್ಟೆಗಳು-ಮಾಲ್‌ಗಳು, ರೈಲು-ಬಸ್ ನಿಲ್ದಾಣಗಳಿಗೆ ತೆರಳಿ, ಅಲ್ಲಿ ಅಮಾಯಕರಂತೆ ಓಡಾಡಿಕೊಂಡು, ‘ದುಡ್’ ಇರೋ ‘ದೊಡ್’ ಮನುಷ್ಯರು ತಮ್ಮ ‘ದೊಡ್ಡಸ್ತಿಕೆಯ’ ಸಂಕೇತವಾಗಿಖರೀದಿಸಿ ಜೇಬಿನಲ್ಲಿಟ್ಟುಕೊಂಡಿರೋ ಅತ್ಯಾಧುನಿಕ ಮತ್ತು ಭಾರಿ ಬೆಲೆಬಾಳುವ ಸ್ಮಾರ್ಟ್-ನುಗಳನ್ನು ಕದಿಯೋದು! ಹೀಗೆ ಭಾರಿ ಬೆಲೆಯ ಮಾಲನ್ನು ಆ ಬಾಲಾಪರಾಧಿಗಳು ಕದ್ದರೂ ಅದಕ್ಕೆ ಹೆಚ್ಚವರಿಯಾಗಿ ‘ಬೋನಸ್’ ಏನೂ ಅವರಿಗೆ ಸಿಗುತ್ತಿರಲಿಲ್ಲವಂತೆ; ಬದಲಿಗೆ, ಪ್ರತಿ ಕಳ್ಳತನಕ್ಕೆ ಆ ಮಾಸ್ಟರ್‌ಮೈಂಡ್ ‘ದೊಡ್ಡ ಕಳ್ಳ’ ಕೊಡುತ್ತಿದ್ದುದು ೩,೦೦೦ ರುಪಾಯಿ ಮಾತ್ರವಂತೆ. ಜಾರ್ಖಂಡ್‌ನಿಂದ ದೆಹಲಿಗೆ ರೈಲಿನಲ್ಲಿ ಟಿಕೆಟ್‌ರಹಿತವಾಗಿ ಪಯಣಿಸೋದು, ಬಿಡುವಿಲ್ಲದ ಚಟುವಟಿಕೆಗಳಲ್ಲಿ ವ್ಯಸ್ತವಾಗಿರುವ ಮಾರುಕಟ್ಟೆಗಳನ್ನು ನುಗ್ಗೋದು, ತಮ್ಮ ‘ಕೈಚಳಕ’ವನ್ನು ಮೆರೆದನಂತರ, ಶಿವ ಎಂಬ ಆ ಮಾಸ್ಟರ್‌ಮೈಂಡ್‌ಗೆ ಕದ್ದ ಮಾಲುಗಳನ್ನು ಹಸ್ತಾಂತರಿಸಿ, ಜಾರ್ಖಂಡ್‌ಗೆ ತಣ್ಣಗೆ ಮರಳಿ ಬಿಡೋದು ಈ ಬಾಲಾಪರಾಧಿಗಳ ‘ಕುಕಾರ್ಯ’ಶೈಲಿ ಆಗಿತ್ತಂತೆ. ಎಂತೆಂಥಾ ಖತರ್ನಾಕ್‌ಗಳು ಇರ‍್ತಾರಲ್ವಾ? ‘ಟೆನ್ಷನ್-ಫ್ರೀ’ ಟ್ರಂಪ್! ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಜಾರ್ಥದಲ್ಲಿ ‘ವರ್ಣರಂಜಿತ’ ವ್ಯಕ್ತಿ ಅನ್ನೋದು ನಿಮಗೆ ಗೊತ್ತಿರುವ ಸಂಗತಿಯೇ. ಅದರಲ್ಲೂ ‘ನೀಲಿ’ ಬಣ್ಣವನ್ನು ಒಳಗೊಂಡಿರುವ ವಸ್ತುಗಳೆಂದರೆ, ಅಂದರೆ ನೀಲಿ ಸೂಟು, ನೀಲಿ ಪೆನ್ನು, ನೀಲಿ ಕಾರು, ನೀಲಿ ಚಿತ್ರ… ಇತ್ಯಾದಿಗಳೆಂದರೆ ಅವರಿಗೆ ಶಾನೆ ಇಷ್ಟವಂತೆ ಎಂದೆಲ್ಲಾ ಅವರಿವರು ಬಾಯಿಗೆ ಬಂದಂತೆ ಮಾತಾಡುವುದು ಕಲಹಪ್ರಿಯ ನಾರದರ ಕಿವಿಗೂ ಬಿದ್ದಿದ್ದುಂಟು. ಈ ಮಾತಿಗೆ ಪುಷ್ಟಿ ನೀಡುವಂತೆ, ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆ ವೇಳೆ, “ನಮ್ಮಿಬ್ಬರ ನಡುವಿನ ಲೈಂಗಿಕ ಸಂಬಂಧದಕುರಿತು ಮಾತಾಡ್‌ಬ್ಯಾಡ ಕಣಮ್ಮೀ…" ಅಂತ ಟ್ರಂಪ್ ಮಹಾಶಯರು ನೀಲಿಚಿತ್ರಗಳ ನಟಿಯೊಬ್ಬಳಿಗೆ ಪುಸಲಾಯಿಸಿಹಣವನ್ನೂ ನೀಡಿದ್ದರು ಎಂಬ ಪ್ರಕರಣ ಅವರ ಮೇಲೆ ದಾಖಲಾಗಿದ್ದು ನಿಮಗೆ ಗೊತ್ತು. ಆದರೆ ಇದೀಗ ಬಂದಿರೋಸುದ್ದಿಯ ಪ್ರಕಾರ, ಟ್ರಂಪ್ ಮಹಾಶಯರು ಈ ಪ್ರಕರಣದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆಯಂತೆ. ಕಾರಣ, ಅಲ್ಲಿನ ಮ್ಯಾನ್‌ಹಟನ್ ಕ್ರಿಮಿನಲ್ ಕೋರ್ಟ್‌ನ ನ್ಯಾಯಾಧೀಶರು ಈ ಪ್ರಕರಣದಿಂದ ಟ್ರಂಪ್ ಅವರ ಬೇಷರತ್ ಬಿಡುಗಡೆಯನ್ನು ಘೋಷಿಸಿದ್ದಾರಂತೆ. ಇದರನ್ವಯ, ನಮ್ ಟ್ರಂಪಣ್ಣ ಜೈಲಿಗೂ ಹೋಗಂಗಿಲ್ಲ, ದಂಡವನ್ನೂ ಕಟ್ಟಂಗಿಲ್ಲ ಹೋಗ್ ಅತ್ಲಾಗೆ…! ಜತೆಗೆ ಈ ತೀರ್ಪಿನಿಂದಾಗಿ, ಸದ್ಯದಲ್ಲೇ ನಡೆಯಲಿರುವ ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿ ಟ್ರಂಪಣ್ಣ ನಿರಾಳತೆಯನ್ನೂ ಅನುಭವಿಸಲಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೇ. ಅಟ್ ಲೀಸ್ಟ್, ಅಧಿಕಾರ ಸ್ವೀಕರಿಸಿದ ನಂತರ ಕೂರೋ ಸಿಂಹಾಸನವಾದರೂ ‘ನೀಲಿಬಣ್ಣ’ದಲ್ಲಿ ಇರದಂತೆ ಟ್ರಂಪಣ್ಣ ನೋಡ್ಕೊಂಡ್ರೆ ಸಾಕು ಅನ್ನೋದು ನಾರದರ ಸಜೆಷನ್ನು! ಇದನ್ನೂ ಓದಿ: Raghavendra Jois Column: ಮಾರುಕಟ್ಟೆ ಜಿಗಿತ, ಕರಡಿ ಕುಣಿತ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ