Vishweshwar Bhat Column: ಜಪಾನ್ ಮತ್ತು ಆಟೋಮೊಬೈಲ್
ಜಪಾನ್ ವಿಶ್ವದ ಅತ್ಯಂತ ಉನ್ನತ ದರ್ಜೆಯ ತಂತ್ರಜ್ಞಾನವನ್ನು ಹೊಂದಿದ್ದು, ಈ ತಂತ್ರಜ್ಞಾನ ವನ್ನು ಅಂತಾರಾಷ್ಟ್ರೀಯ ಕಾರು ತಯಾರಕ ಕಂಪನಿಗಳು ಬಳಸಿಕೊಂಡಿರುವುದನ್ನು ಗಮನಿಸ ಬಹುದು
Source : Vishwavani Daily News Paper
ಜಪಾನ್, ಆರ್ಥಿಕತೆಯಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿದ್ದು, ಆಟೋಮೊಬೈಲ್ ಉದ್ಯಮದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
ಜಪಾನ್ ಆಟೋಮೊಬೈಲ್ ತಯಾರಿಕೆಯಲ್ಲಿ ಹೆಸರಾಗಿರುವ ದೇಶವಾಗಿದ್ದು, ಇದರಲ್ಲಿ ಟೊಯೊಟಾ (Toyota), ಹೋಂಡಾ ( Honda), ನಿಸ್ಸಾನ್ ( Nissan), ಸುಜುಕಿ (Suzuki), ಮಜ್ದಾ ( Mazda) ಮುಂತಾದ ಬ್ರಾಂಡ್‌ಗಳು ಪ್ರಖ್ಯಾತವಾಗಿವೆ.
ಆದರೆ, ಈ ದೇಶದಲ್ಲಿ ಅನೇಕ ಅಂತಾರಾಷ್ಟ್ರೀಯ ಕಾರು ಬ್ರಾಂಡ್‌ಗಳು ಸಹ ಜನಪ್ರಿಯವಾಗಿವೆ. ಜಪಾನ್ ವಿಶ್ವದ ಅತ್ಯಂತ ಉನ್ನತ ದರ್ಜೆಯ ತಂತ್ರಜ್ಞಾನವನ್ನು ಹೊಂದಿದ್ದು, ಈ ತಂತ್ರಜ್ಞಾನ ವನ್ನು ಅಂತಾರಾಷ್ಟ್ರೀಯ ಕಾರು ತಯಾರಕ ಕಂಪನಿಗಳು ಬಳಸಿಕೊಂಡಿರುವುದನ್ನು ಗಮನಿಸ ಬಹುದು.
ಸುರಕ್ಷತೆ, ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಿರಂತರ ಆವಿಷ್ಕಾರಗಳು ನಡೆಯುತ್ತಿರುತ್ತವೆ. ಜಪಾನ್ ವಿಶ್ವದ ಮೂರನೇ ಅತಿ ದೊಡ್ಡ ಆಟೋಮೊಬೈಲ್ ಮಾರುಕಟ್ಟೆ ಆಗಿದ್ದು, ಇಲ್ಲಿ ಕೋಟ್ಯಂತರ ಕಾರುಗಳು ಪ್ರತಿವರ್ಷ ಮಾರಾಟವಾಗುತ್ತವೆ. ಈ ಮಾರುಕಟ್ಟೆಯು ಅಂತಾರಾಷ್ಟ್ರೀಯ ಕಂಪನಿಗಳಿಗೆ ಆಕರ್ಷಕವಾಗಿದೆ. ಜಪಾನ್‌ನ ಜನತೆ ತಾಂತ್ರಿಕವಾಗಿ ಸುಧಾರಿತ ಮತ್ತು ಸುಸ್ಥಿರ ವಾಗಿರುವ ಕಾರುಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿದ್ದು, ಇದು ಆಯಾ ಕಂಪನಿಗಳಿಗೆ ಹೊಸ ತಂತ್ರeನ ಮತ್ತು ಮಾದರಿಗಳನ್ನು ಪರಿಚಯಿಸಲು ಸೂಕ್ತವಾದ ತಾಣವಾಗಿದೆ.
ಜಪಾನ್‌ನಲ್ಲಿನ ತಾಂತ್ರಿಕ ಆವಿಷ್ಕಾರಗಳು ಮತ್ತು ಉತ್ಪಾದನಾ ಸುಧಾರಣೆಗಳನ್ನು ಜಗತ್ತಿನ ಪ್ರಮುಖ ಕಂಪನಿಗಳು ಹತ್ತಿರದಿಂದ ಅನುಸರಿಸುತ್ತವೆ. ಉದಾಹರಣೆಗೆ, ಯುರೋಪ್ ಅಥವಾ ಅಮೆರಿಕದ ಬ್ರಾಂಡ್‌ಗಳು ತಮ್ಮ ತಂತ್ರeನವನ್ನು ಬಲಪಡಿಸಲು ಜಪಾನಿ ತಜ್ಞರ ಸಹಾಯ ಪಡೆಯುತ್ತವೆ. ಜಪಾನ್‌ನ ಕಾರುಗಳು ತಮ್ಮ ಗುಣಮಟ್ಟ, ದೀರ್ಘಾವಧಿಯ ನಂಬಿಕೆ ಮತ್ತು ತಂತ್ರಜ್ಞಾನಕ್ಕಾಗಿ ಹೆಸರುವಾಸಿ.
ಜಪಾನ್ ಪರಿಸರಕ್ಕೆ ಹೆಚ್ಚಿನ ಮಹತ್ವ ನೀಡುವ ದೇಶ. ಹೈಬ್ರಿಡ್ ಮತ್ತು ಇಲೆಕ್ಟ್ರಿಕ್ ವಾಹನಗಳಿಗೆ ಇಲ್ಲಿನ ಮಾರುಕಟ್ಟೆ ಹೆಚ್ಚು ಒಲವು ತೋರಿಸುತ್ತದೆ. ಯುರೋಪಿಯನ್ ಮತ್ತು ಅಮೆರಿಕನ್ ಕಾರು ತಯಾರಕರು ತಮ್ಮ ಹೈಬ್ರಿಡ್, ಪ್ಲಗ್ -ಇನ್ ಮತ್ತು ಇಲೆಕ್ಟ್ರಿಕ್ ವಾಹನಗಳನ್ನು ಜಪಾನ್ ಮಾರು ಕಟ್ಟೆಗೆ ಪರಿಚಯಿಸಲು ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ.
ಜಪಾನ್‌ನಂಥ ದೇಶದಲ್ಲಿ ತಮ್ಮ ಬ್ರಾಂಡ್‌ಗೆ ‘ಪರಿಸರ ಸ್ನೇಹಿ’ ಇಮೇಜ್ ನಿರ್ಮಿಸಲು ಇದು ಸೂಕ್ತ
ತಾಣ ಎಂದು ಭಾವಿಸುತ್ತಾರೆ. ಜಪಾನ್ ತನ್ನ ಕಟ್ಟುನಿಟ್ಟಾದ ಗುಣಮಟ್ಟ ಕಾಪಾಡಿಕೊಂಡಿರುವುದು ಗಮನಾರ್ಹ. ಅಲ್ಲಿನ ಕಾರು ತಯಾರಿಕಾ ಕಂಪನಿಗಳು ಜಗತ್ತಿನ ಯಾವುದೇ ದೇಶದ ಕಾರು ತಯಾರಿಕಾ ಕಂಪನಿಗಳ ಜತೆಗೆ ಗುಣಮಟ್ಟದ ಪೈಪೋಟಿಯಲ್ಲಿ ಮೇಲುಗೈ ಸಾಧಿಸುತ್ತಿರುವುದನ್ನು
ಕಾಣಬಹುದು. ಜಪಾನ್ ಆಟೋಮೊಬೈಲ್ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಆದ್ಯತೆ ನೀಡುತ್ತದೆ. ಜಾಗತಿಕ ಬ್ರಾಂಡ್‌ಗಳು ಜಪಾನಿನ ಸ್ಥಳೀಯ ಕಂಪನಿಗಳ ಸಹಕಾರ ಪಡೆದು ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತವೆ. ಉದಾಹರಣೆಗೆ, ಟೊಯೊಟಾ ಮತ್ತು ಮಜ್ದಾ ಕಂಪನಿಗಳು ಕೆಲವೊಮ್ಮೆ ಯುರೋಪಿಯನ್ ಬ್ರಾಂಡ್‌ಗಳೊಂದಿಗೆ ತಾಂತ್ರಿಕ ಸಹಕಾರವನ್ನು ನೀಡುತ್ತಿವೆ. ಆಟೋಮೊಬೈಲ್ ಪ್ರದರ್ಶನಗಳು ಮತ್ತು ತಂತ್ರಜ್ಞಾನ ಮೇಳಗಳನ್ನು ಸಂಘಟಿಸು ವುದರಲ್ಲಿ ಜಪಾನ್ ನಿಸ್ಸೀಮ. ಜಾಗತಿಕ ಮಟ್ಟದ ಟೆಕ್ನೋಲಾಜಿಕಲ್ ಎಕ್ಸ್ಪೊ ಮತ್ತು ಆಟೋ ಮೊಬೈಲ್ ಪ್ರದರ್ಶನಗಳನ್ನು ಕಾಲಕಾಲಕ್ಕೆ ಏರ್ಪಡಿಸಿ ಇಡೀ ವಿಶ್ವವನ್ನು ಆಕರ್ಷಿಸುತ್ತದೆ.
ಟೋಕಿಯೋ ಮೋಟರ್ ಶೋ (Tokyo Motor Show) ಪ್ರಪಂಚದ ಕಾರು ತಯಾರಕರಿಗೆ ಪ್ರಮುಖ ವೇದಿಕೆ. ಇದು ಜಾಗತಿಕ ಕಾರು ತಯಾರಕರಿಗೆ ತಮ್ಮ ಹೊಸ ತಂತ್ರಜ್ಞಾನ ಮತ್ತು ವಿನ್ಯಾಸ ಗಳನ್ನು ಪರಿಚಯಿಸಲು ಸೂಕ್ತ ಅವಕಾಶ ಒದಗಿಸುತ್ತದೆ. ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಹೋಂಡಾ, ನಿಸ್ಸಾನ್ ಮತ್ತು ಮಿಟ್ಸುಬಿಷಿ ಕಂಪನಿಗಳು ತಾವು ಒಂದಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿವೆ.
ಈ ವರ್ಷದ ಆಗ ಹೊತ್ತಿಗೆ ಈ ಮೂರು ಕಂಪನಿಗಳು ಸೇರಿ ಒಂದಾಗುತ್ತಿವೆ. ಇವು ಮೂರೂ ಸೇರಿದರೆ, ವಿಶ್ವದ ಮೂರನೇ ಅತಿ ದೊಡ್ಡ ಆಟೋಮೊಬೈಲ್ ತಯಾರಿಕಾ ಘಟಕವಾಗಲಿದೆ. ಜಪಾನ್ ಮತ್ತು ಆಟೋಮೊಬೈಲ್ ಅನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.