Friday, 13th December 2024

ಬಿಯರ್, ಕಾಫಿ: ಯಾವುದು, ಯಾವಾಗ, ಎಷ್ಟು ಹಿತ?

ಎಚ್ಚರದ ಅವಸ್ಥೆೆಯಲ್ಲಿ ನಮ್ಮ ಎಲ್ಲ ಯೋಚನೆ, ಭಾಷೆ ಹಾಗೂ ಒಡನಾಟವನ್ನು ನಿಯಂತ್ರಿಿಸುವುದೇ ಮಿದುಳಿನ ಬಹು ದೊಡ್ಡ ಭಾಗವಾದ ಸೆರೆಬ್ರಲ್ ಕಾರ್ಟೆಕ್‌ಸ್‌. ಬಿಯರ್ ಮತ್ತು ಕಾಫಿ ಸೇವನೆ ಅದರ ಮೇಲೆ ಹೇಗೆ ಪರಿಣಾಮ ಬೀರುತ್ತವೆಂದರೆ,
ಬಿಯರ್
* ಸೇವನೆಯ ನಂತರ ಸಾಮಾನ್ಯವಾಗಿ ಇರುವ ಎಲ್ಲ ಯೋಚನೆಗಳಿಂದ ಮಿದುಳನ್ನು ಮುಕ್ತಗೊಳಿಸುತ್ತದೆ.
* 0.07 ಮದ್ಯದ ಪ್ರಮಾಣ (ಸುಮಾರು ಎರಡು ಡ್ರಿಿಂಕ್‌ಗಳಲ್ಲಿ ಇರುವ) ರಕ್ತ ಸೇರುತ್ತಲೇ ಸೃಜನಾತ್ಮಕತೆ ಅಧಿಕಗೊಳ್ಳುತ್ತದೆ.
* ಸುತ್ತಲಿನ ಪ್ರಪಂಚ ಮರೆತು ನಿರ್ಯೋಚನೆಯಿಂದ ಇರುವುದು ಮಿದುಳಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುತ್ತದೆ.
* ಎರಡು ಡ್ರಿಿಂಕ್ ಸೇವಿಸುವುದು ಗಮನ ಕೇಂದ್ರೀಕರಿಸುವಿಕೆಗೆ ಭಂಗ ತಂದು ಜ್ಞಾಾಪಕ ಶಕ್ತಿಿ ಕುಂದುವಂತೆ ಮಾಡುತ್ತದೆ.

ಕಾಫಿ
* ಸೆರೆಬ್ರಲ್ ಕಾರ್ಟೆಕ್‌ಸ್‌‌ನಲ್ಲಿ ಇರುವ ಅಡಿನೋಸಿನ್ ಮತ್ತು ಅದರ ರಿಸೆಪ್ಟಾಾರ್ ಸಂಯೋಗ ಹೊಂದಿದಾಗ ನಮಗೆ ನಿದ್ದೆೆ ಬಂದಂತಾಗುತ್ತದೆ. ಆದರೆ, ಕಾಫಿ ಕುಡಿದಾಗ ಅಡಿನೋಸಿನ್, ರಿಸೆಪ್ಟಾಾರ್ ಬದಲಿಗೆ ಕಾಫಿಯಲ್ಲಿರುವ ಕೆಫೀನ್ ಜತೆ ಸಂಯೋಗಗೊಳ್ಳುವುದರಿಂದ ನಿದ್ದೆೆ ಹೋಗುತ್ತದೆ.
* ಕೆಫೀನ್ ಕೆಲಸ ಮಾಡುವುದು ಕಾಫಿ ಕುಡಿದ ಐದು ನಿಮಿಷಗಳ ನಂತರ. ಹೆಚ್ಚು ಶಕ್ತಿಿ, ಗಮನ ಕೇಂದ್ರೀಕರಿಸುವಿಕೆ ಆಗ ಸಾಧ್ಯ.
* ಅದಾಗಲೇ ಶುರು ಮಾಡಿದ್ದ ಕೆಲಸವನ್ನು ಚುರುಕಾಗಿ ಮಾಡಿ ಮುಗಿಸಲು ಕಾಫಿ ಸೇವನೆ ಸಹಕಾರಿ.
* ಪದೇಪದೆ, ಅದೆಷ್ಟೇ ಕಡಿಮೆ ಪ್ರಮಾಣದಲ್ಲಿ ಕುಡಿದರೂ, ದೇಹ ಅದಕ್ಕೆೆ ಸಹಿಷ್ಣುತೆ ಬೆಳೆಸಿಕೊಳ್ಳುವುದರಿಂದ ಪ್ರತಿ ಮುಂದಿನ ಸಾರಿ, ಅಷ್ಟೇ ಪ್ರಚೋದನೆ ಸಿಗಲು ಹೆಚ್ಚೆೆಚ್ಚು ಕಾಫಿ ಕುಡಿಯಬೇಕಾಗುತ್ತದೆ.