Friday, 18th October 2024

ಪದವೀಧರ ಶಿಕ್ಷಕರ ಸಮಸ್ಯೆ ಶೀಘ್ರ ಪರಿಹಾರ ಕಾಣಲಿ

ರಾಜ್ಯದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್‌ಟಿ) ಹುದ್ದೆಗಳಿಗೆ ಆಯ್ಕೆಯಾದ ೧,೩೦೦ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಅತಂತ್ರ ವಾಗಿದೆ. ಹಿಂದಿನ ಸರ್ಕಾರ ಮಾರ್ಚ್ ೨೦೨೨ರಲ್ಲಿ ರಾಜ್ಯಾದ್ಯಂತ ಜಿಪಿಎಸ್‌ಟಿ ಹುzಗಳಿಗೆ ಅರ್ಜಿ ಆಹ್ವಾನಿಸುವ ಮೂಲಕ ನೇಮಕ ಪ್ರಕ್ರಿಯೆ ಪ್ರಾರಂಭ ವಾಗಿತ್ತು.

ಮೇನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದು, ೧೩,೩೫೨ ಅಭ್ಯರ್ಥಿಗಳನ್ನು ಒಳಗೊಂಡ ಅಂತಿಮ ಆಯ್ಕೆ ಪಟ್ಟಿಯನ್ನು ಮಾರ್ಚ್ ೨೦೨೩ರಲ್ಲಿ ಪ್ರಕಟಿಸ ಲಾಗಿತ್ತು. ಹೊಸ ಸರಕಾರ ಬಂದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‌ಗೆ ಕರೆದು, ಅದಕ್ಕೆ ಅನುಗುಣ ಪೋಸ್ಟಿಂಗ್‌ಗಳನ್ನು ನಿಗದಿಪಡಿಸ ಲಾಗಿದೆ. ಆದರೂ, ‘ಸಿಂಧುತ್ವ ಪ್ರಮಾಣಪತ್ರ’ ನಿಯಮ ಇದೀಗ ಅನೇಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ೧,೩೦೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಅಗತ್ಯ ದಾಖಲಾತಿ ಪಡೆಯಲು ಪರದಾಡಿದ್ದಾರೆ. ಏತನಧ್ಯೆ, ವಿವಾಹಿತ ಮಹಿಳೆಯರು ತಮ್ಮ ಸಂಗಾತಿಯ ಬದಲಿಗೆ ತಂದೆಯ ಜಾತಿ- ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಆಯ್ಕೆಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿದೆ.

ಸುಪ್ರೀಂ ಕೋರ್ಟ್ ಇತ್ತೀಚೆಗೆ ತನ್ನ ತಡೆಯಾe ಮಾರ್ಪಡಿಸಿ ಕರ್ನಾಟಕ ಸರ್ಕಾರಕ್ಕೆ ೧೧,೪೯೪ ಪದವೀಧರ ಪ್ರಾಥಮಿಕ ಶಿಕ್ಷಕರನ್ನು ನೇಮಿಸಲು ಅನುಮತಿ ನೀಡಿತು ಮತ್ತು ವಿವಾಹಿತ ಮಹಿಳಾ ಅಭ್ಯರ್ಥಿಗಳು ತಮ್ಮ ಪೋಷಕರ ಆದಾಯ ಮತ್ತು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ನೇಮಕಕ್ಕೆ ಅರ್ಹತೆ ಹೊಂದಿಲ್ಲದಿದ್ದರೆ ಅವರ ಒಟ್ಟಾರೆ ಅರ್ಹತೆಯ ಆಧಾರದ ಮೇಲೆ ಸಾಮಾನ್ಯ ಅರ್ಹತೆಯ ವರ್ಗದಡಿ ಪರಿಗಣಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆ ಯಲ್ಲಿ ಖಾಸಗಿ ನೌಕರಿ ತೊರೆದು ಸರಕಾರಿ ನೌಕರಿಯ ನಿರೀಕ್ಷೆಂiಲ್ಲಿದ್ದವರಿಗೆ ಇನ್ನೂ ಆದೇಶದ ಪ್ರತಿ ಸಿಕ್ಕಿಲ್ಲ. ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾದ ಉಲ್ಲೇಖವಿಲ್ಲ ಎಂಬ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ. ಹೀಗಾಗಿ ಅಂಥವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸ್ಥಿರ ಉದ್ಯೋಗ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರ ಆಕಾಂಕ್ಷೆಗಳು ಅಧಿಕಾರಶಾಹಿ ಅಡೆತಡೆಗಳು ಮತ್ತು ಕಾನೂನು ತೊಡಕುಗಳಿಂದ ಮುಚ್ಚಿಹೋಗಿವೆ, ಅವರ ದುಃಸ್ಥಿತಿ ಯನ್ನು ನಿವಾರಿಸಲು ತ್ವರಿತ ಪರಿಹಾರದ ಅಗತ್ಯವಿದೆ.