Tuesday, 5th November 2024

ಮೌಢ್ಯ ಆಚರಣೆಗೆ ಮೊರೆ ಹೋದ ಜನ

ಕರೋನ ಆತಂಕಕ್ಕೆ ಹೆದರಿ ಗ್ರಾಮ ರಕ್ಷಣೆಗೆ ಕಲ್ಲಿಗೆ ಪೂಜೆ ಸಲ್ಲಿಸಿದ ಘಟನೆಗೆ ಸಾಕ್ಷಿಯಾಗಿದೆ ಗಡಿ ಪ್ರಾಂತ್ಯ

ಪಾವಗಡ : ತಾಲೂಕಿನ ಇತ್ತೀಚಿಗೆ ಕರೋನ ರುದ್ರಾವತಾರ ತಾಂಡವಾಡು ತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರು ಮೌಡ್ಯದ ಮೂರೆ ಹೋಗಿದ್ದಾರೆ.

ಈಗಾಗಲೇ ಕರೋನ ದಿಂದ ರಕ್ಷಣೆ ಪಡೆಯಲು ಹಲವು ತರಹದ ಮಾರ್ಗಗಳು ಸಾರ್ವಜನಿಕ ಜಾಲತಾಣ ಗಳಲ್ಲಿ. ವಾಟ್ಸ್ ಆಪ್ ಗಳಲ್ಲಿ. ಮಾಬೆಲ್‌ ಗಳಲ್ಲಿ ನೋಡುತ್ತಿದ್ದವೆ ಅದರೆ ಇವೆಲ್ಲವೂ ಹೊರತು ಪಡಿಸಿ ಇಲ್ಲೊಂದು ಗ್ರಾಮದಲ್ಲಿ ವಿಶೇಷವಾಗಿ ಪೂಜೆಯ ಮಾರ್ಗಕ್ಕೆ ಮುಂದಾಗಿದ್ದಾರೆ.

ಕೆ.ರಾಂಪುರ ಗ್ರಾಮಸ್ಥರು ಮಹಾಮಾರಿ ಕರೋನ ತಮ್ಮ ಗ್ರಾಮಮಕ್ಕೆ ಬಾರದಿ ರಲಿ ಎಂದು ಪ್ರಾರ್ಥಿಸಿ ಗ್ರಾಮ ರಕ್ಷಣಾ ಕಲ್ಲಿಗೆ ಪೂಜೆ ಸಲ್ಲಿಸಿದ್ದಾರೆ. ಒಂದು ವೇಳೆ ಗ್ರಾಮಕ್ಕೆ ಕರೋನ ಪ್ರವೇಶಿಸಿದರೂ ಯಾವುದೇ ರೀತಿಯ ಸಾವು-ನೋವು ಆಗಬಾರದೆಂದು ಬೇಡಿ ಕೊಂಡು ಪ್ರಕೃತಿ ಮೊರೆ ಹೋಗಿ ದ್ದಾರೆ.

ಈ ಹಿಂದೆ ಕೆ.ರಾಮಪುರ ಗ್ರಾಮದಲ್ಲಿ ಮಾರಣಾಂತಿಕ ರೋಗಗಳು ಪ್ರಕೃತಿ ವಿಕೋಪಗಳು ನಡೆದಿದ್ದಾಗ ಸಾವು- ನೋವು ಉಂಟಾಗ ದಂತೆ ಗ್ರಾಮ ರಕ್ಷಣಾ ಕಲ್ಲಿಗೆ ಪೂಜೆ ಮಾಡುವುದು ವಾಡಿಕೆ. ಹೀಗಾಗಿ ಗ್ರಾಮದ ಸಮೀಪದ ಹನುಮಾನ್ ಬೆಟ್ಟದಲ್ಲಿನ ಗ್ರಾಮ ರಕ್ಷಣಾ ಕಲ್ಲಿಗೆ 101 ಬಿಂದಿಗೆ ನೀರು ಹಾಗೂ 101 ನಿಂಬೆಕಾಯಿ ಇಟ್ಟಿ ಪೂಜೆ ಸಲ್ಲಿಸಲಾಯಿತು.ಹೀಗೆ ಈ ಹಿಂದೆ ಪೂಜೆ ಸಲ್ಲಿಸಿದ ರಿಂದ ಗ್ರಾಮಕ್ಕೆ ಯಾವುದೇ ರೀತಿಯ ಕಾಯಿಲೆಗಳು ಬಂದಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆ ಇದೆ.

ಹನುಮ ಬೆಟ್ಟದ ಅಕ್ಕಮ್ಮ ದೇವಿ ದೂಣೆಯಲ್ಲಿನ ನೀರು ತಂದು ಮನೆ ಮನೆಯ ಮುಂದೆ ಚಲ್ಲಿದರೆ ಯಾವುದೇ ತರಹದ ರೋಗ ಗಳು ಹರಡುವುದಿಲ್ಲ ಎಂಬುದು ಇಲ್ಲಿನ ಗ್ರಾಮದ ಜನರ ನಂಬಿಕೆ. ಅದೆ ತರಹವೇ ಕರೋನ ಮಹಾಮಾರಿ ರೋಗವು ತಡೆಯಲು ಈ ಗ್ರಾಮದಲ್ಲಿ ಪೂಜೆ ಮಾಡಲಾಗಿದೆ ಎಂಬುದು ಜನರು ತಿಳಿಸಿದ್ದಾರೆ.