‘ಕಾರ್ಟೋಸ್ಯಾಾಟ್-3’ಯನ್ನು ಭೂಕಕ್ಷೆೆಗೆ ಕಳುಹಿಸುವ ಮೂಲಕ ಸಿಹಿ ಸಂಗತಿಯನ್ನು ಪ್ರಕಟಿಸಿದೆ. ಮೂರನೇ ತಲೆಮಾರಿನ ಉಪಗ್ರಹವಾಗಿರುವ ಕಾರ್ಟೋಸ್ಯಾಾಟ್-3 ಅರ್ತ್ ಇಮೇಜಿಂಗ್ ಮತ್ತು ಮ್ಯಾಾಪಿಂಗ್‌ನ ಕಾರ್ಯ ನಿರ್ವಹಿಸುತ್ತದೆ. ಭೂವೀಕ್ಷಣೆಯ ಉಪಗ್ರಹವಾದ ಇದು ಅತ್ಯುನ್ನತ ರೆಸಲ್ಯೂಷನ್ ಫೋಟೋ ತಂತ್ರಜ್ಞಾನವನ್ನು ಹೊಂದಿದೆ.
ಭೂವೀಕ್ಷಣೆ ಉಪಗ್ರಹವಾದ ಕಾರ್ಟೋಸ್ಯಾಾಟ್-3 (ಇಅ್ಕಖಅ-3) ಹಾಗೂ ಇತರ 13 ಸಣ್ಣ ಉಪಗ್ರಹಗಳನ್ನು ಇಸ್ರೋೋ ಸಂಸ್ಥೆೆ
ಬುಧವಾರದಂದು ಉಡಾವಣೆಗೊಳಿಸಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಾಕಾಶ ಕೇಂದ್ರದಿಂದ ಪಿಎಸ್‌ಎಲ್ವಿ-ಸಿ47 ರಾಕೆಟ್ ಮೂಲಕ ಈ 14 ಉಪಗ್ರಹಗಳನ್ನು ಆಗಸಕ್ಕೆೆ ಕಳುಹಿಸಲಾಗಿದ್ದು, ನ.27ರಂದು ಬೆಳಗ್ಗೆೆ 9.28ಕ್ಕೆೆ ಉಪಗ್ರಹಗಳನ್ನು ಹೊತ್ತ ರಾಕೆಟ್ ನಭಕ್ಕೆೆ ಹಾರಿದ್ದು, ಈ ಎಲ್ಲಾ ಉಪಗ್ರಹಗಳು ತಮ್ಮ ನಿಗದಿತ ಭೂಕಕ್ಷೆಗೆ ಯಶಸ್ವಿಿಯಾಗಿ ಸೇರಿಕೊಂಡಿವೆ ಎಂದು ಇಸ್ರೋೋ ಸಂಸ್ಥೆೆ ತಿಳಿಸಿದೆ.ಈ ಬೆಳವಣಿಗೆ ವಿಜ್ಞಾಾನಿಗಳ ಆತ್ಮಸ್ಥೈಯರ್ಯಕ್ಕೆೆ ಸಾಕ್ಷಿಿಯಾಗಿದೆ.
ಈ ಹಿಂದೆ ಚಂದ್ರಯಾನ 2 ಯಶಸ್ವಿಿಯಾಗುವ ನಿರೀಕ್ಷೆಯಲ್ಲಿ ಇಡೀ ದೇಶವೇ ಕುತೂಹಲದಿಂದ ರಾತ್ರಿಿಯಿಡಿ ಕಾದು ಕುಳಿತಿತ್ತು. ಚಂದ್ರನ ದಕ್ಷಿಣ ಧ್ರುವಕ್ಕೆೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾಾತಿಗೆ ಭಾರತ ಪಾತ್ರವಾಗುವುದರಲ್ಲಿತ್ತು. ಆದರೆ, ಚಂದ್ರನ ಮೇಲೆ ಇಳಿಯಬೇಕಾಗಿದ್ದ ವಿಕ್ರಮ್ ಲ್ಯಾಾಂಡರ್ ಕೊನೇ ಕ್ಷಣದಲ್ಲಿ ಸಂವಹನ ಕಳೆದುಕೊಂಡಿದ್ದರಿಂದ ಇಸ್ರೋೋ ವಿಜ್ಞಾನಿಗಳು ಸೇರಿದಂತೆ ದೇಶದ ಜನರು ಕೂಡ ನಿರಾಸೆಗೊಳಗಾಗಿದ್ದರು.
ಇಂತಹ ಸಂದರ್ಭದಲ್ಲಿ ಭಾವುಕರಾಗಿದ್ದ ಇಸ್ರೋೋ ಅಧ್ಯಕ್ಷ ಕೆ. ಶಿವನ್ ಅವರನ್ನು ಪ್ರಧಾನಿ ತಬ್ಬಿಿ ಹಿಡಿದು ಸಾಂತ್ವನ ನೀಡಿದ್ದರು. ಈ ಬೆಳವಣಿಗೆಯುವಿಜ್ಞಾಾನಿಗಳಲ್ಲಿ ಹೊಸ ಚೈನತ್ಯ ಮೂಡಿಸುವುದರ ಜತೆಗೆ, ಭಾರತೀಯರಿಗೆ ವಿಜ್ಞಾಾನಿಗಳ ಸವಾಲು ಮತ್ತು ಸಮಸ್ಯೆೆಗಳ ಬಗ್ಗೆೆ ಅರಿವುಮೂಡಲು ಸಹ ಕಾರಣವಾಗಿತ್ತು.
ಚಂದ್ರಯಾನ-2ನ್ನು ಭಾರತೀಯರೆಲ್ಲ ಕುತೂಹಲದಿಂದ ನಾವೆಲ್ಲ ಎದುರುನೋಡುತ್ತಿಿದ್ದರೆ, ಇದನ್ನು ಸಿದ್ಧಪಡಿಸಲು ಸಂಸ್ಥೆೆ ಅನೇಕ ಸವಾಲುಗಳನ್ನು ಎದುರಿಸಿತ್ತು. 978 ಕೋಟಿ ರುಪಾಯಿ ವೆಚ್ಚದಲ್ಲಿ ಆರಂಭಿಸಿದ್ದ ಯೋಜನೆ ಇದು. ಭಾರತ ಹಾಗೂ ರಷ್ಯಾಾ 2007ರಲ್ಲಿ ಚಂದ್ರಯಾನ 2 ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್ ಹಾಗೂ ರೋವರ್ ಸಿದ್ಧಪಡಿಸುವ ಜವಾಬ್ದಾಾರಿ ಪಡೆದಿದ್ದರೆ, ರಷ್ಯಾಾ ಲ್ಯಾಾಂಡರ್ ನೀಡುವುದಾಗಿ ಒಪ್ಪಂದದಲ್ಲಿ ತಿಳಿಸಿತ್ತು. ಆಗಸ್‌ಟ್ 2009ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ರಷ್ಯಾಾ ಲ್ಯಾಾಂಡರ್ ನೀಡಲು ವಿಳಂಬ ಮಾಡಿದ್ದರಿಂದ 2013ಕ್ಕೆೆ ಯೋಜನೆಯನ್ನು ಮುಂದೂಡಲಾಗಿತ್ತು. ನಂತರ 2016ಕ್ಕೆೆ ಯೋಜನೆಯನ್ನು ನಿಗದಿ ಮಾಡಲಾಗಿತ್ತು. ಕೊನೆಗೆ ರಷ್ಯಾಾ ಲ್ಯಾಾಂಡರ್ ನೀಡಲು ವಿಫಲವಾದ್ದರಿಂದ ಭಾರತವೇ ಅದನ್ನು ಸಿದ್ಧಪಡಿಸಿತ್ತು. ಒಂದು ಸಣ್ಣ ವಿಫಲತೆಯ ಪರಿಣಾಮವಾಗಿ ವಿಜ್ಞಾಾನಿಗಳ ಬಹಳಷ್ಟು ಶ್ರಮ ಮರೆಯಾಗಿತ್ತು.
ಇಂತಹದೊಂದು ಘಟನೆ ನಡೆದು ಎರಡು ತಿಂಗಳು ಕಳೆಯುವುದರೊಳಗಾಗಿ ಇಸ್ರೋೋ ‘ಕಾರ್ಟೋಸ್ಯಾಾಟ್-3’ಯನ್ನು ಭೂಕಕ್ಷೆೆಗೆ ಕಳುಹಿಸುವ ಮೂಲಕ ಸಿಹಿ ಸಂಗತಿಯನ್ನು ಪ್ರಕಟಿಸಿದೆ. ಮೂರನೇ ತಲೆಮಾರಿನ ಉಪಗ್ರಹವಾಗಿರುವ ಕಾರ್ಟೋಸ್ಯಾಾಟ್-3 ಅರ್ತ್ ಇಮೇಜಿಂಗ್ ಮತ್ತು ಮ್ಯಾಾಪಿಂಗ್‌ನ ಕಾರ್ಯ ನಿರ್ವಹಿಸುತ್ತದೆ. ಭೂವೀಕ್ಷಣೆಯ ಉಪಗ್ರಹವಾದ ಇದು ಅತ್ಯುನ್ನತ ರೆಸಲ್ಯೂಷನ್ ಫೋಟೋ ತಂತ್ರಜ್ಞಾನವನ್ನು ಹೊಂದಿದೆ. ಈ ಉಪಗ್ರಹಗಳನ್ನು ಪಿಎಸ್‌ಎಲ್ವಿ-ಸಿ47 ರಾಕೆಟ್ ಹೊತ್ತೊೊಯ್ದಿಿದ್ದು, ಇಸ್ರೋೋದ ಅತ್ಯಂತ ನಂಬುಗೆಯ ರಾಕೆಟ್‌ಗಳಲ್ಲಿ ಇದೂ ಒಂದಾಗಿದೆ. ಉಡಾವಣೆಗೊಂಡ 17 ನಿಮಿಷ 46 ಸೆಕೆಂಡ್‌ಗಳಲ್ಲಿ ಕಾರ್ಟೊಸ್ಯಾಾಟ್-3 ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಿಯಾಗಿದ್ದು, ಇದು ಭಾರತದ ಅತ್ಯಂತ ಸಂಕೀರ್ಣ ಮತ್ತು ಸುಧಾರಿತ ಭೂವೀಕ್ಷಣೆಯ ಉಪಗ್ರಹವಾಗಿದೆ.