Kiran Upadhyay Column: ದೂರಕೆ ಹಕ್ಕಿಯು ಹಾರುತಿದೆ, ನೋಡಿದಿರಾ ?

ವಿಮಾನದ ಮಹಿಮೆಯೇ ಹಾಗೆ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬನಿಗೂ ವಿಮಾನ ವೆಂದರೆ ಕೌತುಕ, ಉಸ, ಸಂತಸ. ಆದ್ದರಿಂದಲೇ ದೂರದ ಬಾನಿನಲ್ಲಿ ವಿಮಾನದ ಸದ್ದು ಕೇಳಿದರೆ ಸಾಕು, ಮನೆಯಿಂದ ಹೊರಗೆ ಓಡಿ ಬಂದು ಕಣ್ಣಿಗೆ ಕಾಣುವ ಸಣ್ಣ ವಿಮಾನದೆಡೆಗೆ ಕೈಬೀಸುವ ಮಕ್ಕಳನ್ನು ಇಂದಿಗೂ ಕಾಣಬಹುದು

Kira Upadhyay Column 030225

ವಿದೇಶವಾಸಿ

ಕಿರಣ್‌ ಉಪಾಧ್ಯಾಯ ಬಹ್ರೈನ್‌

dhyapaa@gmail.com

ವಿಮಾನದ ಕಲ್ಪನೆ ನಮಗೆ ಹೊಸದಲ್ಲ, ನಮ್ಮ ಪುರಾಣದಲ್ಲಿ, ಕಥೆಗಳಲ್ಲಿ ಈ ರೀತಿಯ ವಿಮಾನ ಗಳು ಸಾಕಷ್ಟು ಸಲ ಬಂದು ಹೋಗಿವೆ. ದೇವೇಂದ್ರನಂಥ ದೇವತೆಗಳು, ರಾವಣ ನಂಥ ರಾಕ್ಷಸರು ಬಾನ ಮಾರ್ಗದಲ್ಲಿ ವಿಮಾನಯಾನ ಮಾಡಿದ ಕಥೆಗಳು ಎಲ್ಲರಿಗೂ ಗೊತ್ತು. ಅಂಥ ಮಾಯಾ ಲೋಕದ ಕನಸನ್ನು ವಾಸ್ತವಿಕತೆಗೆ ಇಳಿಸಿದವರು ಅಮೆರಿಕದ ಆರ್ವಿಲ್ ಮತ್ತು ವಿಲ್ಬರ್ ರೈಟ್ ಸಹೋದರರು. ವಿಮಾನಯಾನ ಇಲ್ಲವಾಗಿದ್ದರೆ ಇಂದೂ ದಿನಗಟ್ಟಲೆ, ತಿಂಗಳುಗಟ್ಟಲೆ ಪ್ರಯಾಣ ಮಾಡಬೇಕಾಗುತ್ತಿತ್ತು. ಇಂದು ವಿಮಾನಯಾನ ವಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಕಷ್ಟ.

ಒಂದು ಮಾತಿದೆ, “ಒಮ್ಮೆ ನಿಮಗೆ ಹಾರಾಟದ ಅನುಭವವಾದರೆ ಸಾಕು, ಮುಂದೆ ನೆಲದ ಮೇಲೆ ನಡೆ ಯುತ್ತಿದ್ದರೂ ನಿಮ್ಮ ಕಣ್ಣು ಆಗಾಗ ಆಕಾಶ ನೋಡುತ್ತಿರುತ್ತದೆ, ಏಕೆಂದರೆ ನೀವು ಮತ್ತೆ ಮತ್ತೆ ಹಾರಲು ಬಯಸುತ್ತೀರಿ" ಅಂತ. ಇದು ಸತ್ಯ. ಕೆಲವರಿಗೆ ಮೊದಲ ಬಾರಿಯ ವಿಮಾನಯಾನವೆಂದರೆ ಭಯ, ಆತಂಕಗಳಿದ್ದರೂ, ಅದು ಮೊದಲನೆಯ ಪ್ರಯಾಣಕ್ಕೆ ಮಾತ್ರ ಸೀಮಿತ.

ವಿಮಾನದ ಮಹಿಮೆಯೇ ಹಾಗೆ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬನಿಗೂ ವಿಮಾನ ವೆಂದರೆ ಕೌತುಕ, ಉಸ, ಸಂತಸ. ಆದ್ದರಿಂದಲೇ ದೂರದ ಬಾನಿನಲ್ಲಿ ವಿಮಾನದ ಸದ್ದು ಕೇಳಿದರೆ ಸಾಕು, ಮನೆಯಿಂದ ಹೊರಗೆ ಓಡಿ ಬಂದು ಕಣ್ಣಿಗೆ ಕಾಣುವ ಸಣ್ಣ ವಿಮಾನದೆಡೆಗೆ ಕೈಬೀಸುವ ಮಕ್ಕಳನ್ನು ಇಂದಿಗೂ ಕಾಣಬಹುದು.

ಇದನ್ನೂ ಓದಿ: Kiran Upadhyay Column: ಇದು ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡು

ನೂರಾರು ಬಾರಿ ವಿಮಾನದಲ್ಲಿ ಓಡಾಡಿದವನೂ ಆಕಾಶದಂದು ವಿಮಾನ ಹಾರುವಾಗ ನೋಡದೇ ಇರಲಾರ. ಇದು ಲೋಹದ, ಯಂತ್ರದ ಹಕ್ಕಿಯ ಎಳೆತ-ಸೆಳೆತ. ವಿಮಾನದ ಕಲ್ಪನೆ ನಮಗೆ ಹೊಸ ದಲ್ಲ, ನಮ್ಮ ಪುರಾಣದಲ್ಲಿ, ಕಥೆಗಳಲ್ಲಿ ಈ ರೀತಿಯ ವಿಮಾನಗಳು ಸಾಕಷ್ಟು ಸಲ ಬಂದು ಹೋಗಿ ವೆ. ದೇವೇಂದ್ರನಂಥ ದೇವತೆಗಳು, ರಾವಣನಂಥ ರಾಕ್ಷಸರು ಬಾನ ಮಾರ್ಗದಲ್ಲಿ ವಿಮಾನ ಯಾನ ಮಾಡಿದ ಕಥೆಗಳು ಎಲ್ಲರಿಗೂ ಗೊತ್ತು. ಅಂಥ ಮಾಯಾಲೋಕದ ಕನಸನ್ನು ವಾಸ್ತವಿಕತೆಗೆ ಇಳಿಸಿ ದವರು ಅಮೆರಿಕದ ಆರ್ವಿಲ್ ಮತ್ತು ವಿಲ್ಬರ್ ರೈಟ್ ಸಹೋದರರು.

20ನೇ ಶತಮಾನದ ಆವಿಷ್ಕಾರಗಳಲ್ಲಿ ಮನರಂಜನೆಗೆ ಸಂಬಂಧಿಸಿದಂತೆ ರೇಡಿಯೊ, ಟೆಲಿವಿಷನ್, ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿಬಯೋಟಿಕ್, ಆಹಾರಕ್ಕೆ ಸಂಬಂಧಪಟ್ಟ ಮೈಕ್ರೊವೇವ್ ಓವನ್, ಟೀ ಬ್ಯಾಗ್, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕಂಪ್ಯೂ ಟರ್, ಇಂಟರ್ನೆಟ್ ಇತ್ಯಾದಿಗಳ ನಡುವೆ ಎದ್ದು ಕಾಣುವುದು ವಿಮಾನ ವಿಜ್ಞಾನ. ಬಹುಶಃ ಆ ಶತ ಮಾನದಲ್ಲಿ ಕಂಪ್ಯೂಟರ್, ಅಂತರ್ಜಾಲ ಹೊರತುಪಡಿಸಿದರೆ ವಿಮಾನದಷ್ಟು ಕ್ರಾಂತಿ ಮಾಡಿದ ವಸ್ತು ಇನ್ನೊಂದಿರಲಿಕ್ಕಿಲ್ಲ.

ಹೇಗೆ ಅಂತರ್ಜಾಲ ಜಗತ್ತನ್ನೇ ಕುಗ್ಗಿಸಿತೋ, ಹಾಗೆಯೇ ವಿಮಾನವೂ ವಿಶ್ವವನ್ನು ಸಣ್ಣದಾಗಿಸಿತು. ಈಗ ವಿಶ್ವದ ಯಾವ ಮೂಲೆಯಿಂದ ಯಾವ ಮೂಲೆಗೆ ಬೇಕಾದರೂ ಕೆಲವೇ ಗಂಟೆಗಳಲ್ಲಿ ಪ್ರಯಾ ಣಿಸಬಹುದು. ವಿಮಾನಯಾನ ಇಲ್ಲವಾಗಿದ್ದರೆ ಇಂದೂ ದಿನಗಟ್ಟಲೆ, ತಿಂಗಳುಗಟ್ಟಲೆ ಪ್ರಯಾಣ ಮಾಡಬೇಕಾಗುತ್ತಿತ್ತು. ಇಂದು ವಿಮಾನಯಾನವಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಕಷ್ಟ. ಅದಕ್ಕಾದರೂ ರೈಟ್ ಸಹೋದರರಿಗೆ ಒಂದು ಮನಃಪೂರ್ವಕ ಧನ್ಯವಾದ ಹೇಳಲೇಬೇಕು.

ಅದಕ್ಕಿಂತ ಮುಂಚೆ ಹಾರಾಟದ ಪ್ರಯೋಗ ನಡೆದಿಲ್ಲ ಎಂದಲ್ಲ. 1783ರಲ್ಲಿ ಮೊದಲ ಬಾರಿ ಹಾಟ್ ಏರ್ ಬಲೂನ್ ಮುಖೇನ ಗಾಳಿಯಲ್ಲಿ ಹಾರಲಾಯಿತು ಎಂದು ಇತಿಹಾಸ ಹೇಳುತ್ತದೆ. ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ನಲ್ಲಿ ಮೊದಲ ಉಡಾವಣೆ ಕಂಡ ಈ ಪುಗ್ಗೆಯ ಜನಕರು ಮಾಂಟ್ಗಾಲಿ ಯರ್ ಸಹೋದರರು. 1853ರಲ್ಲಿ ಜಾರ್ಜ್ ಕೇಲಿ ಎಂಬ ಹೆಸರಿನ ಬ್ರಿಟಿಷ್ ಎಂಜಿನಿಯರ್ ಗ್ಲೆ ಡರ್ ನಿರ್ಮಿಸಿ, ಹಾರಾಟದ ಮೊದಲ ವಿಫಲ ಪ್ರಯತ್ನ ಮಾಡಿದ್ದ ಎಂದು ಇತಿಹಾಸ ಹೇಳುತ್ತದೆ.

ನಂತರ 1890ರಲ್ಲಿ ಜರ್ಮನಿಯ ಒಟ್ಟೊ ಲಿಲಿಯೆಂಥಾಲ್ ಎಂಬ ವ್ಯಕ್ತಿ 18 ವಿವಿಧ ಬಗೆಯ ಗ್ಲೈಡರ್‌ಗಳನ್ನು ನಿರ್ಮಿಸಿದ್ದ, ತಾನೇ ನಿರ್ಮಿಸಿದ್ದ ಗ್ಲೈಡರ್‌ನಲ್ಲಿ 350 ಮೀಟರ್ ದೂರ ಹಾರಿದ್ದ ಎಂಬ ವಿಷಯವೂ ದಾಖಲೆಯ ಪುಟಗಳನ್ನು ಸೇರಿದೆ. ಈತನ ಪ್ರಯೋಗವೂ ರೈಟ್ ಸಹೋದರರಿಗೆ ಪ್ರೇರಣೆ ನೀಡಿತು ಎಂಬ ಮಾತೂ ಇದೆ. ರೈಟ್ ಸಹೋದರರು ಯಶಸ್ವಿಯಾಗುವುದಕ್ಕೆ ಮುಂಚೆ ಹತ್ತಕ್ಕೂ ಹೆಚ್ಚು ಜನ ಆಕಾಶದಲ್ಲಿ ಹಾರುವ ಪ್ರಯೋಗಕ್ಕೆ ಕೈಹಾಕಿ ತಮ್ಮ ಪ್ರಾಣವನ್ನೇ ಕಳೆದು ಕೊಂಡಿದ್ದಾರೆ.

ಆದರೆ ಅನ್ವೇಷಣೆಯ ನಂತರದ ಬೆಳವಣಿಗೆಗೆ ‘ವಾಹ್!’ ಎನ್ನಲೇಬೇಕು. ಆರಂಭದ ದಿನಗಳಲ್ಲಿ ನೂರರಿಂದ ನೂರ ಇಪ್ಪತ್ತು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಹತ್ತು ವರ್ಷಗಳ ಒಳಗಾಗಿ ಹತ್ತು ಸಾವಿರ ಅಡಿ ಎತ್ತರಕ್ಕೆ ಹಾರುವಷ್ಟು ಬೆಳೆಯಿತು. ಇದು ರಾಕೆಟ್ ತಂತ್ರಜ್ಞಾನಕ್ಕೂ ಮೆಟ್ಟಿ ಲಾಯಿತು.

ವಿಮಾನ ಹಾರಾಟ ಆರಂಭಿಸಿದ 70 ವರ್ಷಗಳ ಒಳಗೆ, ಭೂಮಿಯಿಂದ ಸುಮಾರು 384000 ಕಿಲೋ ಮೀಟರ್ ದೂರವಿರುವ ಚಂದ್ರನಲ್ಲಿಗೆ ಪ್ರಯಾಣಿಸುವುದೆಂದರೆ ಹುಡುಗಾಟವಲ್ಲ. ಆದರೆ, ಯಾವ ಅನ್ವೇಷಣೆಯೇ ಆದರೂ ಕಾಲಕ್ರಮೇಣ ವ್ಯವಹಾರವಾಗಿ ಬದಲಾಗುತ್ತದೆ. ಅದಕ್ಕೆ ವಾಯು ಯಾನವೂ ಹೊರತಲ್ಲ.

ಇಂದು ವಿಶ್ವದಾದ್ಯಂತ ಬಾನಂಗಳದಲ್ಲಿ ಹಾರಾಡುವ ಪ್ರಮುಖವಾದ ಎರಡು ಯಂತ್ರದ ಹಕ್ಕಿಗಳ ವಂಶ ಎಂದರೆ ಬೋಯಿಂಗ್ ಮತ್ತು ಏರ್‌ಬಸ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಪಾಲನ್ನು ಇದೇ ಎರಡು ಸಂಸ್ಥೆಯ ವಿಮಾನಗಳು ಆವರಿಸಿಕೊಂಡಿವೆ. ಬೇರೆ ಯಾವ ಸಂಸ್ಥೆಗಳೂ ಇವೆರಡರ ಹತ್ತಿರಕ್ಕೆಲ್ಲೂ ಸುಳಿಯುವುದಿಲ್ಲ. ಈ ಸಂಸ್ಥೆಗಳು ಅನ್ಯರು ತಮ್ಮ ಸ್ಥಳವನ್ನು ಆಕ್ರಮಿಸಿ ಕೊಳ್ಳದಂತೆ ವ್ಯವಹಾರವನ್ನು ತಮ್ಮ ಹತೋಟಿಯಲ್ಲಿ ಹಿಡಿದಿಟ್ಟುಕೊಂಡಿವೆ. ಮೊದಲು ಈ ಕಂಪನಿಗಳ ಬಯೋಡಾಟಾದ ಕಡೆಗೆ ಕಣ್ಣಾಡಿಸಿದರೆ ಅದರ ಅಗಾಧತೆ ಅರ್ಥವಾಗುತ್ತದೆ. ಬೋಯಿಂಗ್ ಸಂಸ್ಥೆ ಆರಂಭವಾದದ್ದು 1916ರಲ್ಲಿ, ಅಮೆರಿಕದ ವಾಷಿಂಗ್ಟನ್‌ನಲ್ಲಿ. ಸ್ಥಾಪಕ ವಿಲಿಯಮ್ ಬೋಯಿಂಗ್. ಈಗ ಶಿಕಾಗೊದಲ್ಲಿ ಕೇಂದ್ರ ಕಾರ್ಯಾಲಯ.

ಅಂದಿನಿಂದ ಇಂದಿನವರೆಗೆ ಸಂಸ್ಥೆಯ ಸಾಧನೆ ಅಭೂತಪೂರ್ವ. ಈ ಸಂಸ್ಥೆ 2019ರಲ್ಲಿ ತಯಾರಿಸಿದ ಕಮರ್ಷಿಯಲ್ ಏರ್‌ಕ್ರಾ- (ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಯೋಗ್ಯವಾದ ವಿಮಾನಗಳು) ಸಂಖ್ಯೆ 380 (2018ರಲ್ಲಿ ಈ ಸಂಸ್ಥೆ ಎಂಟು ನೂರಕ್ಕೂ ಅಧಿಕ ವಿಮಾನಗಳನ್ನು ತಯಾರಿಸಿತ್ತು). ಅದರೊಂದಿಗೆ ಆ ವರ್ಷ 230 ಯುದ್ಧ ವಿಮಾನಗಳು ಮತ್ತು ಎರಡು ಉಪಗ್ರಹಗಳನ್ನೂ ತಯಾರಿ ಸಿದೆ.

ಈ ಸಂಸ್ಥೆಗೆ ಇನ್ನೂ 3400 ವಿಮಾನ ತಯಾರಿಸಲು ಬೇಡಿಕೆ ಇದೆ. ಸಂಸ್ಥೆಯಲ್ಲಿ ಒಂದು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ತಮ್ಮ ಸಂಸ್ಥೆಯ ವಿಮಾನಗಳು ಇತರರಿಗಿಂತ ಶೇ.8 ರಷ್ಟು ಕಡಿಮೆ ಇಂಧನ ಬಳಸುತ್ತವೆ ಎಂದು ಸಂಸ್ಥೆ ಹೇಳಿಕೊಳ್ಳುತ್ತದೆ. 747, 777, 787 ಹೆಸರು ಮಾಡಿದ ಮಾಡೆಲ್‌ಗಳು. 2018ರಲ್ಲಿ 737 ಮಾಡೆಲ್‌ನ ಎರಡು ವಿಮಾನಗಳು ದುರಂತಕ್ಕೊಳಗಾದ್ದ ರಿಂದ ವಿಶ್ವದಾದ್ಯಂತ ಆ ಮಾಡೆಲ್‌ನ 787ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿತ್ತು. ಅದಕ್ಕೇ ಹೇಳುವುದು, Flying is not dangerous, crashing is dangerous!

ಇನ್ನೊಂದು ಅಸಾಮಾನ್ಯ ಸಂಸ್ಥೆಯೆಂದರೆ ಏರ್ಬಸ್. 1970ರ ಕೊನೆಯಲ್ಲಿ ಐರೋಪ್ಯ ರಾಷ್ಟ್ರ ಗಳು, ಅದರಲ್ಲೂ ಫ್ರಾನ್ಸ್, ಜರ್ಮನಿ, ಸ್ಪೇನ್ ಮೊದಲಾದ ದೇಶಗಳು ಪ್ರಮುಖ ಪಾತ್ರವಹಿಸಿ ಸ್ಥಾಪಿಸಿದ ಏರ್ ಬಸ್ ಇಂಡಸ್ಟ್ರೀಸ್‌ನ ಕೇಂದ್ರ ಕಾರ್ಯಾಲಯ ನೆದರ್ಲ್ಯಾಂಡ್‌ನ ಲೇಡನ್‌ನಲ್ಲಿದ್ದರೂ, ವಿಮಾನಗಳನ್ನು ತಯಾರಿಸುವ ಕಾರ್ಖಾನೆ ಇರುವುದು ಫ್ರಾನ್ಸ್‌ನ ಟೊಲೌಸ್‌ನಲ್ಲಿ. ಸಂಸ್ಥೆಯು ಒಂದು ಲಕ್ಷ ಮೂವತ್ತನಾಲ್ಕು ಸಾವಿರ ಜನರಿಗೆ ಉದ್ಯೋಗ ನೀಡಿದೆ.

ಸಂಸ್ಥೆ ವಾರ್ಷಿಕ ಎಪ್ಪತ್ತು ಬಿಲಿಯನ್ ಡಾಲರ್‌ಗಿಂತ ಅಧಿಕ ಆದಾಯ ಹೊಂದಿದ್ದು, ಮೂರು ಬಿಲಿಯನ್ ಡಾಲರ್‌ಗಿಂತಲೂ ಅಧಿಕ ನಿವ್ವಳ ಲಾಭ ಮಾಡುತ್ತಿದೆ. ಎ-319, ಎ-320, ಎ-321, ಎ-220 ಸಫಲ ಮಾಡೆಲ್‌ಗಳು. ಸಾಮಾನ್ಯವಾಗಿ ವಿಮಾನದಲ್ಲಿ ಎರಡು ಎಂಜಿನ್‌ಗಳಿರುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಏರ್‌ಬಸ್ ಈ ವರ್ಷ ಮಾರುಕಟ್ಟೆಗೆ ತರುತ್ತಿರುವ ಎ-380 ಮಾಡೆಲ್ ವಿಮಾನ ನಾಲ್ಕು ಎಂಜಿನ್ ಹೊಂದಿದ್ದು, 850ಕ್ಕೂ ಹೆಚ್ಚು ಜನರನ್ನು ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಇದುವರೆಗೆ ಸುಮಾರು 19 ಸಾವಿರಕ್ಕೂ ಹೆಚ್ಚು ವಿಮಾನ ತಯಾರಿಸಿದ ಹೆಗ್ಗಳಿಕೆ ಸಂಸ್ಥೆಯದ್ದು. ಇಷ್ಟಾಗಿಯೂ ಈ ಎರಡೂ ಸಂಸ್ಥೆಗಳು ವಿಮಾನಕ್ಕೆ ಅತ್ಯವಶ್ಯಕವಾದ ಎಂಜಿನ್ ತಯಾರಿಸುವು ದಿಲ್ಲ. ವಿಶ್ವದಾದ್ಯಂತ ವಿಮಾನಗಳಿಗೆ ಎಂಜಿನ್ ತಯಾರಿಸುವ ಕಂಪನಿಗಳಲ್ಲಿ ಮೊದಲನೆಯ ಸ್ಥಾನ ದ‌ಲ್ಲಿರುವುದು ಜನರಲ್ ಎಲೆಕ್ಟ್ರಿಕ್ ( GE ). ಎರಡನೆಯ ಸ್ಥಾನದಲ್ಲಿ ರೋಲ್ಸ್ ರಾಯ್ (RR), ನಂತ ರದ ಸ್ಥಾನದಲ್ಲಿ ಪ್ರಾಟ್ ಎಂಡ್ ವಿಟ್ನಿ ( PW ), ಸಿಎಫ್ಎಂ ಇಂಟರ್‌ನ್ಯಾಷನಲ್ ಇತ್ಯಾದಿ ಕಂಪನಿ ಗಳಿವೆ.

ಇನ್ನು ಭಾರತದ ಹಿಂದೂಸ್ತಾನ್ ಏರೊನಾಟಿಕಲ್ ಲಿಮಿಟೆಡ್ ( HAL ) 1940ರಲ್ಲಿ ಆರಂಭವಾಗಿ ಇಪ್ಪತ್ತೆಂಟು ಸಹಸ್ರ ಜನರಿಗೆ ಉದ್ಯೋಗ ಒದಗಿಸಿದೆ. ಆಕಾಶದಲ್ಲಿ ಒಂದು ವಿಮಾನ ಹಾರಾಡುತ್ತಿದೆ ಯೆಂದರೆ ಅದರ ಹಿಂದೆ ಲಕ್ಷಾಂತರ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ, ಉದ್ಯೋಗ ಮಾಡು ತ್ತಿದ್ದಾರೆ ಎಂದು ಅರ್ಥ. ವಿಮಾನದ ಪ್ರಮುಖ ಎಂಜಿನ್, ಬಾಡಿ, ಆಸನಗಳು, ಹವಾ ನಿಯಂತ್ರಣ, ಅಲಂಕಾರ ದಿಂದ ಮೊದಲಾದವುಗಳಿಂದ ವಿಮಾನವನ್ನು ಸಿದ್ಧಪಡಿಸಿ, ಹಾರಾಟಕ್ಕೆ ಬೇಕಾದ ಪೈಲಟ್‌ಗಳು, ನಿರ್ವಹಣೆ ಸಿಬ್ಬಂದಿಗಳು, ವಿಮಾನ ನಿಲ್ದಾಣದ ಸಿಬ್ಬಂದಿಗಳು, ಭೂ ಸಿಬ್ಬಂದಿಗಳು, ಸಂಕೇತ ನೀಡುವ ಸಿಬ್ಬಂದಿಗಳವವರೆಗೆ ಎಲ್ಲರ ಶ್ರಮವಿದೆ.

ಇದರ ಹೊರತಾಗಿ ಪ್ರವಾಸೋದ್ಯಮ, ಹೋಟೆಲ, ಟಿಕೆಟ್ ಬುಕಿಂಗ್, ಕ್ಯಾಟರಿಂಗ್, ಸ್ವಚ್ಛತೆ, ಇತ್ಯಾದಿ ದೊಡ್ಡದೊಂದು ವಿಸ್ತೃತ ಕುಟುಂಬವೇ ಇದೆ. ಆದೇನೇ ಇದ್ದರೂ, ನಿರ್ಮಾಣ ಕಾರ್ಯದಲ್ಲಿ ಬೋಯಿಂಗ್ ಮತ್ತು ಏರ್‌ಬಸ್ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿಯಲು ಇತರರಿಗೆ ಸಾಧ್ಯವಾಗದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ವಿಮಾನ ಅಭಿವೃದ್ಧಿ ವೆಚ್ಚ ( Development Cost ). ಸಾಮಾನ್ಯ ವಾಗಿ ಒಂದು ಪ್ರಯಾಣಿಕರ ವಿಮಾನವನ್ನು ಅಭಿವೃದ್ಧಿಪಡಿಸಲು ಹತ್ತರಿಂದ ಹದಿನೈದು ಬಿಲಿ ಯನ್ ಡಾಲರ್ ಬೇಕು. ಏರ್‌ಬಸ್ ಎಫ್‌ 380ಯಂಥ ಆಧುನಿಕ ವಿಮಾನವನ್ನು ತಯಾರಿಸು ವಾಗ ಈ ವೆಚ್ಚ ಇಪ್ಪತ್ತು ಬಿಲಿಯನ್ ಡಾಲರ್‌ವರೆಗೂ ಹೋಗುತ್ತದೆ. ನಂತರದ ನಿರ್ಮಾಣ, ಪರೀಕ್ಷಾ ವೆಚ್ಚ ಇತ್ಯಾದಿಗಳನ್ನೆಲ್ಲ ಸೇರಿಸಿದರೆ ಒಂದು ವಿಮಾನ ಹಾರಾಟಕ್ಕೆ ಸಿದ್ಧವಾಗುವವರೆಗೆ ತಗಲುವ ವೆಚ್ಚ ಸುಮಾರು ಮೂವತ್ತೈದು ಬಿಲಿಯನ್ ಡಾಲರ್ಗಳು.

ಯಾವುದೇ ದೇಶದ ಸರಕಾರವಾಗಲೀ ಅಥವಾ ಯಾವುದೇ ಸಂಸ್ಥೆಯಾಗಲೀ ಇಷ್ಟೊಂದು ದೊಡ್ಡ ಮೊತ್ತವನ್ನು ತೊಡಗಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಎರಡನೆಯ ಕಾರಣ ತಿಳಿದ ಮೇಲಂತೂ ಈ ಸಾಹಸಕ್ಕೆ ಯಾರೂ ಇಳಿಯುವುದಿಲ್ಲ. ಎರಡನೆಯ ಕಾರಣ, ಬೋಯಿಂಗ್ ಅಮೆರಿಕ ಸರಕಾರದೊಂದಿಗೂ, ಏರ್‌ಬಸ್ ಯುರೋಪಿಯನ್ ಯೂನಿಯನ್ ದೇಶಗಳೊಂದಿಗೂ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಂಡಿವೆ.

ಮೊದಲನೆಯ ಮತ್ತು ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಆಯಾ ದೇಶಗಳಿಗೆ ಬೇಕಾದ ಯುದ್ಧ ವಿಮಾನ ತಯಾರಿಸಿ ಕೊಡುವ ಸಂದರ್ಭದಲ್ಲಿ ಗಟ್ಟಿಗೊಂಡ ಈ ಬೆಸುಗೆ ಇನ್ನೂ ಸುಭದ್ರ ವಾಗಿದೆ. ಇದು ಕಾಲಕ್ಕೆ ತಕ್ಕಂತೆ ಸರಕಾರದ ನೀತಿ ನಿಯಮಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವಷ್ಟರ ಮಟ್ಟಕ್ಕೆ ಬೆಳೆದು ನಿಂತಿದೆ.

ಇನ್ನು, ವಾಯುಯಾನದ ನಿಯಮಾವಳಿಗಳನ್ನು ರೂಪಿಸುವ ಎರಡು ಪ್ರಮುಖ ಸಂಸ್ಥೆ ಗಳೆಂದರೆ, ಫೆಡೆರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ( FAA ) ಮತ್ತು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ ( EASA ). ರಷ್ಯಾ, ಕೆನಡಾ, ಚೀನಾದಂಥ ಕೆಲವೇ ದೇಶಗಳನ್ನು ಹೊರತುಪಡಿಸಿ, ವಿಶ್ವದ ಬಹುತೇಕ ದೇಶಗಳು ಈ ಸಂಸ್ಥೆಗಳ ಮಾರ್ಗಸೂಚಿಯನ್ನು ಒಪ್ಪಿ ಕೊಂಡಿವೆ. ಈ ದೇಶಗಳಿಗೆ ದೊಡ್ಡಮೊತ್ತ ತೊಡಗಿಸಿ, ಪ್ರಯಾಣಿಕರ ವಿಮಾನಗಳನ್ನು ತಯಾರಿಸು ವುದು ಸಾಧ್ಯವೇ ಇಲ್ಲದ ಮಾತು.

ತಯಾರಿಸುವ ತಾಕತ್ತಿದ್ದ ರಾಷ್ಟ್ರಗಳು ತಮ್ಮ ವ್ಯವಹಾರದ ಕೋಟೆಯಲ್ಲಿ ನುಗ್ಗದಂತೆ ಈ ಸಂಸ್ಥೆ ಗಳು ನಿಯಮಗಳನ್ನು ರೂಪಿಸುತ್ತವೆ, ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತಲೂ ಇರುತ್ತವೆ. ಅಲ್ಲಿಗೆ ದೊಡ್ಡ ಮೊತ್ತವನ್ನು ತೊಡಗಿಸಿ ವಿಮಾನ ತಯಾರಿಸಿದರೂ ಅದು ದೇಶದೊಳಗೆ ಹಾರಬೇಕೇ ವಿನಾ ಈ ರಾಷ್ಟ್ರಗಳಿಗೆ ಹೋಗಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಭಾರತ, ಚೀನಾ, ಜಪಾನ್, ರಷ್ಯಾದಂಥ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಬಲ್ಲ ವಿಮಾನಗಳನ್ನು ತಯಾರಿ ಸುವಸಾಮರ್ಥ್ಯ ಹೊಂದಿದ್ದರೂ, ಯುದ್ಧ ವಿಮಾನ ತಯಾರಿಸುವುದರಲ್ಲಿಯೋ, ತಮ್ಮ ದೇಶದೊಳಗೆ ಸಂಚರಿಸುವ ಪ್ರಯಾಣಿಕರು ಮತ್ತು ಸರಕು ಸಾಗಿಸುವ ವಿಮಾನ ತಯಾರಿಸುವು ದರಲ್ಲಿಯೇ ಸಮಾಧಾನಪಟ್ಟುಕೊಳ್ಳುತ್ತಿವೆ.

ಅಷ್ಟೇ ಅಲ್ಲ, ಭಾರತದ ಎಚ್‌ಎಎಲ್ ಸೇರಿದಂತೆ ಇತರ ರಾಷ್ಟ್ರಗಳ ಕೆಲವು ಸಂಸ್ಥೆಗಳು ವಿಮಾನಕ್ಕೆ ಬೇಕಾದ ಬಿಡಿಭಾಗಗಳನ್ನು ತಯಾರಿಸಿ ಅದೇ ಬೋಯಿಂಗ್ ಮತ್ತು ಏರ್‌ಬಸ್ ಸಂಸ್ಥೆಗೆ ಮಾರಾಟ ಮಾಡುತ್ತಿವೆ. ಈ ವ್ಯಾಪಾರ, ವ್ಯವಹಾರ, ರಾಜಕೀಯ, ಏಕಸ್ವಾಮ್ಯ, ಪೂರ್ಣಾಧಿಕಾರದ ವಿಷಯ ಗಳಿಗೆ ನಾವು ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾ? ಬೋಯಿಂಗ್ ಆದರೂ ಸರಿ, ಏರ್‌ಬಸ್ ಆದರೂ ಸರಿ, ಯಂತ್ರದ ಹಕ್ಕಿಯ ರೆಕ್ಕೆಯ ಕೆಳಗಿರುವ ಪಂಖ ತಿರುಗಬೇಕು, ವಿಮಾನದಲ್ಲಿ ಕುಳಿತು ಹಾರ ಬೇಕು, ತಾಣ ಸೇರಬೇಕು ಅಷ್ಟೇ!

ಕೊನೆಯದಾಗಿ, The propeller is just a big fan in front of the plane used to keep the pilot cool. When it stops, pilot starts sweating .

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್