ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Budget: ಮಧ್ಯಮವರ್ಗದ ಬಜೆಟ್‌ ಆಗಿದ್ದು ಆರೋಗ್ಯ ಕ್ಷೇತ್ರಕ್ಕೆ ಕೆಲವು ಗಮನಾರ್ಹ ಕೊಡುಗೆ

ಕ್ಯಾನ್ಸರ್‌, ಅಪರೂಪದ ಖಾಯಿಲೆಗಳು, ದೀರ್ಘಕಾಲದ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಸಂಬಂಧಿ ಸಿದ 36 ಜೀವ ರಕ್ಷಕ ‍ಔ‍ಷಧಗಳಿಗೆ ಬೇಸಿಕ್‌ ಕಸ್ಟಮ್‌ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ರೋಗಿ ಗಳಿಗೆ ಚಿಕಿತ್ಸೆಯಲ್ಲಿ ನೆರವು ನೀಡುವ ಕಾರ್ಯಕ್ರಮವನ್ನು(ಪೇಷಂಟ್‌ ಅಸಿಸ್ಟೆಂಟ್‌ ಪ್ರೋಗ್ರಾಮ್‌) ವಿಸ್ತರಿಸ ಲಾಗಿದ್ದು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಅನಿವಾರ್ಯ ಹಾಗೂ ದುಬಾರಿಯಾಗಿರುವ ಔ‍ಷಧಗಳ ಬೆಲೆಯನ್ನು ತಗ್ಗಿಸಲು ನೆರವಾಗಿತ್ತದೆ

ಜನ ಸಂಖ್ಯೆಗೆ ತಕ್ಕಂತೆ ವೈದ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನೆರವಾಗಲಿದೆ

Profile Ashok Nayak Feb 2, 2025 10:12 AM

- ಡಾ. ಸುದರ್ಶನ್‌ ಬಲ್ಲಾಳ್‌, ಚೇರ್‌ಮನ್‌ - ಮಣಿಪಾಲ್‌ ಆಸ್ಪತ್ರೆ

ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್‌ ಕ್ಯಾನ್ಸರ್‌ ಕೇಂದ್ರಗಳನ್ನು ಘೋಷಿಸಲಾಗಿದೆ. 2025-26ರಲ್ಲಿ 200 ಆಸ್ಪತ್ರೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದು ಸಣ್ಣ ನಗರಗಳಲ್ಲಿ ಕ್ಯಾನ್ಸರ್‌ ರೋಗಿಗಳ ಆರೈಕೆಗೆ ನೆರವಾಗಲಿದೆ.

ಕ್ಯಾನ್ಸರ್‌, ಅಪರೂಪದ ಖಾಯಿಲೆಗಳು, ದೀರ್ಘಕಾಲದ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಸಂಬಂಧಿ ಸಿದ 36 ಜೀವ ರಕ್ಷಕ ‍ಔ‍ಷಧಗಳಿಗೆ ಬೇಸಿಕ್‌ ಕಸ್ಟಮ್‌ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ರೋಗಿ ಗಳಿಗೆ ಚಿಕಿತ್ಸೆಯಲ್ಲಿ ನೆರವು ನೀಡುವ ಕಾರ್ಯಕ್ರಮವನ್ನು(ಪೇಷಂಟ್‌ ಅಸಿಸ್ಟೆಂಟ್‌ ಪ್ರೋಗ್ರಾಮ್‌) ವಿಸ್ತರಿಸಲಾಗಿದ್ದು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆ ಯ ಚಿಕಿತ್ಸೆಗೆ ಅನಿವಾರ್ಯ ಹಾಗೂ ದುಬಾರಿಯಾಗಿರುವ ಔ‍ಷಧಗಳ ಬೆಲೆಯನ್ನು ತಗ್ಗಿ ಸಲು ನೆರವಾಗಿತ್ತದೆ.

ವೈದ್ಯಕೀಯ ಕಾಲೇಜಿಗೆ 10 ಸಾವಿರ ಹೆಚ್ಚುವರಿ ಮೆಡಿಕಲ್‌ ಸೀಟ್‌ಗಳನ್ನು ಸೇರಿಸಲಾಗುತಿದ್ದು ಮುಂದಿನ 5 ವರ್ಷದಲ್ಲಿ 75 ಸಾವಿರ ಸೀಟ್‌ಗಳ ಸೇರ್ಪಡೆಯ ಗುರಿ ಹೊಂದಲಾಗಿದೆ. ಇದು ಜನ ಸಂಖ್ಯೆಗೆ ತಕ್ಕಂತೆ ವೈದ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನೆರವಾಗಲಿದೆ.

ಸಾಮರ್ಥ ಹೆಚ್ಚಳ ಮತ್ತು ಸರಳ ನಿಯಮಗಳ ಮೂಲಕ ವೈದ್ಯಕೀಯ ಪ್ರವಾಸೋದ್ಯಮ ( ಮೆಡಿ ಕಲ್‌ ಟೂರಿಸಮ್‌) ಹಾಗೂ ಭಾರತದಲ್ಲಿ ಆರೈಕೆ ( ಹೀಲ್‌ ಇನ್‌ ಇಂಡಿಯಾ) ಉತ್ತೇಜಿಸುವ ಯೋಜನೆ ಮಹತ್ವದ ನಡೆಯಲಾಗಿದೆ. ಭಾರತ ಉಳಿದ ದೇಶಗಳಿಗೆ ಹೋಲಿಸಿದರೆ ಮೂಲ ಸೌಕರ್ಯ ಹಾಗೂ ಪ್ರತಿಭೆಯಲ್ಲಿ ವೈದ್ಯಕೀಯ ಮೌಲ್ಯದಲ್ಲಿ ಉತ್ತಮವಾಗಿದ್ದು , ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಯೊಂದಿಗೆ ಮೆಡಿಕಲ್‌ ಟೂರಿಸಮ್‌ ಸೆಳೆಯಲು ಸಮರ್ಥವಾಗಿದೆ. ಇದೊಂದು ಸ್ವಾಗತಾರ್ಹ ನಡೆಯಲಾಗಿದೆ.

ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಎಐ ತಂತ್ರಜ್ಞಾ ನ ಅಭಿವೃದ್ಧಿಗೆ 500 ಕೋಟಿ ಮೀಸಲಿಡ ಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಮೂಲಕ ಮೂಲ ಸೌಕರ್ಯ ಅಭೀ ವೃದ್ಧಿಗೆ ಪಬ್ಲಿಕ್‌ ಪ್ರೈವೆಟ್‌ ಸಹಯೋಗ ( ಪಿಪಿಪಿ) ಮಾದರಿಯಲ್ಲಿ 1.5 ಲಕ್ಷ ಕೋಟಿ ನೀಡ ಲಾಗಿದೆ. ಇದು ಆರೋಗ್ಯ ಸೌಕರ್ಯ ಹಾಗೂ ಹಣಕಾಸು ನೆರವಿಗೆ ಸಹಾಯವಾಗಲಿದೆ.

ಎಲ್ಲಾ ರಾಜ್ಯ ಹಾಗೂ ಶಾಲೆಗಳಲ್ಲಿ ಪೌಷ್ಟಿಕಾಂಶ ಯೋಜನೆ ಘೋಷಿಸಲಾಗಿದೆ. ಇದು ಕಡಿಮೆ ಸವಲತ್ತು ಹೊಂದಿರುವ ಜನತೆಯಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡಿ ಪೌಷ್ಟಿಕತೆ ಹೆಚ್ಚಿಸುವಲ್ಲಿ ನೆರವಾಗಲಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬ್ರಾಡ್‌ ಬ್ಯಾಂಡ್‌ ಸಂಪರ್ಕ ನೀಡುವ ಮೂಲಕ ಗ್ರಾಮ ಮಟ್ಟ ದಲ್ಲಿ ಟೆಲಿಮೆಡಿಸಿನ್‌ ಉತ್ತೇಜಿಸಲು ನೆರವಾಗಲಿದೆ. ಇದು ಹಳ್ಳಿಗಳಲ್ಲಿ ಆರೋಗ್ಯ ಸೇವಕರು ಹಾಗೂ ಗ್ರಾಮೀಣ ರೋಗಿಗಳ ಮಧ್ಯೆ ಸಂಪರ್ಕ ಕೊರತೆಯನ್ನು ನೀಗಿಸಲಿದೆ.

ಒಟ್ಟಾರೆ ಈ ಬಜೆಟ್‌ ಸಾಮಾನ್ಯ ಜನರಿಗೆ ಉತ್ತಮವಾಗಿದ್ದು ಆರೋಗ್ಯ ಕ್ಷೇತ್ರದ ಕೆಲವು ವಿಭಾಗದಲ್ಲಿ ಗಮನಾರ್ಹ ಕೊಡುಗೆ ನೀಡಿದೆ.