Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಇಷ್ಟಿದೆ

ಕೆಲವು ದಿನಗಳಿಂದ ಸತತ ಏರಿಕೆ ಕಂಡಿದ್ದ ಚಿನ್ನದ ದರ ಇಂದು (ಫೆ. 2) ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,745 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,449 ರೂ. ಇದೆ.

Gold Price Today 2 (1)
Profile Ramesh B Feb 2, 2025 10:34 AM

ಬೆಂಗಳೂರು: ಕೆಲವು ದಿನಗಳಿಂದ ಸತತ ಏರಿಕೆ ಕಂಡಿದ್ದ ಚಿನ್ನದ ದರ ಇಂದು (ಫೆ. 2) ಯಥಾಸ್ಥಿತಿ ಕಾಯ್ದುಕೊಂಡಿದ್ದು, ಗ್ರಾಹಕರಿಗೆ ತುಸು ಸಮಾಧಾನ ತಂದಿದೆ (Gold Price Today). ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,745 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,449 ರೂ. ಇದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ: 22 ಕ್ಯಾರಟ್‌ನ 8 ಗ್ರಾಂ ಚಿನ್ನ 61,960 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 77,450 ರೂ. ಮತ್ತು 100 ಗ್ರಾಂಗೆ 7,74,500 ರೂ. ಪಾವತಿಸಬೇಕಾಗುತ್ತದೆ.

24 ಕ್ಯಾರಟ್‌ ಚಿನ್ನದ ದರಗಳ ವಿವರ: 24 ಕ್ಯಾರಟ್‌ನ 8 ಗ್ರಾಂ ಚಿನ್ನ 67,592 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 84,490 ರೂ. ಮತ್ತು 100 ಗ್ರಾಂಗೆ 8,44,900 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ 1 ಗ್ರಾಂ 24 ಕ್ಯಾರಟ್‌ 1 ಗ್ರಾಂ
ಚೆನ್ನೈ 7,745 ರೂ. 8,449 ರೂ.
ಮುಂಬೈ 7,745 ರೂ. 8,449 ರೂ.
ದಿಲ್ಲಿ 7,760 ರೂ. 8,464 ರೂ.
ಕೋಲ್ಕತಾ 7,745 ರೂ. 8,449 ರೂ.
ಹೈದರಾಬಾದ್‌ 7,745 ರೂ. 8,449 ರೂ.

ಬೆಳ್ಳಿ ದರ

ಇತ್ತ ಬೆಳ್ಳಿ ಬೆಲೆಯೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಬೆಳ್ಳಿ 1 ಗ್ರಾಂನ ಬೆಲೆ 99.50 ರೂ., 8 ಗ್ರಾಂಗೆ 796 ರೂ., 10 ಗ್ರಾಂ.ಗೆ 995 ರೂ. ಮತ್ತು 1 ಕೆಜಿಗೆ 99,500 ರೂ. ಪಾವತಿಸಬೇಕಾಗುತ್ತದೆ.

ಚಿನ್ನಾಭರಣ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶ

ಶುದ್ಧತೆ: ಚಿನ್ನಾಭರಣ ಖರೀದಿಸುವ ಮುನ್ನ ಅದರ ಶುದ್ಧತೆಯನ್ನು ಪರಿಶೀಲಿಸುವುದು ಅಗತ್ಯ. ಚಿನ್ನದ ಮೇಲೆ ಶುದ್ಧತೆಯನ್ನು ಸೂಚಿಸುವ ಬಿಐಎಸ್‌ (BIS) ಹಾಲ್‌ಮಾರ್ಕ್‌ ಇದೆ ಎನ್ನುವುದನ್ನು ಖಚಿತಪಡಿಸಿ. ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂಬುದನ್ನು ಆ ಮೂಲಕ ಪ್ರಮಾಣೀಕರಿಸಬಹುದು.

ಬೆಲೆ: ಚಿನ್ನದ ಬೆಲೆ ಪ್ರತಿ ದಿನ ಬದಲಾಗುತ್ತಿರುತ್ತದೆ. ಖರೀದಿಸುವ ಮುನ್ನ ಬೆಲೆ ಎಷ್ಟಿದೆ ಎನ್ನುವುದನ್ನು ಗಮನಿಸಿ. ಇದಕ್ಕಾಗಿ ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ಹೋಲಿಕೆ ಮಾಡಿ: ಮತ್ತೊಂದು ಮುಖ್ಯ ವಿಚಾರ ಎಂದರೆ ಬೆಲೆಗಳ ಹೋಲಿಕೆ. ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿ ವ್ಯತ್ಯಸ್ತ ಬೆಲೆಗಳಿರುತ್ತವೆ. ನೀವು ಚಿನ್ನ ಖರೀದಿಸುವ ಮುನ್ನ ಬೆಲೆಗಳನ್ನು ಹೋಲಿಸಿ ನೋಡಿ. ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯು ಮಾಡಬಹುದಾಗಿದೆ.

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ (Making Charges) ಮತ್ತು ವೇಸ್ಟೇಜ್ ಚಾರ್ಜ್ (Wastage Charges) ಎಂದಿರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲ ಆಭರಣಗಳಿಗೆ ಮೇಕಿಂಗ್, ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ.

ಈ ಸುದ್ದಿಯನ್ನ ಓದಿ: Kisan Credit Card Loan: ರೈತರಿಗೆ ಬಜೆಟ್‌ನಲ್ಲಿ ಗುಡ್‌ನ್ಯೂಸ್‌; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಏರಿಕೆ: ಹೀಗೆ ಅಪ್ಲೈ ಮಾಡಿ

ವಿನ್ಯಾಸ: ಮೊದಲೇ ಹೇಳಿದಂತೆ ಆಭರಣಗಳ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ಷ್ಮ ಕೆತ್ತನೆಯ, ಕೈಯಿಂದ ತಯಾರಿಸುವ ಆಭರಣ ಸ್ವಲ್ಪ ದುಬಾರಿಯಾಗಿತ್ತವೆ. ಆದ್ದರಿಂದ ಈ ಬಗ್ಗೆಯೂ ಗಮನ ಹರಿಸಿ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್