ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Roopa Gururaj Column: ಸಮರ್ಥ ರಾಮದಾಸರ 'ಸಮರ್ಥ' ಶಿಷ್ಯ

ಶಿಷ್ಯನನ್ನು ಮೇಲಕ್ಕೆಬ್ಬಿಸಿದ ರಾಮದಾಸರು, “ಮಗೂ, ಹೀಗೇಕೆ ದುಃಖಿಸುತ್ತಿರುವೆ? ಏನಾಯಿ ತು?" ಎಂದು ಕೇಳಿದರು. ಆಗ ಶಿವಾಜಿ, “ಗುರುಗಳೇ, ನನಗೆ ಈ ರಾಜ್ಯಾಧಿಕಾರ, ವೈಭೋಗ, ಸಂಪತ್ತು, ಯುದ್ಧ, ಸಾವು- ನೋವು ಎಲ್ಲವೂ ಸಾಕಾಗಿವೆ. ಸನ್ಯಾಸಾಶ್ರಮ ಸ್ವೀಕರಿಸಿ ನಿಮ್ಮ ಜತೆಗೆ ಬರುವೆ" ಎಂದ

Roopa Gururaj Column: ಸಮರ್ಥ ರಾಮದಾಸರ 'ಸಮರ್ಥ' ಶಿಷ್ಯ

ಒಂದೊಳ್ಳೆ ಮಾತು

ಮಹಾರಾಷ್ಟ್ರದ ಸಂತಶ್ರೇಷ್ಠರ ಪೈಕಿ ಎದ್ದು ಕಾಣುವ ಹೆಸರು ಸಮರ್ಥ ರಾಮದಾಸರದು. ಅಖಂಡ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಛತ್ರಪತಿ ಶಿವಾಜಿಯನ್ನು ಮಹಾರಾಜ ನನ್ನಾಗಿ ಮಾಡಿದ ‘ಸಮರ್ಥರು’ ಭಕ್ತಿ ಪಂಥದಲ್ಲಿ ಕ್ರಾಂತಿಯನ್ನೇ ಮಾಡಿ ‘ದಾಸಬೋಧ’ ಎಂಬ ಗ್ರಂಥವನ್ನು ರಚಿಸಿದ ಧೀಮಂತ. ರಾಜಗುರುವಾಗಿದ್ದ ಅವರಿಗೆ ರಾಜ ವೈಭೋಗವೇ ಕೈಗೆಟುಕುವಂತಿದ್ದರೂ, ಅವನ್ನೆಲ್ಲಾ ನಿರಾಕರಿಸಿ ಅತ್ಯಂತ ಸರಳ ಜೀವನ ನಡೆಸಿದ ಮಹಾ ನ್ ಜೀವವದು. ಹಿಂದೂ ಸಾಮ್ರಾಜ್ಯದ ಸಾಮ್ರಾಟ ಎನಿಸಿಕೊಂಡಿದ್ದರೂ ‘ಕ್ಷತ್ರಿಯವೀರ’ ಛತ್ರಪತಿ ಶಿವಾಜಿ ಯಲ್ಲಿ ಆಧ್ಯಾತ್ಮಿಕ ಒಲವು ಪ್ರಬಲವಾಗಿತ್ತು. ರಾಜ್ಯಾಧಿಕಾರ, ಅರಮನೆ, ಸಂಪತ್ತು ಇವು ಗಳೆಲ್ಲದರ ನಡುವೆಯಿದ್ದರೂ, ಶಿವಾಜಿಯ ಮನಸ್ಸು ವೈರಾಗ್ಯದತ್ತ ಓಡುತ್ತಿತ್ತು. ಹೀಗೆ ಅಧ್ಯಾತ್ಮದತ್ತ ತುಡಿಯುತ್ತಿದ್ದುದರಿಂಲೇ ಶಿವಾಜಿಗೆ ಸಮರ್ಥ ರಾಮ ದಾಸರಂಥ ಮಹಾ ಗುರು ಸಿಕ್ಕಿದರು ಎನ್ನಬೇಕು.

ಇದನ್ನೂ ಓದಿ: Roopa Gururaj Volumn: ಸೇವಾ ಮನೋಭಾವದ ಜತೆ ತಾಳ್ಮೆಯೂ ಇರಬೇಕು

ಆತನ ಮನಸ್ಸನ್ನು ಅರಿತಿದ್ದ ಅವರು, “ಶಿವಾಜಿ ಚಿಂತಿಸಬೇಡ. ನಿನ್ನ ಕಷ್ಟದ ಸಮಯದಲ್ಲಿ ನನ್ನನ್ನು ನೆನಪಿಸಿಕೊಂಡರೆ, ಎಲ್ಲಿದ್ದರೂ ನಿನ್ನೆದುರಿಗೆ ಬಂದು ನಿಲ್ಲುವೆ" ಎಂದಿದ್ದರು. ಒಮ್ಮೆ ಹೀಗೆಯೇ ರಾಜ್ಯಭಾರದ ನಿರ್ವಹಣೆಯಲ್ಲಿದ್ದಾಗ ಶಿವಾಜಿಯಲ್ಲಿ ವೈರಾಗ್ಯಭಾವ ತೀವ್ರವಾಯಿತು. ಈ ಹಿಂದೆ ಮಾತು ಕೊಟ್ಟಂತೆ ಆತ ಗುರುಗಳನ್ನು ಮನದಲ್ಲಿ ನೆನೆಯು ತ್ತಿದ್ದಂತೆ, ‘ಭವತಿ ಭಿಕ್ಷಾಂದೇಹಿ’ ಎನ್ನುತ್ತಾ ಸಮರ್ಥ ರಾಮದಾಸರು ಶಿವಾಜಿಯ ಎದುರಿಗೆ ನಿಂತಿದ್ದರು.

ಅವರನ್ನು ಕಂಡು ಅತೀವ ಸಂತಸಗೊಂಡ ಶಿವಾಜಿ, ಓಡಿ ಬಂದು ಅವರ ಪಾದದ ಬಳಿ ಪುಟ್ಟ ಮಗುವಿನಂತೆ ಕುಳಿತುಬಿಟ್ಟ. ಶಿಷ್ಯನನ್ನು ಮೇಲಕ್ಕೆಬ್ಬಿಸಿದ ರಾಮದಾಸರು, “ಮಗೂ, ಹೀಗೇಕೆ ದುಃಖಿಸುತ್ತಿರುವೆ? ಏನಾಯಿತು?" ಎಂದು ಕೇಳಿದರು. ಆಗ ಶಿವಾಜಿ, “ಗುರುಗಳೇ, ನನಗೆ ಈ ರಾಜ್ಯಾಧಿಕಾರ, ವೈಭೋಗ, ಸಂಪತ್ತು, ಯುದ್ಧ, ಸಾವು- ನೋವು ಎಲ್ಲವೂ ಸಾಕಾಗಿವೆ. ಸನ್ಯಾಸಾಶ್ರಮ ಸ್ವೀಕರಿಸಿ ನಿಮ್ಮ ಜತೆಗೆ ಬರುವೆ" ಎಂದ.

ಈ ಮಾತಿಗೆ ಸಮರ್ಥ ರಾಮದಾಸರು ಯಾವ ಭಾವವನ್ನೂ ವ್ಯಕ್ತಪಡಿಸದೆ, “ಸರಿ ಹಾಗಾ ದರೆ, ನೀನು ಸನ್ಯಾಸ ಸ್ವೀಕರಿಸು, ನಿನ್ನ ರಾಜ್ಯಾಧಿಕಾರವನ್ನು ನನಗೆ ಕೊಡು, ನಾನು ನಡೆಸಿ ಕೊಂಡು ಹೋಗುವೆ" ಎಂದರು. ಗುರುಗಳ ಮಾತು ಕೇಳಿ ಶಿವಾಜಿಗೆ ತನ್ನ ಮನದ ಭಾರವೆಲ್ಲಾ ಇಳಿದಂತೆ ಅನಿಸಿ, ಕೂಡಲೇ ಮಂತ್ರಿಗಳನ್ನು ಕರೆಸಿದ. ರಾಜ್ಯಾಧಿಕಾರದ ದಾಖಲೆಗಳೆಲ್ಲವನ್ನೂ ಸಮರ್ಥ ರಾಮದಾಸರ ಹೆಸರಿಗೆ ಬರೆಸಿ, ಆ ಪತ್ರವನ್ನು ಅವರ ಜೋಳಿಗೆಗೆ ಹಾಕಿಬಿಟ್ಟ.

ಶಿವಾಜಿಯನ್ನು ಆಶೀರ್ವದಿಸಿದ ಗುರುಗಳು ಕೆಲಕ್ಷಣದ ನಂತರ, ತಮ್ಮ ಜೋಳಿಗೆಯಲ್ಲಿದ್ದ ರಾಜ್ಯಾಧಿಕಾರದ ಪತ್ರ ಗಳನ್ನು ಕೈಯಲ್ಲಿ ಹಿಡಿದು, “ಶಿವಾಜಿ, ಈ ರಾಜ್ಯದ ಅಧಿಕಾರವನ್ನು ನಾನು ಸಂಪೂರ್ಣವಾಗಿ ಸ್ವೀಕರಿಸಿರುವೆ, ನೀನು ಚಿಂತಿಸುವ ಅಗತ್ಯವಿಲ್ಲ. ಆದರೆ ನಿನ್ನ ಗುರುವಾಗಿ ಸದ್ಯಕ್ಕೆ ನಿನಗೊಂದು ಆದೇಶ ಕೊಡುವೆ. ನನ್ನ ಈ ರಾಜ್ಯವನ್ನು ಮತ್ತು ಅದರ ಸಂಪತ್ತನ್ನು ನೀನು ಸಮರ್ಪಕವಾಗಿ ನಿಭಾಯಿಸಬೇಕು" ಎಂದು ಹೇಳಿ ಅವನ ಕೈಗೆ ದಾಖಲೆ ಪತ್ರಗಳನ್ನು ನೀಡಿದರು.

ಶುರುವಿನಿಂದಲೂ ಗುರುಗಳ ಒಂದೇ ಒಂದು ಮಾತನ್ನೂ ಶಿವಾಜಿ ಧಿಕ್ಕರಿಸಿರಲಿಲ್ಲ. ಈಗಲೂ ಅದಕ್ಕೇ ಬದ್ಧನಾಗಿದ್ದ ಅವನು, ‘ಇದು ಗುರುಗಳ ಆದೇಶ, ಅದರನ್ವಯ ನಾನು ರಾಜ್ಯಾಧಿಕಾರವನ್ನು ನಡೆಸಬೇಕು. ಇನ್ನು ಮುಂದೆ ನನಗೆ ಕರ್ಮ ಗಳನ್ನು ಮಾಡುವ ಅಧಿಕಾರವಿದೆಯೇ ಹೊರತು, ಅದರ ಫಲದಲ್ಲಿ ಅಲ್ಲ. ಗುರುವಾಜ್ಞೆಯನ್ನು ನಾನು ಪಾಲಿಸ ಬೇಕು, ಅಷ್ಟೇ’ ಎಂಬ ಭಾವದಿಂದ ಆ ಪತ್ರಗಳನ್ನು ಸ್ವೀಕರಿಸಿದ.

ಸಮರ್ಥ ರಾಮದಾಸರು ಶಿವಾಜಿ ಮಹಾರಾಜನ ಜತೆಗಿದ್ದು, ಅವನ ಎಲ್ಲಾ ಸಮಸ್ಯೆಗಳಿಗೂ ಪರಿಹಾರಮಾರ್ಗ ತೋರಿಸಿ ಬಗೆಹರಿಸುತ್ತಿದ್ದರು. ಹಾಗೆ, ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ರಾಜ್ಯವು ನಡೆಯುವಂತಾಗಲು ಅವರೇ ಶಿವಾಜಿಗೆ ಮಾರ್ಗದರ್ಶಕರಾಗಿದ್ದು ಪ್ರೇರೇಪಣೆ ನೀಡಿದ್ದರು. ಸದ್ವಿಚಾರ ಸಂಗ್ರಹದಲ್ಲಿ ಸಿಗುವ ಗುರು-ಶಿಷ್ಯರ ಈ ಸಂಬಂಧವು, ಒಬ್ಬ ಒಳ್ಳೆಯ ಗುರುವಿದ್ದಾಗ ನಾವು ಹೇಗೆ ಭವಸಾಗರವನ್ನು ಆತ್ಮವಿಶ್ವಾಸದಿಂದ ದಾಟಲು ಸಾಧ್ಯ ವಾಗುತ್ತದೆ ಎಂಬುದನ್ನು ನಿರೂಪಿಸುತ್ತದೆ.