BBK 11: ಬಿಗ್ ಬಾಸ್ ಮನೆಗೆ ಈ ಸೀಸನ್ನ ಹಳೆಯ ಸ್ಪರ್ಧಿಗಳು ಎಂಟ್ರಿ: ಹೈಲೇಟ್ ಆದ ಉಗ್ರಂ ಮಂಜು
ಶಿಶಿರ್, ಗೋಲ್ಡ್ ಸುರೇಶ್, ಐಶ್ವರ್ಯಾ, ಲಾಯರ್ ಜಗದೀಶ್, ಹಂಸ, ಮಾನಸ, ಧರ್ಮ ಕೀರ್ತಿರಾಜ್ ಎಲಿಮಿನೇಟ್ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇವರು ಒಳಗೆ ಹೋಗಿ ಸ್ಪರ್ಧಿಗಳಿಗೆ ಎನರ್ಜಿ ತುಂಬಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಇದೆ. ಮುಂದಿನ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಹೀಗಾಗಿ ಉಳಿದಿರುವ ದಿನಗಳು ಸ್ಪರ್ಧಿಗಳಿಗೆ ಬಹಳ ಮಹತ್ವದ್ದಾಗಿದೆ. ಇದರ ನಡುವೆ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ರದ್ದಾದ ಕಾರಣ ವೀಕೆಂಡ್ನಲ್ಲಿ ಡಬಲ್ ಎಲಿಮಿನೇಷನ್ನಲ್ಲಿ ನಡೆಯಲಿದೆ. ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮುಖ್ಯವಾದ ಟರ್ನಿಂಗ್ ಪಾಯಿಂಟ್ ಆಗಿದೆ. ಇದಕ್ಕಾಗಿ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳಿಗೆ ಇನ್ನಷ್ಟು ಎನರ್ಜಿ, ಖುಷಿ ತುಂಬಲು ಈ ಸೀಸನ್ನಲ್ಲಿ ಮನೆಯಿಂದ ಹೊರ ಬಂದಿರುವ ಸ್ಪರ್ಧಿಗಳು ಅತಿಥಿಗಳಾಗಿ ವಾಪಸ್ ದೊಡ್ಮನೆಗೆ ತೆರಳಲಿದ್ದಾರೆ. ಆದರೆ, ಇಲ್ಲಿ ಹೈಲೇಟ್ ಆಗಿದ್ದು ಉಗ್ರಂ ಮಂಜು. ಹಳೆಯ ಸ್ಪರ್ಧಿಗಳು ಮನೆಯೊಳಗೆ ಬಂದು ಏನೆಲ್ಲ ಮಾತನಾಡಿದ್ರು?, ಮಂಜು ಹೈಲೇಟ್ ಆಗಿದ್ದು ಏಕೆ?, ಈ ಕುರಿತ ಸಂಪೂರ್ಣ ಮಹಿತಿ ಇಲ್ಲಿದೆ.
ಸದ್ಯ ದೊಡ್ಮನೆಯಲ್ಲಿ ತ್ರಿವಿಕ್ರಮ್, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಕಿಶನ್, ಧನರಾಜ್ ಆಚಾರ್, ಹನುಮಂತ, ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಇವರಲ್ಲಿ ಇಬ್ಬರು ಈ ವಾರ ಎಲಿಮಿನೇಟ್ ಆಗಲಿದ್ದಾರೆ. ಹೀಗಿರುವಾಗ ಶಿಶಿರ್, ಗೋಲ್ಡ್ ಸುರೇಶ್, ಐಶ್ವರ್ಯಾ, ಲಾಯರ್ ಜಗದೀಶ್, ಹಂಸ, ಮಾನಸ, ಧರ್ಮ ಕೀರ್ತಿರಾಜ್ ಎಲಿಮಿನೇಟ್ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇವರು ಒಳಗೆ ಹೋಗಿ ಸ್ಪರ್ಧಿಗಳಿಗೆ ಎನರ್ಜಿ ತುಂಬಿದ್ದಾರೆ. ಮಾಡುತ್ತಿರುವ ತಪ್ಪುಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಮನೆಯಲ್ಲಿ ವರ್ತನೆ ಯಾವ ರೀತಿ ಇದೆ ಎನ್ನುವುದನ್ನು ತಿಳಿ ಹೇಳಿದ್ದಾರೆ.
ಆದರೆ, ಬಂದ ಮಾಜಿ ಸ್ಪರ್ಧಿಗಳ ಪೈಕಿ ಹೆಚ್ಚಿನವರು ಉಗ್ರಂ ಮಂಜು ಬಗ್ಗೆಯೇ ಮಾತನಾಡಿದ್ದಾರೆ. ಮನೆಗೆ ಬಂದ ಅತಿಥಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಸಣ್ಣದೊಂದು ಟಾಸ್ಕ್ ನೀಡಿದ್ದಾರೆ. ಈ ಮನೆಯಲ್ಲಿ ಸಿಹಿ-ಕಹಿ ಅನುಭವಗಳು, ಕೂಡಿಟ್ಟುಕೊಂಡ ನೆನಪುಗಳು ಬಹಳಷ್ಟಿವೆ. ಇದರ ಬಗ್ಗೆ ಮಾತನಾಡಬೇಕು ಎಂಬ ಟಾಸ್ಕ್ ನೀಡಲಾಗಿದೆ. ಈ ಸಂದರ್ಭ ಹೆಚ್ಚಿನ ಸ್ಪರ್ಧಿಗಳು ಕೆಟ್ಟ ಘಟನೆ ವಿಚಾರದಲ್ಲಿ ಮಂಜು ಹೆಸರನ್ನೇ ತೆಗೆದುಕೊಂಡಿದ್ದಾರೆ. ಇದಕ್ಕೆ ಮಂಜು ಕೊಟ್ಟ ಉತ್ತರ ಕೂಡ ಅದ್ಭುತವಾಗಿತ್ತು.
ನೆನಪಿನ ಮೂಟೆ ಹೊತ್ತು ತಂದ ಹಳೆ ಕಂಟೆಸ್ಟೆಂಟ್ಸ್!
— Colors Kannada (@ColorsKannada) January 17, 2025
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/LlkIl8MIVN
ತುಂಬಾ ಸಲ ಮಂಜು ಅವರು ನನಗೆ ಹರ್ಟ್ ಮಾಡಿದ್ದಾರೆ ಎಂದು ಹಂಸ ಹೇಳಿದ್ದಾರೆ. ಯಾಕೆ ನನ್ ಜೊತೆನೆ ಜಗಳ ಆಡಿದ್ರಿ ಅಂತ ನನ್ಗೆ ಅನ್ನಿಸ್ತಾ ಇತ್ತು ಎಂದು ಮಾನಸಾ ಹೇಳಿದರೆ, ರಾಜನ ಟಾಸ್ಕ್ನಲ್ಲಿ ನನ್ನ ಎಳೆದು ಕೆಳಗೆ ಹಾಕಿದ್ದು.. ಇವತ್ತು ನನ್ಗೆ ಅದ್ರ ಬಗ್ಗೆ ನೋವಿದೆ ಎಂದು ಶಿಶಿರ್ ಹೇಳಿದ್ದಾರೆ. ಈ ಎಲ್ಲ ಆರೋಪಕ್ಕೆ ಉತ್ತರ ಕೊಟ್ಟ ಮಂಜು, ನಾಲ್ಕು ವಾರ-ಐದು ವಾರಗಳ ಹಿಂದೆ ಮಂಜು ಹೇಗಿದ್ದ ಇವಾಗ ಯಾಕೋ ಕಾಣಿಸ್ತಿಲ್ಲ ಎಂದು ಮಾತನಾಡ್ತಾ ಇರೋರಿಗೆ ಈಗ ಉತ್ತರ ಸಿಕ್ಕಿದೆ ಅಂತ ಅನ್ಕೋತಿನಿ ಎಂದು ನೇರವಾಗಿ ಹೇಳಿದ್ದಾರೆ.