BBK 11: ಗ್ರ್ಯಾಂಡ್ ಫಿನಾಲೆಗೆ ಬಿಗ್ ಬಾಸ್ ಟೀಮ್ ತಯಾರಿ: 5 ಫೈನಲಿಸ್ಟ್ ಯಾರು?
ಬಿಗ್ ಬಾಸ್ ಟೀಮ್ ಗ್ರ್ಯಾಂಡ್ ಫಿನಾಲೆಗೆ ತಯಾರು ಮಾಡುತ್ತಿದೆ. ಜನವರಿ 25 ಹಾಗೂ 26ರಂದು ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಜನವರಿ 25ರ ಶನಿವಾರ ಎಲಿಮಿನೇಷನ್‌ಗೆ ಹೊಸ ಟ್ವಿಸ್ಟ್ ಕೊಟ್ಟರೆ ಜನವರಿ 26ರ ಭಾನುವಾರ ಬಿಗ್ ಬಾಸ್ ಸೀಸನ್ 11 ಕಪ್ ಗೆದ್ದವರು ಯಾರು ಅನ್ನೋದು ಗೊತ್ತಾಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟದತ್ತ ಸಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದ್ದು, ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಸದ್ಯ ಮನೆಯಲ್ಲಿ ಎಂಟು ಮಂದಿ ಇದ್ದಾರಷ್ಟೆ. ಹೀಗಾಗಿ ಈ ವಾರ ಟ್ವಿಸ್ಟ್-ಟರ್ನ್ಗಳ ಜೊತೆ ಟಾಸ್ಕ್ಗಳ ಕಾವು ಮತ್ತಷ್ಟು ಏರಿದೆ. ಇದರ ನಡುವೆ ಫೈನಲ್ಗೆ ಅರ್ಹತೆ ಪಡೆಯುವ ಸ್ಪರ್ಧಿಗಳು ಯಾರು ಎಂಬುದು ಕುತೂಹಲ ಕೆರಳಿಸಿದೆ. ಇಂದು ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯಲಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ, ರಜತ್, ಮೋಕ್ಷಿತಾ, ಉಗ್ರಂ ಮಂಜು, ಗೌತಮಿ ಹಾಗೂ ಧನರಾಜ್ ಉಳಿದುಕೊಂಡಿದ್ದಾರೆ. ಈ 8 ಸ್ಪರ್ಧಿಗಳಲ್ಲಿ ಐದು ಸ್ಪರ್ಧಿಗಳು ಮಾತ್ರ ಟಾಪ್ 5 ಫೈನಲಿಸ್ಟ್ ಆಗಿ ಆಯ್ಕೆಯಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಫೈನಲಿಸ್ಟ್ ಯಾರೆಂಬುದು ಬಹಿರಂಗವಾಗಲಿದೆ.
ಅತ್ತ ಬಿಗ್ ಬಾಸ್ ಟೀಮ್ ಗ್ರ್ಯಾಂಡ್ ಫಿನಾಲೆಗೆ ತಯಾರು ಮಾಡುತ್ತಿದೆ. ಜನವರಿ 25 ಹಾಗೂ 26ರಂದು ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಜನವರಿ 25ರ ಶನಿವಾರ ಎಲಿಮಿನೇಷನ್‌ಗೆ ಹೊಸ ಟ್ವಿಸ್ಟ್ ಕೊಟ್ಟರೆ ಜನವರಿ 26ರ ಭಾನುವಾರ ಬಿಗ್ ಬಾಸ್ ಸೀಸನ್ 11 ಕಪ್ ಗೆದ್ದವರು ಯಾರು ಅನ್ನೋದು ಗೊತ್ತಾಗಲಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದೆ. ಈ ವಿಶೇಷ ದಿನದಂದೇ ಫಿನಾಲೆ ನಡೆಯುವ ಸಾಧ್ಯತೆಯಿದೆ.
ಇದೇ ವಾರ ಹಿಂದಿ ಫಿನಾಲೆ:
ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಭಾಷೆಯ ಬಿಗ್ ಬಾಸ್ 18 ರೋಚಕವಾಗಿ ಸಾಗಿದ ಬಳಿಕ ಫಿನಾಲೆ ವಾರಕ್ಕೆ ಲಗ್ಗೆಯಿಟ್ಟಿದೆ. ಇದೀಗ ಅಂತಿಮ ಹಣಾಹಣಿಗೆ ಸಿದ್ಧವಾಗಿದೆ. ಬಿಗ್ ಬಾಸ್ 18 ಕಾರ್ಯಕ್ರಮದ ಫಿನಾಲೆ ಜನವರಿ 19 ಅಂದರೆ ಭಾನುವಾರ ರಾತ್ರಿ 9:30ಕ್ಕೆ ಬಿಗ್ ಪ್ರಸಾರವಾಗಲಿದೆ.
ಫಿನಾಲೆಯಲ್ಲಿ ಉಳಿದಿರುವ ಸ್ಪರ್ಧಿಗಳು ಶ್ರುತಿಕಾ ಅರ್ಜುನ್, ಚಾಹತ್ ಪಾಂಡೆ , ಮತ್ತು ಶಿಲ್ಪಾ ಶಿರೋಡ್ಕರ್ ಎಲಿಮಿನೇಷನ್ ಬಳಿಕ ಅಂತಿಮವಾಗಿ ರಜತ್ ದಲಾಲ್, ವಿವಿಯನ್ ಡಿಸೇನಾ, ಅವಿನಾಶ್ ಮಿಶ್ರಾ, ಈಶಾ ಸಿಂಗ್, ಚುಮ್ ದಾರಂಗ್ ಮತ್ತು ಕರಣ್ ವೀರ್ ಮೆಹ್ರಾ ಉಳಿದಿದ್ದಾರೆ. ಇವರುಗಳ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯಲಿದ್ದಾರೆ.
BBK 11: ಮಿಡ್ ವೀಕ್ ಎಲಿಮಿನೇಷನ್ ರದ್ದು: ಧನರಾಜ್ಗೆ ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್