Physical Assault: ಇದು ಅತ್ಯಾಚಾರವಲ್ಲ, ಆರೋಪಿ ಕತ್ತಲ್ಲಿದೆ ಲವ್ ಬೈಟ್ಸ್; ಹೊಸ ಬಾಂಬ್ ಸಿಡಿಸಿದ ಮೋನೋಜಿತ್ ಪರ ವಕೀಲ
ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯ ಪರ ವಕೀಲರು, ಮೋನೋಜಿತ್ ಮಿಶ್ರಾ ಸಂತ್ರಸ್ತೆಯ ಮೇಲೆ ಹೊಸ ಆರೋಪವನ್ನು ಮಾಡಿದ್ದಾರೆ. ಆರೋಪಿ ಮೋನೋಜಿತ್ ಮಿಶ್ರಾ ಅವರ ದೇಹದ ಮೇಲೆ ಗೀರುಗಳ ಗುರುತುಗಳ ಜೊತೆಗೆ, ಆತನ ಕುತ್ತಿಗೆ ಮೇಲೆ ಲವ್ ಬೈಟ್‌ಗಳು ಪತ್ತೆಯಾಗಿವೆ.


ಕೊಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ (Physical Assault) ಪ್ರಮುಖ ಆರೋಪಿಯ ಪರ ವಕೀಲರು, ಮೋನೋಜಿತ್ ಮಿಶ್ರಾ ಸಂತ್ರಸ್ತೆಯ ಮೇಲೆ ಹೊಸ ಆರೋಪವನ್ನು ಮಾಡಿದ್ದಾರೆ. ಆರೋಪಿ ಮೋನೋಜಿತ್ ಮಿಶ್ರಾ ಅವರ ದೇಹದ ಮೇಲೆ ಗೀರುಗಳ ಗುರುತುಗಳ ಜೊತೆಗೆ, ಆತನ ಕುತ್ತಿಗೆ ಮೇಲೆ ಲವ್ ಬೈಟ್‌ಗಳು ಪತ್ತೆಯಾಗಿವೆ. ಆದರೆ ಅದನ್ನು ಪ್ರಾಸಿಕ್ಯೂಷನ್ ಬಹಿರಂಗಪಡಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದೊಂದು ಪಿತೂರಿಯಾಗಿದ್ದು, ತನ್ನ ಕಕ್ಷಿದಾರನನ್ನು ಸಿಲುಕಿಸಲಾಗಿದೆ ಎಂದು ಅವರು ಹೇಳಿದರು.
ಕಾನೂನು ಕಾಲೇಜಿನ ಆವರಣದಲ್ಲಿ 24 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಮೂವರಲ್ಲಿ ತೃಣಮೂಲ ಕಾಂಗ್ರೆಸ್‌ನ ಮಾಜಿ ವಿದ್ಯಾರ್ಥಿ ವಿಭಾಗದ ನಾಯಕ ಮೋನೋಜಿತ್ ಸೇರಿದ್ದಾರೆ. ಅವರನ್ನು ಜುಲೈ 8 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. "ಪ್ರಮುಖ ಆರೋಪಿಯ ದೇಹದ ಮೇಲೆ ಗೀರು ಗುರುತುಗಳು ಕಂಡುಬಂದಿವೆ ಎಂದು ಪ್ರಾಸಿಕ್ಯೂಷನ್ ನಿಮಗೆ ತಿಳಿಸಿದೆ. ಮೋನೋಜಿತ್ ಮಿಶ್ರಾ ಅವರ ದೇಹದ ಮೇಲೂ ಲವ್ ಬೈಟ್‌ಗಳು ಕಂಡು ಬಂದಿವೆ. ಅತ್ಯಾಚಾರ ನಡೆದರೆ, ಆರೋಪಿಯ ದೇಹದ ಮೇಲೆ ಗುರುತು ಹಾಗೂ ಲವ್ ಬೈಟ್‌ಗಳು ಕಾಣಿಸುವುದಿಲ್ಲ. ಇಬ್ಬರ ಒಪ್ಪಿಗೆ ಮೇರೆಗೆ ನಡೆದಿದ್ದರೆ ಮಾತ್ರ ಇಂತಹ ಗುರುತು ಕಂಡು ಬರುತ್ತದೆ ಎಂದು ಎಂದು ವಕೀಲರಾದ ವಕೀಲ ರಾಜು ಗಂಗೂಲಿ ಹೇಳಿದರು.
ವೈದ್ಯಕೀಯ-ಕಾನೂನು ಪರೀಕ್ಷೆಯಲ್ಲಿ ಮೋನೋಜಿತ್ ದೇಹದ ಮೇಲೆ ಗೀರು ಗುರುತುಗಳು ಬಹಿರಂಗವಾದ ನಂತರ ಅವರ ಹೇಳಿಕೆ ಹೊರಬಿದ್ದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗಂಗೂಲಿ, ಸಂತ್ರಸ್ತೆಯ ಹೇಳಿಕೆಯಲ್ಲಿ ಹಲವು ಅಸತ್ಯಗಳು ಕಾಣಸಿಗುತ್ತವೆ. ತಮ್ಮ ಕಕ್ಷಿದಾರರನ್ನು ಪ್ರಕರಣದಲ್ಲಿ ಸಿಲುಕಿಸಲು ಪಿತೂರಿ ನಡೆದಿದೆ. ಸಂತ್ರಸ್ತೆಯ ಫೋನ್ ಕರೆಯನ್ನು ಪರಿಶೀಲಿಸಬೇಕು. ಸಂತ್ರಸ್ತರ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆಯೇ ಎಂದು ನಾವು ಪ್ರಾಸಿಕ್ಯೂಷನ್ ಅನ್ನು ಕೇಳಿದ್ದೇವೆ. ಹೌದು ಎಂದಾದರೆ, ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೋಲ್ಕತಾ ಸಾಮೂಹಿಕ ಅತ್ಯಾಚಾರ ಆರೋಪಿ ಮೊನೊಜಿತ್ ಮಿಶ್ರಾನ ಕಾಮಕಾಂಡ ಒಂದೊಂದೇ ಬೆಳಕಿಗೆ; ಆತನಿಂದ ತಪ್ಪಿಸಿಕೊಳ್ಳಲು ಕ್ಲಾಸ್ ಬಂಕ್ ಮಾಡುತ್ತಿದ್ದ ವಿದ್ಯಾರ್ಥಿನಿಯರು
ಪೊಲೀಸರಿಗೆ ದೂರು ನೀಡುವಲ್ಲಿ ವಿಳಂಬವಾದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಗಂಗೂಲಿ, ಘಟನೆಯ ನಂತರ ಸಂತ್ರಸ್ತೆಯ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಘಟನೆ ರಾತ್ರಿ 10.30 ಕ್ಕೆ ನಡೆದಿದೆ ಎಂದು ವಕೀಲರು ಹೇಳಿದ್ದರೂ, ಮರುದಿನ ಸಂಜೆ 4.45 ಕ್ಕೆ ದೂರು ದಾಖಲಿಸಿದ್ದಾರೆ. ಕಾಲೇಜಿನಿಂದ ಹೊರಬಂದ ತಕ್ಷಣ ಅವಳು ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ಏಕೆ ಹೋಗಲಿಲ್ಲ? ಮರುದಿನಕ್ಕಾಗಿ ಅವಳು ಏಕೆ ಕಾಯುತ್ತಿದ್ದಳು? ಇದು ಸುಳ್ಳು ದೂರು. ಅವಳು ಏನು ಮಾಡುತ್ತಾಳೆ ಎಂಬುದರ ಕುರಿತು ನಮ್ಮಲ್ಲಿ ಪುರಾವೆಗಳಿವೆ ಎಂದು ಹೇಳಿದ್ದಾರೆ.