Ceasefire In Ukraine: ರಷ್ಯಾ-ಉಕ್ರೇನ್ ಯುದ್ದಕ್ಕೆ ತಾತ್ಕಾಲಿಕ ತಡೆ; ಮೇ 8ರಿಂದ ಕದನ ವಿರಾಮ ಘೋಷಿಸಿದ ಪುಟಿನ್
Vladimir Putin: 3 ವರ್ಷಗಳ ಹಿಂದೆ ಆರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ದ ಇನ್ನೂ ಮುಂದುವರಿದಿದೆ. ಈ ಮಧ್ಯೆ ರಷ್ಯಾ ಮುಂದಿನ ತಿಂಗಳು 3 ದಿನಗಳ ಕದನ ವಿರಾಮ ಘೋಷಿಸಿದೆ. ರಷ್ಯಾ ಘೋಷಿಸಿದ 72 ಗಂಟೆಗಳ ಕದನ ವಿರಾಮ ಮೇ 8ರಂದು ಆರಂಭವಾಗಿ ಮೇ 10ಕ್ಕೆ ಮುಕ್ತಾಯವಾಗಲಿದೆ. ಈ ವೇಳೆ ಕದನ ವಿರಾಮವನ್ನು ಉಲ್ಲಂಘಿಸಿದರೆ ಅದರ ಪರಿಣಾಮ ತೀವ್ರವಾಗಿರಲಿದೆ ಎಂದು ರಷ್ಯಾ ಎಚ್ಚರಿಸಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್.

ಮಾಸ್ಕೋ: 3 ವರ್ಷಗಳ ಹಿಂದೆ ಆರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ದ ಇನ್ನೂ ಮುಂದುವರಿದಿದೆ (Russia-Ukraine war). ಈ ಮಧ್ಯೆ ರಷ್ಯಾ ಮುಂದಿನ ತಿಂಗಳು 3 ದಿನಗಳ ಕದನ ವಿರಾಮ ಘೋಷಿಸಿದೆ. ಮೇ 8ರಿಂದ 10ರವರೆಗೆ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದರು (Ceasefire In Ukraine). ಇತ್ತ ಉಕ್ರೇನ್ ಕೂಡ ಕದನ ವಿರಾಮ ಘೋಷಿಸುವಂತೆ ಅವರು ಕರೆ ನೀಡಿದರು.
ರಷ್ಯಾ ಘೋಷಿಸಿದ 72 ಗಂಟೆಗಳ ಕದನ ವಿರಾಮ ಮೇ 8ರಂದು ಆರಂಭವಾಗಿ ಮೇ 10ಕ್ಕೆ ಮುಕ್ತಾಯವಾಗಲಿದೆ. ಈ ವೇಳೆ ಕದನ ವಿರಾಮವನ್ನು ಉಲ್ಲಂಘಿಸಿದರೆ ಅದರ ಪರಿಣಾಮ ತೀವ್ರವಾಗಿರಲಿದೆ ಎಂದೂ ರಷ್ಯಾ ಎಚ್ಚರಿಸಿದೆ. ವಿಶೇಷ ಎಂದರೆ ಮೇ 9ರಂದು ರಷ್ಯಾ 2ನೇ ವಿಶ್ವ ಯುದ್ಧದ ವಿಜಯ ದಿವಸವನ್ನು ಆಚರಿಸಲಿದೆ.
"ಮಾನವೀಯತೆಯ ಆಧಾರದ ಮೇಲೆ ರಷ್ಯಾ ವಿಜಯ ದಿನದ 80ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕದನ ವಿರಾಮವನ್ನು ಘೋಷಿಸುತ್ತಿದೆ" ಎಂದು ಮೂಲಗಳು ತಿಳಿಸಿವೆ. ಈ ಅವಧಿಯಲ್ಲಿ "ಎಲ್ಲ ರೀತಿಯ ದಾಳಿಗಳನ್ನು ನಿಲ್ಲಿಸಲಾಗುತ್ತಿದೆʼʼ ಎಂದು ಹೇಳಿದೆ. "ಉಕ್ರೇನ್ ಕೂಡ ಈ ಇದನ್ನು ಅನುಸರಿಸಬೇಕು. ಒಂದುವೇಳೆ ಉಕ್ರೇನ್ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾದರೆ ರಷ್ಯಾದ ಸಶಸ್ತ್ರ ಪಡೆ ಸೂಕ್ತ ಉತ್ತರ ನೀಡಲಿದೆʼʼ ಎಂದು ಪ್ರಕಟಣೆ ಎಚ್ಚರಿಸಿದೆ.
ಉಕ್ರೇನ್‌ನಲ್ಲಿ 3 ದಿನಗಳ ಕದನ ವಿರಾಮ ಘೋಷಿಸಿದ ರಷ್ಯಾ:
🇷🇺 PUTIN ANNOUNCES 3-DAY CEASEFIRE IN UKRAINE FOR WWII ANNIVERSARY
— Mario Nawfal (@MarioNawfal) April 28, 2025
Putin says he’s hitting pause on the war in Ukraine from May 8 to May 10 to mark the 80th anniversary of Victory Day — Russia’s big WWII celebration.
The Kremlin claims it’s ready for peace talks again, but… https://t.co/uGloPA9n2e pic.twitter.com/vVCnc7Pqio
ಈ ಸುದ್ದಿಯನ್ನೂ ಓದಿ: Russian Strike On Ukrainian: ಪಾಮ್ ಭಾನುವಾರದಂದು ಉಕ್ರೇನ್ ಮೇಲೆ ರಷ್ಯಾ ದಾಳಿ; 31 ಮಂದಿ ಬಲಿ
ಡೊನಾಲ್ಡ್ ಟ್ರಂಪ್ ಕರೆಯ ಬೆನ್ನಲ್ಲೇ ಕದನ ವಿರಾಮ ಘೋಷಣೆ
ಇತ್ತೀಚೆಗೆ ಅಮೆರಿಕ ಸಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ದವನ್ನು ನಿಲ್ಲಿಸುವಂತೆ ಕರೆ ನೀಡಿದ್ದರು. ರಾಜತಾಂತ್ರಿಕ ವಿಧಾನಗಳ ಮೂಲಕ ಯುದ್ಧ ಕೊನೆಗೊಳಿಸುವಂತೆ ಅವರು ಸೂಚಿಸಿದ್ದರು. ಶೂಟಿಂಗ್ ನಿಲ್ಲಿಸಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಡೊನಾಲ್ಡ್ ಟ್ರಂಪ್ ಅವರು ಪುಟಿನ್ ಅವರನ್ನು ಒತ್ತಾಯಿಸಿದ ಬೆನ್ನಲ್ಲೇ ಕದನ ವಿರಾಮದ ಪ್ರಕಟಣೆ ಹೊರ ಬಿದ್ದಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವ ಅಮೆರಿಕ ಯತ್ನ ನಿರೀಕ್ಷಿತ ಫಲ ಕಂಡಿಲ್ಲ. ಅದಾಗ್ಯೂ ಈ ಬಗ್ಗೆ ಆಗ್ರಹಿಸುತ್ತಲೇ ಬಂದಿದೆ.
ಈ ಹಿಂದೆ ಈಸ್ಟರ್ ಸಮಯದಲ್ಲಿ ರಷ್ಯಾ 30 ಗಂಟೆಗಳ ಕದನ ವಿರಾಮವನ್ನು ಘೋಷಿಸಿತ್ತು. ಆದರೆ ಎರಡೂ ಕಡೆಯವರು ಕದನ ವಿರಾಮವನ್ನು ಉಲ್ಲಂಘಿಸಿದ್ದವು. ಕಳೆದ ತಿಂಗಳು ಉಕ್ರೇನ್ ಒಪ್ಪಿಕೊಂಡಿದ್ದ 30 ದಿನಗಳ ಕದನ ವಿರಾಮವನ್ನು ಪುಟಿನ್ ತಿರಸ್ಕರಿಸಿದ್ದರು. ರಷ್ಯಾ ಮತ್ತು ಉಕ್ರೇನ್ ಯುದ್ಧ 2022ರ ಫೆಬ್ರವರಿಯಲ್ಲಿ ಆರಂಭಗೊಂಡಿದ್ದು, ಈಗಲೂ ಮುಂದುವರಿದಿದೆ.
ಉಕ್ರೇನ್‌ನೊಂದಿಗೆ ನೇರವಾಗಿ ಮಾತುಕತೆ ನಡೆಸಲು ಸಿದ್ಧ ಎಂದು ರಷ್ಯಾ ಹೇಳಿದೆ. ಇತ್ತ ರಷ್ಯಾ ನಡೆಯನ್ನು ಖಂಡಿಸಿದ ಉಕ್ರೇನ್ ತಮ್ಮಿಂದ ರಷ್ಯಾ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಕಾನೂನುಬಾಹಿರ ಕಬಳಿಕೆ ಎಂದು ಖಂಡಿಸಿದೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ "ನಾವು ಮಾತುಕತೆಗೆ ಸಿದ್ಧ. ಆದರೆ ಉಕ್ರೇನ್ ಮುಂದೆ ಬರುತ್ತಿಲ್ಲ" ಎಂದು ಹೇಳಿದ್ದರು.