Book Release: ಮಾ.16 ರಂದು ಡಿವಿಜಿ ಬಳಗ ಪ್ರತಿಷ್ಠಾನದಿಂದ ಎರಡು ಪುಸ್ತಕಗಳ ಲೋಕಾರ್ಪಣೆ
Book Release: ಡಿವಿಜಿ ಬಳಗ ಪ್ರತಿಷ್ಠಾನದಿಂದ ಡಿವಿಜಿ ಕುರಿತಾಗಿ ಕಾಮಿಕ್ಸ್ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಮೂಡಿಬಂದಿರುವ ಎರಡು ILLUSTRATIVE ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು (ʼಎಲ್ಲರೊಳಗೊಂದಾಗುʼ ಮಕ್ಕಳಿಗಾಗಿ ಡಿವಿಜಿ, ʼBe one with the universe’ DVG for children) ಮಾ.16 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು ನಗರದ ಅಂಬೇಡ್ಕರ್ ವೀಧಿಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಡಿವಿಜಿ ಬಳಗ ಪ್ರತಿಷ್ಠಾನದಿಂದ ಡಿವಿಜಿ ಕುರಿತಾಗಿ ಕಾಮಿಕ್ಸ್ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಮೂಡಿಬಂದಿರುವ ಎರಡು ILLUSTRATIVE ಪುಸ್ತಕಗಳ ಲೋಕಾರ್ಪಣೆ (Book Release) ಕಾರ್ಯಕ್ರಮವು (ʼಎಲ್ಲರೊಳಗೊಂದಾಗುʼ ಮಕ್ಕಳಿಗಾಗಿ ಡಿವಿಜಿ, ʼBe one with the universe’ DVG for children) ಮಾ.16 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು ನಗರದ ಅಂಬೇಡ್ಕರ್ ವೀಧಿಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಲಾಗಿದೆ. ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಕೃತಿ ಲೋಕಾರ್ಪಣೆ ಹಾಗೂ ಕೃತಿ ಪರಿಚಯ ಮಾಡುವರು. ಪ್ರೇಕ್ಷಾ ಪತ್ರಿಕೆ ಸಹಸಂಪಾದಕ ಬಿ.ಎನ್. ಶಶಿಕಿರಣ್ ವಿಶೇಷ ಉಪನ್ಯಾಸ ನೀಡುವರು.

ರೋಟರಿ ಡಿವಿಜಿ ಅಭಿಮಾನಿ ಬಳಗದ ನಾ. ಉದಯಶಂಕರ ಮತ್ತು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯಕುಮಾರ್ ಎಂ. ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಕೃತಿಕಾರ ಸತ್ಯೇಶ್ ಎನ್. ಬೆಳ್ಳೂರ್, ಚಿತ್ರಕಾರ ಬಿ.ಜಿ. ಗುಜ್ಜಾರಪ್ಪ ಹಾಗೂ ಡಿವಿಜಿ ಬಳಗ ಪ್ರತಿಷ್ಠಾನದ ಸಂಚಾಲಕ ಸಿ. ಕನಕರಾಜು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್ ಆಫ್ ಬರೋಡಾದ 518 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ