ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಮೃಗಾಲಯದಲ್ಲಿ ಸಿಗರೇಟ್ ಸೇದಿದ ಚಿಂಪಾಂಜಿ; ವಿಡಿಯೊ ವೈರಲ್

Viral Video: ಚೀನಾದ ಗುವಾಂಗ್ಕ್ಸಿ ಪ್ರದೇಶದ ನಾನಿಂಗ್ ಮೃಗಾಲಯದಲ್ಲಿ ಚಿಪ್ಪಾಂಜಿಯೊಂದು ಮನುಷ್ಯರಂತೆ ಸಿಗರೇಟ್ ಸೇದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಅಶ್ಚರ್ಯದ ಜತೆಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ.

ಧಂ ಮಾರೋ ಧಂ; ಮೃಗಾಲಯದಲ್ಲಿ ಸಿಗರೇಟ್ ಸೇದಿದ ಚಿಂಪಾಂಜಿ

Profile pavithra Mar 15, 2025 2:07 PM

ಬೀಜಿಂಗ್‌: ಸಾಮಾನ್ಯವಾಗಿ ಮನುಷ್ಯರು ಸಿಗರೇಟ್ ಸೇದುವುದನ್ನು ನಾವು ನೊಡಿರುತ್ತೇವೆ. ಆದರೆ ಇಲ್ಲೊಂದು ಚಿಪ್ಪಾಂಜಿ ಮನುಷ್ಯರಂತೆ ಸಿಗರೇಟ್ ಸೇದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಚೀನಾದ ಮೃಗಾಲಯದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಸಿಗರೇಟು ಸೇದುವುದು ಮನುಷ್ಯರಿಗಾಗಲಿ ಅಥವಾ ಪ್ರಾಣಿಗಳಿಗಾಗಲಿ ಆರೋಗ್ಯಕ್ಕೆ ಹಾನಿಕಾರಕ. ಹಾಗಿದ್ದಾಗ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಂತಹ ಚಟುವಟಿಕೆಗಳಲ್ಲಿ ತೊಡಗಲು ಹೇಗೆ ಅನುಮತಿ ನೀಡಿದರು ಎಂದು ಹಲವರು ಪ್ರಶ್ನಿಸಿದ್ದಾರೆ.

ಚೀನಾದ ಗುವಾಂಗ್ಕ್ಸಿ ಪ್ರದೇಶದ ನಾನಿಂಗ್ ಮೃಗಾಲಯದಿಂದ ಈ ವಿಡಿಯೊವನ್ನು ಸೆರೆಹಿಡಿಯಲಾಗಿದೆ. ವಿಡಿಯೊದಲ್ಲಿ ಬಂಡೆಗಳ ಕೆಳಗೆ ಕುಳಿತಿರುವ ಚಿಂಪಾಂಜಿಯೊಂದು ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಧೂಮಪಾನ ಮಾಡಿದೆ. ಅದು ಮನುಷ್ಯರಂತೆ ಹೊಗೆಯನ್ನು ಉಗುಳುತ್ತಾ ಸಿಗರೇಟು ಸೇದುವುದನ್ನು ನೋಡಿದವರು ಆಶ್ಚರ್ಯಗೊಂಡಿದ್ದಾರೆ. ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಿಂಪಾಂಜಿ ಸಿಗರೇಟ್‌ ಸೇದಿದ ದೃಶ್ಯ ಇಲ್ಲಿದೆ ನೋಡಿ

ಇಲ್ಲಿ ಚಿಂಪಾಂಜಿಗೆ ಸಿಗರೇಟು ಹೇಗೆ ಸಿಕ್ಕಿದೆ? ಅದನ್ನು ಯಾರು ನೀಡಿದ್ದಾರೆ? ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಿದೆ. ಮೃಗಾಲಯಕ್ಕೆ ಭೇಟಿ ನೀಡಿದವರ್ಯಾರೋ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ತಮ್ಮ ಸಿಗರೇಟನ್ನು ಪ್ರಾಣಿಗಳ ಆವರಣಕ್ಕೆ ಎಸೆದಿರಬಹುದು ಎಂದು ಹೇಳಲಾಗಿದೆ. ಈ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಚೀನಾ ಮೃಗಾಲಯದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಸುದ್ದಿ ಸಂಸ್ಥೆಯ ಪ್ರಕಾರ, ಮೃಗಾಲಯವು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಪ್ರಾಣಿ ಸಂರಕ್ಷಣೆಯ ಬಗ್ಗೆ ಸಂದರ್ಶಕರಲ್ಲಿ ಜಾಗೃತಿ ಮೂಡಿಸಲು ಆಡಳಿತ ಮಂಡಳಿ ಕ್ರಮಗಳನ್ನು ಕೈಗೊಂಡಿದೆ.

ಮೃಗಾಲಯದೊಳಗೆ ಚಿಂಪಾಂಜಿ ಧೂಮಪಾನ ಮಾಡುವ ವಿಡಿಯೊವನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ರಿಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಇದು ತಮಾಷೆಯ ವಿಷಯವಲ್ಲ ಎಂದು ಹೇಳಿದ್ದಾರೆ. "ಚಿಂಪಾಂಜಿ ಒತ್ತಡದಲ್ಲಿದೆಯೆ? ಹೀಗಾಗಿ ಧೂಮಪಾನ ಮಾಡುತ್ತಿದೆಯೇ?" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ಜನರು ಪ್ರಾಣಿಗೆ ಧೂಮಪಾನ ಮಾಡಲು ಕಲಿಸುವುದು ದುಃಖಕರವಾಗಿದೆ ಮತ್ತು ಇದು ಭಯಾನಕ" ಎಂದು ಬರೆದಿದ್ದಾರೆ.

ಈ ಚಿಂಪಾಂಜಿ ಅಸಾಮಾನ್ಯ ನಡವಳಿಕೆಗಾಗಿ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಇದು ಸಂದರ್ಶಕರ ಮೇಲೆ ಕಲ್ಲು ಮತ್ತು ಮಣ್ಣನ್ನು ಎಸೆಯುವ ಮೂಲಕ ಸುದ್ದಿಯಾಗಿತ್ತು.

ಈ ಸುದ್ದಿಯನ್ನೂ ಓದಿ:Viral News: ಮೃಗಾಲಯದ ಕೀಪರ್ ಆಗಲು ಲಕ್ಷಾಂತರ ರೂ. ಸಂಬಳ ಬರುವ ಕೆಲಸ ಬಿಟ್ಟ ಮಹಿಳೆ!

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಚೀನಾದ ಮಹಿಳೆಯೊಬ್ಬರು ಶಾಂಘೈ ಮೃಗಾಲಯದಲ್ಲಿ ಕೆಲಸ ಮಾಡಲು ಬಯೋಫಾರ್ಮಾಸ್ಯುಟಿಕಲ್ ವ್ಯವಹಾರದಲ್ಲಿನ ಲಾಭದಾಯಕ ಹುದ್ದೆಯನ್ನು ತೊರೆದಿದ್ದಾಳೆ. ಜಿಯಾಂಗ್ಸು ಪ್ರಾಂತ್ಯದ 25 ವರ್ಷದ ಮಹಿಳೆ ಮಾ ಯಾ ಪ್ರಕಾರ ಆಕೆಗೆ ಸಿಕ್ಕ ಈ ಹೊಸ ಉದ್ಯೋಗದಿಂದ ಜೀವನದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುವಂತೆ ಮಾಡುತ್ತದೆ ಎಂದಿದ್ದಾಳೆ. ಜತೆಗೆ ಅನುಭವದ ದೃಷ್ಟಿಯಿಂದ ಪ್ರತಿಫಲದಾಯಕ ಎಂದು ಹೇಳಿದ್ದಾಳೆ. ವರದಿಗಳ ಪ್ರಕಾರ, ಈಕೆಗೆ ಮೊದಲಿನ ಕಂಪನಿಯಲ್ಲಿ ಸರಾಸರಿ ತಿಂಗಳ ಸಂಬಳವು ಸುಮಾರು 10,000 ಯುವಾನ್ (ಯುಎಸ್ $ 1,400 ಅಂದರೆ 1,22,452 ರೂ.) ಸಿಗುತ್ತಿತ್ತು. ಆದರೆ ಆಕೆಗೆ ಮೃಗಾಲಯದಲ್ಲಿ ಕೆಲಸ ಮಾಡಲು ಅದರ ಅರ್ಧದಷ್ಟು ಸಂಬಳ ಸಿಗಲಿದೆ ಎನ್ನಲಾಗಿದೆ.