Rajasthan Royals: ಬಣ್ಣದಾಟದಲ್ಲಿ ಮಿಂದೆದ್ದ ರಾಜಸ್ಥಾನ್ ತಂಡದ ಆಟಗಾರರು
Holi celebration: ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಜುರೇಲ್ ಸೇರಿ ಹಲವು ಆಟಗಾರರು ಮುಖ್ಯ ಕೋಚ್ ದ್ರಾವಿಡ್‌ಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮಾರ್ಚ್ 23 ರಂದು ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.


ಜೈಪುರ: ಮಾರ್ಚ್ 22ರಿಂದ ಆರಂಭವಾಗಲಿರುವ ಐಪಿಎಲ್(IPL 2025) ಟೂರ್ನಿಗೂ ಮುನ್ನ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗಳು ಪಿಂಕ್ ಸಿಟಿ ಜೈಪುರದಲ್ಲಿ ಕಲರ್ ಫುಲ್ ಆಗಿ ಹೋಳಿ(Holi celebration) ಹಬ್ಬವನ್ನು ಆಚರಿಸಿದ್ದಾರೆ. ಪರಸ್ಪರ ಬಣ್ಣ ಹಚ್ಚಿಕೊಂಡು ಆಟಗಾರರು ಹೋಳಿ ಸಂಭ್ರಮಿಸಿದ ವಿಡಿಯೊವನ್ನು ಪ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಜುರೇಲ್ ಸೇರಿ ಹಲವು ಆಟಗಾರರು ಮುಖ್ಯ ಕೋಚ್ ದ್ರಾವಿಡ್‌ಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮಾರ್ಚ್ 23 ರಂದು ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಕೋಚ್ ರಾಹುಲ್ ದ್ರಾವಿಡ್(Rahul Dravid) ತಮ್ಮ ಗಾಯವನ್ನು ಲೆಕ್ಕಿಸದೆ ಐಪಿಎಲ್(IPL 2025) ಕರ್ತವ್ಯಕ್ಕೆ ಹಾಜರ್ ಆಗಿದ್ದಾರೆ. ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಊರುಗೋಲಿನ ಸಹಾಯದಲ್ಲಿ ನಡೆಯುತ್ತಾ ಮೈದಾನದಲ್ಲಿ ಆಟಗಾರರಿಗೆ ಬ್ಯಾಟಿಂಗ್ ಮಾರ್ಗದರ್ಶನ ನೀಡುತ್ತಿದ್ದಾರೆ. ಕೆಲವು ವಾರಗಳ ಹಿಂದೆ ಬೆಂಗಳೂರಿನ ಕೆಎಸ್‌ಸಿಎ 3ನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ಕಿರಿಯ ಮಗ ಅನ್ವಯ್ ದ್ರಾವಿಡ್ ಜತೆ ವಿಜಯ್ ಕ್ರಿಕೆಟ್ ಕ್ಲಬ್ ಪರ ಆಡುವ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದರು.
When your boys became men 💗 pic.twitter.com/44b4PQLVQa
— Rajasthan Royals (@rajasthanroyals) March 14, 2025
ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ್ ಚಾಂಪಿಯನ್ ಆದ ಬಳಿಕ ಇದುವರೆಗೆ ಕಪ್ ಗೆದ್ದಿಲ್ಲ. ಆ ಬಳಿಕ ಒಮ್ಮೆ ಫೈನಲ್ ಮತ್ತು ಹಲವು ಬಾರಿ ಸೆಮಿ ಫೈನಲ್ ಪ್ರವೇಶಿಸಿದ್ದರೂ ಟ್ರೋಫಿ ಮಾತ್ರ ಒಲಿದಿಲ್ಲ. ಈ ಬಾರಿ ದ್ರಾವಿಡ್ ಮಾರ್ಗದರ್ಶನದಲ್ಲಿ ತಂಡ ಕಪ್ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2025: ಐಪಿಎಲ್ ಆಡಲು ಸಜ್ಜಾದ ನಿತೀಶ್ ಕುಮಾರ್ ರೆಡ್ಡಿ
ರಾಜಸ್ಥಾನ್ ರಾಯಲ್ಸ್ ತಂಡ
ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರೋನ್ ಹೆಟ್ಮೆಯರ್, ಸಂದೀಪ್ ಶರ್ಮಾ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ವನಿಂದು ಹಸರಂಗ,ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ನಿತೀಶ್ ರಾಣಾ, ತುಷಾರ್ ದೇಶಪಾಂಡೆ, ಶುಭಂ ದುಬೆ, ಯುದ್ಧವೀರ್ ಸಿಂಗ್, ಫಜಲ್ಹಕ್ ಫಾರೂಕಿ (2 ಕೋಟಿ ರೂ.), ವೈಭವ್ ಸೂರ್ಯವಂಶಿ, ಕ್ವೇನಾ ಮಫಕಾ, ಕುನಾಲ್ ರಾಥೋಡ್, ಅಶೋಕ್ ಶರ್ಮಾ.