MS Dhoni: ಅಭ್ಯಾಸದ ವೇಳೆ ಸಿಕ್ಸರ್ ಸುರಿಮಳೆಗೈದ ಧೋನಿ; ಇಲ್ಲಿದೆ ವಿಡಿಯೊ
IPL 2025: ಪದೇ ಪದೇ ಉಲ್ಬಣಿಸುತ್ತಿರುವ ಗಾಯದ ಸಮಸ್ಯೆ ಹಾಗೂ ದೀರ್ಘ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವುದರಿಂದ ಈ ಬಾರಿಯ ಐಪಿಎಲ್ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ.


ಚೆನ್ನೈ: ಈ ಬಾರಿಯ ಐಪಿಎಲ್(IPL 2025) ಟೂರ್ನಿಯು ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ಪಾಲಿಗೆ ಕೊನೆಯದ್ದು ಎಂಬ ಮಾತುಗಳು ಲೀಗ್ ಆರಂಭಕ್ಕೂ ಮುನ್ನವೇ ಕೇಳಿಬರುತ್ತಿದೆ. ಆದರೆ ಧೋನಿ ಮಾತ್ರ ಸದ್ಯಕ್ಕೆ ನಿವೃತ್ತಿ ಬಗ್ಗೆ ತಲೆಕೆಡಿಸಿಕೊಳ್ಳದೆ ಚೆನ್ನೈಯ ಸುಡು ಬಿಸಿಲನ್ನು ಲೆಕ್ಕಿಸದೆ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಅಭ್ಯಾಸದ(dhoni practice) ಮೂಲಕ ಬೆವರು ಸುರಿಸುತ್ತಿದ್ದಾರೆ. ಸಿಕ್ಸರ್ ಅಭ್ಯಾಸ ನಡೆಸುತ್ತಿರುವ ಧೋನಿಯ ವಿಡಿಯೊವೊಂದು ವೈರಲ್ ಆಗಿದ್ದು, ಅಭಿಮಾನಿಗಳು ಈ ಬಾರಿ ಮೈದಾನದಲ್ಲಿ 'ಹೆಲಿಕಾಪ್ಟರ್ ಶಾಟ್' ಹಾರುವುದು ನಿಶ್ಚಿತ ಎಂದು ಹೇಳಲಾರಂಭಿಸಿದ್ದಾರೆ.
43 ವರ್ಷದ ಧೋನಿ, ಕಳೆದ ಸಾಲಿನ ಐಪಿಎಲ್ ಆರಂಭಕ್ಕೂ ಮುನ್ನ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ ಅವರಿಗೆ ಬಿಟ್ಟುಕೊಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಗಾಯವನ್ನು ಲೆಕ್ಕಿಸದೆ ತಂಡಕ್ಕಾಗಿ ಆಡುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಆದರೆ ಪದೇ ಪದೇ ಉಲ್ಬಣಿಸುತ್ತಿರುವ ಗಾಯದ ಸಮಸ್ಯೆ ಹಾಗೂ ದೀರ್ಘ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವುದರಿಂದ ಈ ಬಾರಿಯ ಐಪಿಎಲ್ ಬಳಿಕ ಧೋನಿ ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ.
The Sound of the Bat on Ball ! 🥵#MSDhoni #WhistlePodu #CSK #IPL2025
— Saravanan Hari 💛🦁🏏 (@CricSuperFan) March 14, 2025
🎥 via @ChennaiIPL pic.twitter.com/0QEN7Mtw2T
ಬಾರಿಯ ಟೂರ್ನಿಯಲ್ಲಿ ಧೋನಿ ತಮ್ಮ ಬ್ಯಾಟ್‌ನ ತೂಕವನ್ನು ಇಳಿಸಿ ಆಡಲಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಧೋನಿ 1250-1300 ಗ್ರಾಂ ತೂಕದ ಬ್ಯಾಟ್‌ನೊಂದಿಗೆ ಆಡುತ್ತಾರೆ. ಆದರೆ ಈ ಬಾರಿ ಕನಿಷ್ಠ 10-20 ಗ್ರಾಂಗಳಷ್ಟು ತೂಕವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ ಈ ಬಾರಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.
ಇದನ್ನೂ ಓದಿ IPL 2025: ಆರ್‌ಸಿಬಿ ಕ್ಯಾಂಪ್ ಸೇರಿದ ಕಿಂಗ್ ಕೊಹ್ಲಿ
ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಕ್ಯಾಪ್ಟ್ ನಿಯಮದ ಅಡಿಯಲ್ಲಿ ಧೋನಿಯನ್ನು 4 ಕೋಟಿ ರೂ. ನೀಡಿ ರಿಟೇನ್ ಮಾಡಿತ್ತು. ಚೆನ್ನೈ ತಂಡ ಮಾ.23 ರಂದು ಮುಂಬೈ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ತವರು ಮೈದಾನವಾದ ಚೆಪಾಕ್‌ನಲ್ಲಿ ನಡೆಯಲಿದೆ.