Dhruti P Simha: ನಾಟ್ಯ ನಿವೇದನಂ; ಮಾ.16ಕ್ಕೆ ಧೃತಿ ಪಿ. ಸಿಂಹ ಭರತನಾಟ್ಯ ರಂಗಪ್ರವೇಶ
Dhruti P Simha: ಸಮೀರಾ ಸಿಂಹ. ಪಿ ಮತ್ತು ಸುಕೃತಾ ರಾವ್ ಅವರ ಪುತ್ರಿ ಧೃತಿ ಪಿ. ಸಿಂಹ, 6ನೇ ವಯಸ್ಸಿನಲ್ಲಿ ವಿದುಷಿ ಅಂಜಲಿ ಕೆ.ಆರ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಪ್ರಯಾಣ ಆರಂಭಿಸಿದರು. ಇವರ ಭರತನಾಟ್ಯ ರಂಗಪ್ರವೇಶ ʼನಾಟ್ಯ ನಿವೇದನಂʼ ಕಾರ್ಯಕ್ರಮ ಮಾ.16ರಂದು ನಗರದ ಜೆ.ಸಿ.ರಸ್ತೆಯ ಎಡಿಎ ರಂಗಮಂದಿರದಲ್ಲಿ ನಡೆಯಲಿದೆ.


ಬೆಂಗಳೂರು: ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆ (Anjali School of Dance and Music), ಸುಕೃತಾ ರಾವ್ ಮತ್ತು ಸಮೀರ ಸಿಂಹ ಅವರ ಆಶ್ರಯದಲ್ಲಿ ಮಾರ್ಚ್ 16ರಂದು ಸಂಜೆ 5:30ಕ್ಕೆ, ಧೃತಿ ಪಿ. ಸಿಂಹ (Dhruti P Simha) ಅವರ ಭರತನಾಟ್ಯ ರಂಗಪ್ರವೇಶ ʼನಾಟ್ಯ ನಿವೇದನಂʼ ಕಾರ್ಯಕ್ರಮ ನಗರದ ಜೆ.ಸಿ.ರಸ್ತೆಯ ಎಡಿಎ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಅನನ್ಯ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟೀ ರಾಘವೇಂದ್ರ, ಖ್ಯಾತ ಭರತನಾಟ್ಯ ಕಲಾವಿದೆ, ಲಾಸ್ಯ ವರ್ಧನ ಟ್ರಸ್ಟ್ ಕಲಾತ್ಮಕ ನಿರ್ದೇಶಕಿ ವಿದುಷಿ ಡಾ. ಮಾಲಿನಿ ರವಿಶಂಕರ್ ಆಗಮಿಸಲಿದ್ದಾರೆ.
ಧೃತಿ ಅವರು ವಿದುಷಿ ಅಂಜಲಿ ಅವರ ಶಿಷ್ಯೆಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿತಿದ್ದು, ಮಾ.16ರಂದು ನೃತ್ಯಪ್ರಿಯರು ಹಾಗೂ ಕಲಾ ಅಭಿಮಾನಿಗಳ ಸಮ್ಮುಖದಲ್ಲಿ ರಂಗ ಪ್ರವೇಶ ಮಾಡಲಿದ್ದಾರೆ. ಸಂಗೀತ ತಂಡದಲ್ಲಿ ನಟುವಾಂಗ ವಿದುಷಿ ಅಂಜಲಿ ಕೆ.ಆರ್ ನುಡಿಸಲಿದ್ದು, ಗಾಯನ ವಿದ್ವಾನ್ ಎಂಎಸ್ ದೀಪಕ್, ಮೃದಂಗ ಕಲಾವಿದ ಜಿ.ಎಸ್.ನಾಗರಾಜ್, ಕೊಳಲು ವಾದಕ ಡಾ.ಬಿ.ಎನ್.ಸ್ಕಂದ ಕುಮಾರ್, ರಿಥಮ್ ಪ್ಯಾಡ್ ಕಲಾವಿದ ಧನುಷ್ ಎನ್. ಇರಲಿದ್ದಾರೆ.
ಧೃತಿ ಪಿ. ಸಿಂಹ ಪರಿಚಯ

ಸಮೀರ ಸಿಂಹ. ಪಿ ಮತ್ತು ಸುಕೃತಾ ರಾವ್ ಅವರ ಪುತ್ರಿ ಧೃತಿ ಪಿ. ಸಿಂಹ, 6ನೇ ವಯಸ್ಸಿನಲ್ಲಿ ವಿದುಷಿ ಅಂಜಲಿ ಕೆ.ಆರ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಪ್ರಯಾಣ ಆರಂಭಿಸಿದರು. ಧೃತಿ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಲ್ಲಿ ಮಧ್ಯಮ ಹಂತದ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಶ್ರೀ ವಾಣಿ ಶಿಕ್ಷಣ ಕೇಂದ್ರ ಮತ್ತು ಶ್ರೀ ವಿದ್ಯಾ ಮಂದಿರ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿನಿ ಧೃತಿ, ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಲಾ ಕಲಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭರತನಾಟ್ಯದಲ್ಲಿ 13 ವರ್ಷಗಳಿಗೂ ಹೆಚ್ಚು ಕಾಲ ತರಬೇತಿ ಪಡೆದಿರುವ ಧೃತಿಗೆ ನೃತ್ಯವು ಜೀವನದ ಅವಿಭಾಜ್ಯ ಅಂಗವಾಗಿದೆ. ಇನ್ನು ಅಂಜಲಿ ಕೆ.ಆರ್ ಅವರು, ಬೆಂಗಳೂರಿನ ಮಹಾವತಾರ್ ಮೀಡಿಯಾ ಕಮ್ಯುನಿಕೇಷನ್ಸ್ ಸ್ಥಾಪಕರು, ಸಿಇಒ ಹಾಗೂ ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ ಕಲಾತ್ಮಕ ನಿರ್ದೇಶಕರಾಗಿದ್ದು, ಇವರ ಮಾರ್ಗದರ್ಶನದಲ್ಲಿ ಪ್ರಸಿದ್ಧ ಹಂಪಿ ಉತ್ಸವ ಮತ್ತು ಗಣರಾಜ್ಯೋತ್ಸವ ಆಚರಣೆಗಳು ಸೇರಿ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಧೃತಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Roopa Gururaj Column: ಬಣ್ಣಗಳ ಹಬ್ಬದ ಹಿಂದಿನ ಉದ್ದೇಶ