60 ನಿಮಿಷಗಳ ಒಳಗೆ ಫಾಸ್ಟ್ ಫ್ಯಾಷನ್ ದಿರಿಸು ಡೆಲಿವರಿ ಮಾಡುವ ಝಿಪ್ ಯೋಜನೆ ಪ್ರಾರಂಭಿಸಿದ ನ್ಯೂಮೀ ಫ್ಯಾಷನ್
ಭಾರತದ ಜೆನ್ ಝೀ ತರುಣಿಯರ ಪ್ರೀತಿ ಗಳಿಸಿರುವ ಫ್ಯಾಷನ್ ಟೆಕ್ ಬ್ರಾಂಡ್ ಆಗಿರುವ ನ್ಯೂಮೀ ಸಂಸ್ಥೆಯು 60 ನಿಮಿಷಗಳ ಒಳಗೆ ಫ್ಯಾಷನ್ ದಿರಿಸನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡುವ ಭರವಸೆ ನೀಡುವ ನ್ಯೂಮೀ ಝಿಪ್ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಈ ಮೊದಲು ದೆಹಲಿ- ಎನ್ ಸಿ ಆರ್ ನಲ್ಲಿ 90 ನಿಮಿಷಗಳ ಒಳಗೆ ಡೆಲಿವರಿ ಮಾಡುವ ಯೋಜನೆ ಪರಿಚಯಿಸಲಾಗಿದ್ದು, ಅದು ಯಶಸ್ವಿ ಯಾದ ನಂತರ ಬೆಂಗಳೂರಿನಲ್ಲಿ ಹೊಸ ಯೋಜನೆ ಆರಂಭಿಸಲಾಗಿದೆ


ಬೆಂಗಳೂರು: ಭಾರತದ ಜೆನ್ ಝೀ ತರುಣಿಯರ ಪ್ರೀತಿ ಗಳಿಸಿರುವ ಫ್ಯಾಷನ್ ಟೆಕ್ ಬ್ರಾಂಡ್ ಆಗಿರುವ ನ್ಯೂಮೀ ಸಂಸ್ಥೆಯು 60 ನಿಮಿಷಗಳ ಒಳಗೆ ಫ್ಯಾಷನ್ ದಿರಿಸನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡುವ ಭರವಸೆ ನೀಡುವ ನ್ಯೂಮೀ ಝಿಪ್ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಈ ಮೊದಲು ದೆಹಲಿ- ಎನ್ ಸಿ ಆರ್ ನಲ್ಲಿ 90 ನಿಮಿಷಗಳ ಒಳಗೆ ಡೆಲಿವರಿ ಮಾಡುವ ಯೋಜನೆ ಪರಿಚಯಿಸಲಾಗಿದ್ದು, ಅದು ಯಶಸ್ವಿಯಾದ ನಂತರ ಬೆಂಗಳೂರಿನಲ್ಲಿ ಹೊಸ ಯೋಜನೆ ಆರಂಭಿಸಲಾಗಿದೆ.
ಕಳೆದ 3 ವರ್ಷಗಳಲ್ಲಿ ನ್ಯೂಮೀ ಭಾರತದಲ್ಲಿ ಫಾಸ್ಟ್ ಫ್ಯಾಷನ್ ವಿಭಾಗದಲ್ಲಿ ಸಂಚಲನ ಉಂಟು ಮಾಡಿದೆ. ವೀಕ್ಲಿ ಡ್ರಾಪ್ಸ್, ಅತ್ಯುತ್ತಮ ಡಿಜಿಟಲ್ ಉಪಸ್ಥಿತಿ ಮೂಲಕ ಗಮನ ಸೆಳೆದಿದ್ದ ಈ ಬ್ರಾಂಡ್ ಇದೀಗ ಯುವ, ಟ್ರೆಂಡ್ ಸೆನ್ಸಿಟಿವ್ ಗ್ರಾಹಕರ ವೇಗಕ್ಕೆ ತಕ್ಕಂತೆ ಡೆಲಿವರಿ ಮಾಡೆಲ್ ಅನ್ನು ಪರಿಚಯಿ ಸುವ ಮೂಲಕ ಮತ್ತಷ್ಟು ಗ್ರಾಹಕರನ್ನು ತನ್ನೆಡೆಗೆ ಸೆಳೆಯುವ ನಿರೀಕ್ಷೆ ಹೊಂದಿದೆ. ದೇಶಾದ್ಯಂತ 14 ಅನುಭವ-ಕೇಂದ್ರಿತ ಮಳಿಗೆಗಳು ಮತ್ತು ಆನ್ ಲೈನ್ ನಲ್ಲಿ ಉತ್ತಮ ಉಪಸ್ಥಿತಿ ಹೊಂದಿರುವ ಬ್ರ್ಯಾಂಡ್ ಅತ್ಯುತ್ತಮ ಮಾರಾಟ ಜಾಲ ರೂಪಿಸುವ ಉದ್ದೇಶ ಹೊಂದಿದೆ.
ಇದನ್ನೂ ಓದಿ: IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?
ವಿಶೇಷವೆಂದರೆ ಬೆಂಗಳೂರಿನಾದ್ಯಂತ ನ್ಯೂಮೀ ಝಿಪ್ ಯೋಜನೆ ಮೂಲಕ 1,500ಕ್ಕೂ ಹೆಚ್ಚು ಶೈಲಿಯ ದಿರಿಸುಗಳು ತ್ವರಿತ ಡೆಲಿವರಿ ಮೂಲಕ ದೊರೆಯಲಿದೆ. ನಗರದಾದ್ಯಂತ ಇರುವ ಡಾರ್ಕ್ ಸ್ಟೋರ್ ಗಳ ಜಾಲದ ಮೂಲಕ ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಈ ಯೋಜನೆಯನ್ನು ಟ್ರೆಂಡಿಯೆಸ್ಟ್ ಶೈಲಿಯ ದಿರಿಸುಗಳನ್ನು ಗ್ರಾಹಕರಿಗೆ ಶೀಘ್ರವೇ ಹತ್ತಿರ ತರುವಂತೆ ವಿನ್ಯಾಸಗೊಳಿಸ ಲಾಗಿದೆ. ಆರಂಭಿಕ ಪರೀಕ್ಷೆಗಳ ಪ್ರಕಾರ ನ್ಯೂಮೀ ಬೆಂಗಳೂರಿನ ಗರಿಷ್ಠ ಟ್ರಾಫಿಕ್ ಸಮಯ ದಲ್ಲಿಯೂ 30 ರಿಂದ 60 ನಿಮಿಷಗಳ ಒಳಗೆ ಆರ್ಡರ್ ಡೆಲಿವರಿ ಮಾಡಲು ಯಶಸ್ವಿಯಾಗಿದೆ.
ಈ ಕುರಿತು ಮಾತನಾಡಿರುವ ನ್ಯೂಮೀ ಸಹ-ಸಂಸ್ಥಾಪಕ ಮತ್ತು ಸಿಇಓ ಸುಮಿತ್ ಜಸೋರಿಯಾ ಅವರು, “ಜೆನ್ ಜೀ ಪೀಳಿಗೆಗೆ ತಮಗೆ ಏನು ಬೇಕು ಎಂಬುದು ಸ್ಪಷ್ಟವಾಗಿ ತಿಳಿದಿದೆ. ಈ ಕಾಲದ ಸ್ಟೈಲ್, ತಕ್ಷಣದ ಲಭ್ಯತೆ, ಮತ್ತು ವೈಯಕ್ತಿಕವೆನ್ನಿಸುವ ಅನುಭವ ಅವರ ಆದ್ಯತೆಯಾಗಿದೆ. ಅದಕ್ಕೆ ಪೂರಕವಾಗಿ ನಾವು ಈ ಯೋಜನೆ ಜಾರಿಗೆ ತಂದಿದ್ದೇವೆ. ಫಾಸ್ಟ್ ಫ್ಯಾಷನ್ ವಿಭಾಗವು ನಿಧಾನ ವಾಗಿರುವುದು ಸಾಧ್ಯವಿಲ್ಲ. ನ್ಯೂಮೀ ಝಿಪ್ ಮತ್ತು ಬೆಂಗಳೂರಿನಲ್ಲಿ 60 ನಿಮಿಷಗಳಿಗಳ ಒಳಗೆ ಡೆಲಿವರಿ ಮಾಡುವ ಭರವಸೆಯ ಮೂಲಕ ನಮ್ಮ ಗಡಿಗಳನ್ನು ನಾವೇ ವಿಸ್ತರಿಸುತ್ತಿದ್ದೇವೆ ಮತ್ತು ಫ್ಯಾಷನ್ ಟೆಕ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ರೂಪಿಸುತ್ತಿದ್ದೇವೆ” ಎಂದು ಹೇಳಿದರು.
ಬ್ರ್ಯಾಂಡ್ ಬೇಡಿಕೆಗೆ ತಕ್ಕಂತೆ ನಗರದಲ್ಲಿ ತನ್ನ ಡಾರ್ಕ್ ಸ್ಟೋರ್ ಗಳ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸಿದೆ. ಮುಂಬೈ ಮತ್ತು ಹೈದರಾಬಾದ್ ನಲ್ಲಿ ಮುಂಬರುವ ತಿಂಗಳುಗಳಲ್ಲಿ ನ್ಯೂಮೀ ಝಿಪ್ ಪ್ರಾರಂಭಿಸಲು ಯೋಜನೆ ಸಿದ್ಧವಾಗುತ್ತಿದೆ. ಬಹುತೇಕ ಫ್ಯಾಷನ್ ಬ್ರ್ಯಾಂಡ್‌ಗಳು ಇನ್ನೂ ಬಹು ದಿನಗಳ ಡೆಲಿವರಿ ನೆಚ್ಚಿಕೊಂಡಿರುವಾಗ ನ್ಯೂಮೀ ಸಂಸ್ಥೆಯು ಝಿಪ್ ಯೋಜನೆ ಮೂಲಕ ಈ ವಿಭಾಗದಲ್ಲಿ ಸಂಚಲನ ಮೂಡಿಸುತ್ತಿದೆ.