Rajendra Bhat Column: ದೊಡ್ಡ ಪ್ರಶಸ್ತಿಗಳನ್ನು ನಿರಾಕರಿಸಿ ದೊಡ್ಡವರಾದವರು!

ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ನಿರಾಕರಣೆ ಮಾಡಿ ದೊಡ್ಡವರಾದ ಅನೇಕ ಶ್ರೇಷ್ಟ ಮಹನೀಯರು ಇದ್ದಾರೆ. ಆ ಪ್ರಶಸ್ತಿಗಿಂತಲೂ ಅವರ ವ್ಯಕ್ತಿತ್ವವು ದೊಡ್ಡದು.

rahul dravid
Profile ಹರೀಶ್‌ ಕೇರ January 17, 2025

ಸ್ಫೂರ್ತಿಪಥ ಅಂಕಣ: ಪ್ರಶಸ್ತಿಗಿಂತಲೂ ಅವರ ವ್ಯಕ್ತಿತ್ವ ದೊಡ್ಡದು!

- ರಾಜೇಂದ್ರ ಭಟ್ ಕೆ.

rajendra bhat

Rajendra Bhat Column: ರಾಹುಲ್ ದ್ರಾವಿಡ್ (Rahul Dravid) ಗೌರವ ಡಾಕ್ಟರೇಟ್ ನಿರಾಕರಿಸಿದ್ದರು ಎಂಬುದು ನಿಮಗೆ ಗೊತ್ತೆ? ಕ್ರಿಕೆಟ್ ಲೆಜೆಂಡ್ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಎರಡು ವರ್ಷಗಳ ಹಿಂದೆ ಬೆಂಗಳೂರು ವಿವಿಯು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಆದರೆ ಎಲ್ಲರೂ ಆಶ್ಚರ್ಯ ಪಡುವಂತೆ ರಾಹುಲ್ ದ್ರಾವಿಡ್ ಈ ಗೌರವವನ್ನು ನಿರಾಕರಣೆ ಮಾಡಿದರು! ಅದಕ್ಕೆ ಅವರು ಕೊಟ್ಟ ಕಾರಣವು ಕೂಡ ಸರಿಯಾಗಿಯೇ ಇತ್ತು.

ನನ್ನ ಹೆಂಡತಿ ಡಾಕ್ಟರ್. ಆ ಉನ್ನತ ಪದವಿ ಪಡೆಯಲು ಅವರು ವರ್ಷಾನುಗಟ್ಟಲೆ ಹಗಲು ರಾತ್ರಿ ಅಭ್ಯಾಸವನ್ನು ಮಾಡಿದ್ದಾರೆ. ನನ್ನ ಅಮ್ಮ ಓರ್ವ ಕಲಾ ಶಿಕ್ಷಕಿ. ಅವರು ಡಾಕ್ಟರೇಟ್ ಪಡೆಯಲು 50 ವರ್ಷಗಳ ಸಾಧನೆಯನ್ನು ಮಾಡಿದ್ದಾರೆ. ನಾನು ಓರ್ವ ಕ್ರಿಕೆಟರ್. ನನ್ನ ರಾಷ್ಟ್ರಕ್ಕಾಗಿ ಒಂದಷ್ಟು ಹೊತ್ತು ಕ್ರಿಕೆಟ್ ಆಟವನ್ನು ಆಡಿದ್ದೇನೆ. ಅದಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಕೂಡ ಪಡೆದಿದ್ದೇನೆ. ಕ್ರಿಕೆಟಲ್ಲಿ ಅಂತಹ ದೊಡ್ಡದಾದ ಅಧ್ಯಯನ ನಾನೇನೂ ಮಾಡಿಲ್ಲ. ಆದ್ದರಿಂದ ನನಗೆ ಈ ಗೌರವ ಡಾಕ್ಟರೇಟ್ ಬೇಡ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಮಾತು ಮುಗಿಸಿದರು.

ವಿಜ್ಞಾನಿ ಐನಸ್ಟೀನ್ ಇಸ್ರೇಲ್ ಪ್ರಧಾನಿ ಹುದ್ದೆಗೆ ನೋ ಅಂದಿದ್ದರು!

ಜಗತ್ತಿನ ಮಹಾ ವಿಜ್ಞಾನಿ ಆಗಿದ್ದ ಆಲ್ಬರ್ಟ್ ಐನಸ್ಟೀನ್ 1951ರಲ್ಲಿ ಇಸ್ರೇಲ್ ದೇಶದ ಪ್ರಧಾನ ಮಂತ್ರಿ ಆಗುವ ಆಮಂತ್ರಣವನ್ನು ಪಡೆದಿದ್ದರು. ನಾನೊಬ್ಬ ಸಾಮಾನ್ಯ ಭೌತ ವಿಜ್ಞಾನಿ. ನನಗೆ ಆಡಳಿತ ಏನೇನೂ ಗೊತ್ತಿಲ್ಲ ಎಂದು ಹೇಳಿ ಅವರು ಇಸ್ರೇಲ್ ಪ್ರಧಾನಿಯ ಹುದ್ದೆಯನ್ನು ನಯವಾಗಿ ನಿರಾಕರಣೆ ಮಾಡಿದ್ದರು!

ನೊಬೆಲ್ ನಗದು ಬಹುಮಾನ ಬೇಡ ಅಂದವರು!

ಅದೇ ರೀತಿ ಪೇರಲ್ಮನ್ ಎಂಬ ಮೇಧಾವಿ ಗಣಿತಜ್ಞ ತನಗೆ ನೊಬೆಲ್ ಪ್ರಶಸ್ತಿ ದೊರೆತಾಗ ಅದರ ಜೊತೆಗೆ ದೊರೆತ ಅಪಾರ ಮೊತ್ತದ ಹಣವನ್ನು ನಿರಾಕರಣೆ ಮಾಡಿದ್ದರು! ನನಗೆ ದುಡ್ಡಿನ ಆವಶ್ಯಕತೆಯೇ ಇಲ್ಲ ಅನ್ನುವುದು ಅವರ ಅಭಿಪ್ರಾಯ ಆಗಿತ್ತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಬಹುಮತ ಇದ್ದರೂ ಪಟೇಲರು ಪ್ರಧಾನಿ ಆಗಲಿಲ್ಲ!

vallabh bhai patel

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರ್ದಾರ್ ಪಟೇಲರು ಭಾರತದ ಮೊದಲ ಪ್ರಧಾನಿ ಆಗುವ ಎಲ್ಲಾ ಅವಕಾಶ ಪಡೆದಿದ್ದರು. ಕಾಂಗ್ರೆಸ್ ಕಾರ್ಯಕಾರಿಣಿಯು ಅವರಿಗೆ ಭಾರೀ ಬಹುಮತವನ್ನು ಕೊಟ್ಟಿತ್ತು. ಆದರೆ ಗಾಂಧೀಜಿ ನೆಹರೂ ಪ್ರಧಾನಿ ಆಗಲಿ ಎಂದರು. ಅದಕ್ಕೆ ಅವರದ್ದೇ ಆದ ಕಾರಣಗಳು ಇದ್ದವು. ಅದ್ಯಾವುದನ್ನೂ ಪಟೇಲರು ಪ್ರಶ್ನೆ ಮಾಡಲು ಹೋಗಲಿಲ್ಲ. ಗಾಂಧೀಜಿ ಮಾತಿಗೆ ಒಪ್ಪಿಕೊಂಡು ಪ್ರಧಾನಿಯ ಹುದ್ದೆಯ ಗೌರವವನ್ನು ನೆಹರೂ ಅವರಿಗೆ ಕೊಟ್ಟು ತೆರೆಯ ಮರೆಯಲ್ಲಿ ನಿಂತರು.

ಕಲಾಂ ಅವರಿಗೆ ಭಾರತ ರತ್ನ ಪ್ರಶಸ್ತಿ ಖುಷಿ ತರಲಿಲ್ಲ!

ಅಬ್ದುಲ್ ಕಲಾಂ ಅವರಿಗೆ ಭಾರತರತ್ನ ಪ್ರಶಸ್ತಿಯು ಬಂದಾಗ ಅವರು ಪ್ರಶಸ್ತಿ ಸ್ವೀಕಾರ ಮಾಡಿ ಹೇಳಿದ ಮಾತು ನನಗೆ ವಿಸ್ಮಯ ಮೂಡಿಸಿದೆ- ನನಗೆ ಏನೂ ಸಂತೋಷ ಆಗ್ತಾ ಇಲ್ಲ. ಏಕೆಂದರೆ ನನ್ನ ಗುರುಗಳಾದ ವಿಕ್ರಮ ಸಾರಾಭಾಯಿ ಅವರಿಗೆ ನನಗಿಂತ ಮೊದಲು ಭಾರತ ರತ್ನ ಪ್ರಶಸ್ತಿ ದೊರೆಯಬೇಕಿತ್ತು! ಆಗ ನನಗೆ ನಿಜವಾಗಿಯೂ ಸಂತೋಷ ಆಗುತ್ತಿತ್ತು!

ಉಡುಪಿಯ ಶಾನುಭೋಗರು ಹಾಗೇ ಮಾಡಿದರು!

ravndranath shanbhag

ಬಹಳ ವರ್ಷಗಳ ಹಿಂದೆ ಬಳಕೆದಾರರ ವೇದಿಕೆಯ ಸಂಚಾಲಕರಾದ ಉಡುಪಿಯ ಡಾ. ರವೀಂದ್ರನಾಥ್ ಶಾನುಭೋಗ ಅವರಿಗೆ ಅತ್ಯಂತ ಪ್ರತಿಷ್ಠಿತ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ನೀಡಬೇಕು ಎಂದು ಸಮಿತಿಯವರು ತೀರ್ಮಾನಿಸಿ ಆಗಿತ್ತು. ಅವರನ್ನು ಒಪ್ಪಿಸಲು ಸಮಿತಿಯ ಪದಾಧಿಕಾರಿಗಳ ಜೊತೆ ನಾನು ಅವರ ಆಫೀಸಿಗೆ ಹೋಗಿದ್ದೆ. ಆ ಪ್ರಶಸ್ತಿಯು ಅತ್ಯಂತ ಪ್ರತಿಷ್ಠಿತ ಆಗಿತ್ತು ಮತ್ತು ಆ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರಾಗಿದ್ದರು.

ಆದರೆ ಶಾನುಭೋಗರು ಆ ಗೌರವ ಪ್ರಶಸ್ತಿಯನ್ನು ಬಹಳ ಸ್ಪಷ್ಟವಾದ ಮಾತಲ್ಲಿ ನಿರಾಕರಣೆ ಮಾಡಿದ್ದರು. ಅದಕ್ಕೆ ಅವರು ನೀಡಿದ ಕಾರಣವೂ ಅದ್ಭುತ ಆಗಿತ್ತು.

ನಾನು ಯಾವುದೇ ಖಾಸಗಿ ರಂಗದ ಮತ್ತು ಸರಕಾರಿ ವಲಯದ ಪ್ರಶಸ್ತಿ ಪಡೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇನೆ. ನಾನು ಯಾರದಾದರೂ ಹಂಗಲ್ಲಿ ಬಿದ್ದರೆ ನನ್ನ ಹೋರಾಟಕ್ಕೆ ಮುಂದೆ ತೊಂದರೆ ಆಗಬಹುದು!

ಮುಂದೆ ಇನ್ನೊಂದು ಶ್ರೇಷ್ಟವಾದ ಖಾಸಗಿ ರಂಗದ ದೊಡ್ಡ ಪ್ರಶಸ್ತಿ ಅವರ ಕಾಲ ಬುಡಕ್ಕೆ ಬಂದಾಗ, ಸ್ವೀಕಾರ ಮಾಡಲು ಒತ್ತಾಯ ಹೆಚ್ಚಿದಾಗ ಅವರು ಮತ್ತೆ ಅದನ್ನು ನಿರಾಕರಿಸಿ ತನ್ನ ಬಳಕೆದಾರ ಹೋರಾಟದ ದೊಡ್ಡ ಫಲಾನುಭವಿಗಳಾದ ಮತ್ತು ದಲಿತ ಮಹಿಳೆಯರಾದ ಶ್ರೀಮತಿ ಅಕ್ಕು ಮತ್ತು ಲೀಲಾ ಅವರಿಗೆ ಆ ಪ್ರಶಸ್ತಿಯನ್ನು ಕೊಡಿಸಿ ತಾವು ಕೆಳಗೆ ಕೂತು ಸಂಭ್ರಮ ಪಟ್ಟಿದ್ದರು.

ಡಾ.ರಾಜಕುಮಾರ್ ಅಂತಾರಾಷ್ಟ್ರೀಯ ಮನ್ನಣೆ ನಿರಾಕರಿಸಿದರು!

dr rajkumar

1980ರ ದಶಕದಲ್ಲಿ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ತನ್ನ ಕಾರ್ಪೊರೇಟ್ ಕಂಪೆನಿಯ ಬ್ಯಾನರಿನಲ್ಲಿ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ಏರ್ಪಡಿಸಿದ್ದರು. ಆದರೆ ಕರ್ನಾಟಕದ ರೈತರು ಬರಗಾಲ ಇದೆ, ಈ ಹೊತ್ತಿನಲ್ಲಿ ಆಡಂಬರದ ಸ್ಪರ್ಧೆ ಬೇಡ ಎಂದು ಪ್ರತಿಭಟನೆಗೆ ಇಳಿದರು. ಆಗ ಬೇರೆ ಉಪಾಯ ಇಲ್ಲದೆ ಅಮಿತಾಬ್ ರಾಜಕುಮಾರ್ ಮನೆಗೆ ಬಂದು ನೀವೇ ಉದ್ಘಾಟನೆಗೆ ಬರಬೇಕು ಸರ್ ಎಂದರು. ಈ ಕಾರ್ಯಕ್ರಮ ಜಗತ್ತಿನ 130 ರಾಷ್ಟ್ರಗಳಲ್ಲಿ ಟಿವಿ ಪ್ರಸಾರ ಆಗುತ್ತದೆ ಎಂದು ಆಮಿಷ ಒಡ್ಡಿದರು. ರಾಜಕುಮಾರ್ ಮಕ್ಕಳು ಕೂಡ ನೀವು ಹೋಗಿ ಅಪ್ಪ ಎಂದಿದ್ದರು. ಆದರೆ ರಾಜಕುಮಾರ್ ಈ ಆಮಂತ್ರಣ ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಅದ್ಭುತ ಇತ್ತು - ಕರ್ನಾಟಕದ ರೈತರು ಬವಣೆ ಪಡುತ್ತಿರುವಾಗ ನನಗೆ ಯಾವ ಗೌರವ ಕೂಡ ಬೇಡ!

ಅವರೆಲ್ಲರೂ ಸುಮ್ಮನೆ ಲೆಜೆಂಡ್ ಆದದ್ದಲ್ಲ!

ಹೀಗೆ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ನಿರಾಕರಣೆ ಮಾಡಿ ದೊಡ್ಡವರಾದ ಇನ್ನೂ ಅನೇಕ ಶ್ರೇಷ್ಟ ಮಹನೀಯರು ಇದ್ದಾರೆ. ಆ ಪ್ರಶಸ್ತಿಗಿಂತಲೂ ಅವರ ವ್ಯಕ್ತಿತ್ವವು ದೊಡ್ಡದು ಅನ್ನುವುದು ನನ್ನ ಅಭಿಪ್ರಾಯ. ಸಣ್ಣ ಸಣ್ಣ ಪ್ರಶಸ್ತಿಗಳಿಗೂ ಲಾಬಿ ಮಾಡುವ, ಶಿಫಾರಸ್ಸು ಮಾಡಿಸುವ ಕೆಲವು ಮಂದಿಯನ್ನು ನೋಡಿದಾಗ ಈ ಮೇಲಿನವರು ನಿಜವಾಗಿಯೂ ಗ್ರೇಟ್ ಎಂದು ನನಗೆ ಅನ್ನಿಸಿದೆ. ಅವರಿಗೆ ನಮ್ಮ ಅಭಿನಂದನೆಗಳು ಮೀಸಲಾಗಿರಲಿ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ