Jana parishad: ಜನ ಪರಿಷತ್ತಿನ ಉತ್ತರ ಕನ್ನಡದ ಅಧ್ಯಕ್ಷರಾಗಿ ಶ್ಯಾಮಸುಂದರ ಹೆಗಡೆ ನಾಮನಿರ್ದೇಶನ
Jana parishad: ಅಖಿಲ ಭಾರತ ಮಟ್ಟದ ಜನ ಪರಿಷತ್ತಿನ ಅಧ್ಯಕ್ಷರು ಮತ್ತು ಮಾಜಿ ಡಿಜಿಪಿ ಎನ್.ಕೆ. ತ್ರಿಪಾಠಿ ಹಾಗೂ ಪದ್ಮಶ್ರೀ ಸುನಿಲ್ ದಾಬಸ್ (ಜನ ಪರಿಷತ್ತಿನ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ) ಅವರ ಶಿಫಾರಸಿನ ಮೇರೆಗೆ ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ ಹೆಗಡೆ ಅವರನ್ನು ಜನ ಪರಿಷತ್ತಿನ ಉತ್ತರ ಕನ್ನಡ ಅಧ್ಯಾಯ (ವಲಯ) ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉತ್ತರ ಕನ್ನಡ: ಅಖಿಲ ಭಾರತ ಮಟ್ಟದ ಜನ ಪರಿಷತ್ತಿನ ಅಧ್ಯಕ್ಷರು ಮತ್ತು ಮಾಜಿ ಡಿಜಿಪಿ ಎನ್.ಕೆ. ತ್ರಿಪಾಠಿ ಹಾಗೂ ಪದ್ಮಶ್ರೀ ಸುನಿಲ್ ದಾಬಸ್ (ಜನ ಪರಿಷತ್ತಿನ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ) ಅವರ ಶಿಫಾರಸಿನ ಮೇರೆಗೆ ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ ಹೆಗಡೆ ಅವರನ್ನು ಜನ ಪರಿಷತ್ತಿನ (Jana parishad) ಉತ್ತರ ಕನ್ನಡ ಅಧ್ಯಾಯ (ವಲಯ) ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ಸಂಸ್ಥೆಯ ಸಂಯೋಜಕ ರಾಮ್‌ಜಿ ಶ್ರೀವಾಸ್ತವ ಈ ಬಗ್ಗೆ ಮಾಹಿತಿ ನೀಡಿ, ಜನ ಪರಿಷತ್ ರಾಷ್ಟ್ರೀಯ ಮಟ್ಟದ ಸಾಮಾಜಿಕ ಸಂಸ್ಥೆಯಾಗಿದ್ದು, ಕಳೆದ 36 ವರ್ಷಗಳಿಂದ ಸಾಮಾಜಿಕ ಮತ್ತು ಸೃಜನಶೀಲ ಕಾರ್ಯಗಳಲ್ಲಿ ಸಕ್ರಿಯವಾಗಿದೆ ಮತ್ತು ಅನೇಕ ಐತಿಹಾಸಿಕ ಮತ್ತು ಅಭೂತಪೂರ್ವ ಉಲ್ಲೇಖ ಪುಸ್ತಕಗಳನ್ನು ಸಹ ಪ್ರಕಟಿಸಿದೆ.
ಸಂಸ್ಥೆಯು ಪರಿಸರದ ಕುರಿತು 10 ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸಿದೆ. ಮುಂದಿನ ಸಮ್ಮೇಳನವನ್ನು ವಿಯೆಟ್ನಾಂನಲ್ಲಿ ಆಯೋಜಿಸಲಾಗಿದೆ. ಪ್ರಸ್ತುತ ಸಂಸ್ಥೆಯು ಇಡೀ ದೇಶದಲ್ಲಿ 279 ಮತ್ತು ವಿದೇಶದಲ್ಲಿ 7 ಅಧ್ಯಾಯಗಳನ್ನು (ವಲಯ) ಹೊಂದಿದೆ.
ಪ್ರತಿ ವರ್ಷ ಸೃಜನಾತ್ಮಕ ಮತ್ತು ಸಾಮಾಜಿಕ ಸುಧಾರಣಾ ಕಾರ್ಯಗಳಿಗೆ ರೂಪವನ್ನು ನೀಡುವ ಜನರನ್ನು ಸಂಸ್ಥೆಯು ಗೌರವಿಸುತ್ತದೆ. ಸಂಘಟನೆಯ ಮುಖ್ಯ ಕೆಲಸ ಅಂದರೆ ಮಾನವಿಯತೆ ದೃಷ್ಟಿ ಕೋನ, ಸಾಮಾಜಿಕ ಕಳಕಳಿ ಮತ್ತು ರಾಷ್ಟ್ರೀಯ ದೃಷ್ಟಿಕೋನ.
ಈ ಸುದ್ದಿಯನ್ನೂ ಓದಿ: Vidhana Soudha: ಶಕ್ತಿಸೌಧದಲ್ಲಿ ಸಾಹಿತ್ಯ-ಸಂಸ್ಕೃತಿಯ ಅನಾವರಣ
ಜನ ಪರಿಷತ್‌ನ ಮಹಿಳಾ ವಿಭಾಗದ ದಕ್ಷಿಣ ವಿಭಾಗದ ಅಧ್ಯಕ್ಷೆ ಡಾ. ಸಂಗೀತಾ ಹೊಳ್ಳ ಅವರು ಮಾಡಿದ ಶಿಫಾರಸಿನ ಮೇರೆಗೆ ಅಧ್ಯಕ್ಷ ಎನ್.ಕೆ. ತ್ರಿಪಾಠಿ ಅವರು ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ ಹೆಗಡೆ ಅವರನ್ನ ಜನಪರಿಷತ್ ಅಧ್ಯಾಯದ ಉತ್ತರ ಕನ್ನಡದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿದ್ದಾರೆ.