#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Elon Musk: ಟ್ರಂಪ್‌ ಪದಗ್ರಹಣದಲ್ಲಿ ಎಲಾನ್‌ ಮಸ್ಕ್‌ ಭಾಷಣ; ಕೈ ಸನ್ನೆ ನೋಡಿ ಹಿಟ್ಲರ್‌ಗೆ ಹೋಲಿಸಿದ ನೆಟ್ಟಿಗರು!

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಟೆಸ್ಲಾ ಒಡೆಯ ಎಲಾನ್‌ ಮಸ್ಕ್‌ ಕೂಡ ಭಾಗಿಯಾಗಿದ್ದು, ವೇದಿಕೆಯಲ್ಲಿ ಅವರು ಮಹತ್ವದ ಭಾಷಣ ಮಾಡಿದ್ದಾರೆ. ಭಾಷಣದ ವೇಳೆ ಎಲಾನ್‌ ಮಸ್ಕ್‌ ಒಂದು ಕೈಯನ್ನು ಮೇಲಕ್ಕೆತ್ತಿ ಸನ್ನೆ ಮಾಡಿದ್ದು,ಅದನ್ನು ನೆಟ್ಟಿಗರು ನಾಜಿ ಸೆಲ್ಯೂಟ್‌ಗೆ ಹೋಲಿಸಿ ಹಿಟ್ಲರ್‌ ಎಂದು ಕರೆದಿದ್ದಾರೆ.

ಎಲಾನ್‌ ಮಸ್ಕ್‌ ಕೈ ಸನ್ನೆಯನ್ನು ಹಿಟ್ಲರ್‌ಗೆ ಹೋಲಿಸಿದ ನೆಟ್ಟಿಗರು!

Elon Musk

Profile Deekshith Nair Jan 21, 2025 12:13 PM

ವಾಷಿಂಗ್ಟನ್:‌ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌(Donald Trump) ಅಧಿಕಾರ ಸ್ವೀಕರಿಸಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಟೆಸ್ಲಾ ಒಡೆಯ ಎಲಾನ್‌ ಮಸ್ಕ್‌(Elon Musk) ಕೂಡ ಭಾಗಿಯಾಗಿದ್ದು, ವೇದಿಕೆಯಲ್ಲಿ ಅವರು ಮಹತ್ವದ ಭಾಷಣ ಮಾಡಿದ್ದಾರೆ. ಭಾಷಣದ ವೇಳೆ ಎಲಾನ್‌ ಮಸ್ಕ್‌ ಒಂದು ಕೈಯನ್ನು ಮೇಲಕ್ಕೆತ್ತಿ ಸನ್ನೆ(Hand Gesture) ಮಾಡಿದ್ದು,ಅದನ್ನು ನೆಟ್ಟಿಗರು ನಾಜಿ ಸೆಲ್ಯೂಟ್‌ಗೆ ಹೋಲಿಸಿ ಹಿಟ್ಲರ್‌ ಎಂದು ಕರೆದಿದ್ದಾರೆ.ಇದೀಗ ಎಲಾನ್‌ ಮಸ್ಕ್‌ನ ಆ ಫೋಟೊ ಭಾರೀ ವೈರಲ್‌ ಆಗಿದೆ.

ಎಲಾನ್‌ ಮಸ್ಕ್‌ ಡೊನಾಲ್ಡ್‌ ಟ್ರಂಪ್‌ ಅವರ ಪದಗ್ರಹಣ ಸಮಾರಂಭದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ಮಧ್ಯೆ ಅವರು ʼಇದು ನಿಜಕ್ಕೂ ಮಹತ್ವದ ದಿನವಾಗಿದೆ. ಇದನ್ನು ಸಾಧ್ಯವಾಗಿಸಿದ ಅಮೆರಿಕದ ಪ್ರಜೆಗಳಿಗೆ ಧನ್ಯವಾದಗಳುʼಎಂದು ಹೇಳುತ್ತಾ ತಮ್ಮ ಬಲಗೈಯನ್ನು ಎದೆಯ ಮೇಲೆ ಇಟ್ಟುಕೊಂಡು ಅಂಗೈಯನ್ನು ಕೆಳಗೆ ಮಾಡಿದ್ದು, ಬೆರಳುಗಳನ್ನು ನೇರಮಾಡಿ ಒಟ್ಟಿಗೆ ತಮ್ಮ ತೋಳನ್ನು ಚಾಚಿದ್ದಾರೆ. ಇದು ನಾಜಿ ಸೆಲ್ಯೂಟ್‌ಗೆ ಹೋಲುತ್ತದೆ ಎಂದು ಹಲವರು ಕಿಡಿಕಾರಿದ್ದಾರೆ. ಇನ್ನು ಕೆಲವರು ಎಲಾನ್‌ ಮಸ್ಕ್‌ನನ್ನು ಹಿಟ್ಲರ್‌ ಎಂದು ಕರೆದಿದ್ದಾರೆ.



ಈ ಕುರಿತ ಪೋಸ್ಟ್‌ ಎಕ್ಸ್‌ನಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ವತಃ ಎಲಾನ್‌ ಮಸ್ಕ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು ತಮ್ಮ ವಿರುದ್ಧದ ಟೀಕೆಗಳನ್ನು ತಳ್ಳಿ ಹಾಕಿದ್ದಾರೆ. ʼಇದು ಕೊಳಕು ಮನಃಸ್ಥಿತಿ.‌ಅವರಿಗೆ ಮತ್ತಷ್ಟು ಕೆಟ್ಟ ಟಿಕ್‌ಗಳ ಅಗತ್ಯವಿದೆ. ಇಲ್ಲಿ ಎಲ್ಲರೂ ಹಿಟ್ಲರ್. ದಾಳಿಯಿಂದ ತುಂಬಾ ದಣಿದಿದ್ದೇವೆʼ ಎಂದು ಬರೆದುಕೊಂಡಿದ್ದಾರೆ. ಬ್ರಿಟಿಷ್‌ ಪತ್ರಕರ್ತೊಬ್ಬರು ಅದು ನಾಜಿ ಸೆಲ್ಯೂಟ್‌ನಂತೆ ಕಾಣುವುದಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹರಡಬಾರದು ಎಂದಿದ್ದಾರೆ. ಆದರೆ ವಿವಾದದ ಕಿಡಿ ಮಾತ್ರ ಈವರೆಗೂ ಆರಿಲ್ಲ.



ಕುಣಿದು ಕುಪ್ಪಳಿಸಿದ ಎಲಾನ್‌ ಮಸ್ಕ್‌

ಡೊನಾಲ್ಡ್ ಟ್ರಂಪ್‌ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜಗತ್ತಿನ ಶ್ರೀಮಂತ ವ್ಯಕ್ತಿ, ಟೆಸ್ಲಾ ಒಡೆಯ ಎಲಾನ್ ಮಸ್ಕ್‌ ಕುಣಿದು ಸಂಭ್ರಮಿಸಿದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.



ಟ್ರಂಪ್‌ ಪ್ರಮಾಣ ವಚನಕ್ಕೂ ಮುನ್ನ ನಡೆದ ರ್‍ಯಾಲಿಯಲ್ಲಿ ಎಲಾನ್ ಮಸ್ಕ್ ಕುಣಿದು ಕುಪ್ಪಳಿಸಿದ್ದಾರೆ. ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಮಸ್ಕ್ ನೋಡಿ ನೆರೆದಿದ್ದ ಜನ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ನೋಡಿ:Donald Trump: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹಿಂದೆ ಸರಿಯುವ ಆದೇಶಕ್ಕೆ ಸಹಿ ಹಾಕಿದ ಟ್ರಂಪ್ ; WHO ಮೇಲಿನ ಪರಿಣಾಮವೇನು?