Viral News: ಇವನು ರಿಯಲ್ ‘ವಿಕ್ಕಿ ಡೋನರ್’; ಎಲ್ಲ ದೇಶದಲ್ಲೂ ತನ್ನದೊಂದು ಮಗು ಇರಬೇಕೆಂಬುದು ಈತನ ಬಯಕೆ!
Viral News: ಒತ್ತಡದ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿನ ಬದಲಾವಣೆ ಸೇರಿದಂತೆ ಹಲವಾರು ಕಾರಣಗಳಿಂದ ಹಲವರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಂದುತ್ತಿದೆ. ಇದಕ್ಕೆ ಪೂರಕವಾಗಿ ವೀರ್ಯ ದಾನಿಗಳಿಗೆ ಬೇಡಿಕೆಯಿದೆ. ಇಂತಹ ಒಬ್ಬ ವೀರ್ಯದಾನಿಯ ಬಗೆಗಿನ ಕುತೂಹಲಕಾರಿ ಸುದ್ದಿಯೊಂದು ಇಲ್ಲಿದೆ.
Source : News18
ವಾಷಿಂಗ್ಟನ್, ಜ. 17, 2025: 2012ರಲ್ಲಿ ಆಯುಷ್ಮಾನ್ ಖುರಾನ (Ayushmann Khurrana) ಅಭಿನಯದ ‘ವಿಕ್ಕಿ ಡೋನರ್’ (Vicky Donor) ಎಂಬ ಹಿಂದಿ ಕಾಮಿಡಿ ಚಿತ್ರ (Bollywood Film) ತೆರೆಕಂಡು ಸಿಕ್ಕಾಪಟ್ಟೆ ಯಶಸ್ಸನ್ನು ಕಂಡಿತ್ತು. ಈ ಚಿತ್ರದಲ್ಲಿ ‘ವೀರ್ಯ ದಾನಿ’ (Sperm Donor) ವಿಕ್ಕಿ ಎಂಬ ಯುವಕನ ಪಾತ್ರದಲ್ಲಿ ಖುರಾನ ಮನೋಜ್ಞ ಅಭಿನಯ ನೀಡಿ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ವಿಕ್ಕಿಯ ವೀರ್ಯ ಅತ್ಯುತ್ತಮ ಗುಣಮಟ್ಟದ್ದಾಗಿದ್ದ ಕಾರಣ ಅದಕ್ಕೆ ಸಿಕ್ಕಾಪಟ್ಟೆ ಬೇಡಿಕೆಯಿತ್ತು ಮತ್ತು ದೆಹಲಿಯ ಐವಿಎಫ್ ಸೆಂಟರ್ ಒಂದು ಈತನೊಂದಿಗೆ ಕಾಂಟ್ರ್ಯಾಕ್ಟ್ ಸಹ ಮಾಡಿಕೊಂಡಿತ್ತು. ಆದರೆ ವಿಪರ್ಯಾಸವೆಂದರೆ ವಿಕ್ಕಿಗೆ ಮದುವೆಯಾದ ಮೇಲೆ ಮಕ್ಕಳೇ ಆಗುವುದಿಲ್ಲ...ಮುಂದೇನಾಗುತ್ತದೆ ಎಂಬುದು ಈ ಕಥೆಯ ಸಸ್ಪೆನ್ಸ್ ಆಗಿತ್ತು.
ಈ ಕಥೆಗೆ ಪೂರಕವಾಗಿ ಇಲ್ಲೊಬ್ಬ ರಿಯಲ್ ವೀರ್ಯ ದಾನಿಯಿದ್ದಾನೆ. ಅಮೆರಿಕದ ಕ್ಯಾಲಿಫೋರ್ನಿಯಾದ (California) ಕೈಲೆ ಗೋರ್ಡಿ ಎಂಬಾತ ವೀರ್ಯ ದಾನಿಯಾಗಿ ಗುರುತಿಸಿಕೊಂಡಿದ್ದು, ಈತನಿಗೆ ಒಂದು ಮಹದಾಸೆಯಿದೆ. ಅದೇನಂದರೆ 2025ರ ವೇಳೆಗೆ ಈತನಿಗೆ 100 ಮಕ್ಕಳಿಗೆ ಬಯಾಲಾಜಿಕಲ್ ತಂದೆಯಾಗಬೇಕೆಂಬ (Biological Father) ಆಸೆಯಿದೆಯಂತೆ. ಈಗಾಗಲೇ ಕೈಲೆ 87 ಮಕ್ಕಳಿಗೆ ಬಯಾಲಾಜಿಕಲ್ ಫಾದರ್ ಆಗಿದ್ದಾನೆ. ಈತನ ಇನ್ನೊಂದು ಮಹದಾಸೆಯೆಂದರೆ ವಿಶ್ವದ ಎಲ್ಲ ದೇಶಗಳಲ್ಲೂ ಇವನ ಒಂದೊಂದು ಮಕ್ಕಳಿರಬೇಕಂತೆ!
ಕೈಲ್ ತನ್ನ ಫ್ರೀ ವೆಬ್‌ಸೈಟ್ ‘ಬಿ ಪ್ರಗ್ನೆಂಟ್ ನೌ’ (Be Pregnant Now) ಮೂಲಕ ಉಚಿತ ವೀರ್ಯ ದಾನವನ್ನು ಮಾಡಿಕೊಂಡು ಬರುತ್ತಿದ್ದಾನೆ. ಇದೀಗ ಈತ ವೀರ್ಯ ದಾನ ಮಾಡಿರುವ ಪ್ರಕರಣದಲ್ಲಿ ಇಂಗ್ಲೆಂಡ್, (England) ಸ್ವೀಡನ್ (Sweden), ನಾರ್ವೆ (Norway) ಮತ್ತು ಸ್ಕಾಟ್ ಲ್ಯಾಂಡ್‌ಗಳಲ್ಲಿ (Scotland) 14 ಮಕ್ಕಳು ಜನಿಸಲು ಸಿದ್ದರಾಗಿದ್ದಾರೆ.
ಮಕ್ಕಳನ್ನು ಪಡೆಯುವ ವಿಚಾರದಲ್ಲಿ ಸಮಸ್ಯೆಗೊಳಗಾಗಿರುವ ಮಹಿಳೆಯರಿಗೆ ಸಹಾಯ ಮಾಡಲು ಕೈಲ್ ಸದಾ ಸಿದ್ಧನಾಗಿದ್ದಾನೆ. ಸಹಾಯ ಅಗತ್ಯವಿರುವವರಿಗೆ ಸಾಕೆನ್ನಿಸುವಲ್ಲಿವರೆಗೆ ತಾನು ಈ ಸೇವೆಯನ್ನು ಮುಂದುವರಿಸುವುದಾಗಿ ಕೈಲ್ ಹೇಳಿಕೊಂಡಿದ್ದಾನೆ.
‘ಹಲವಾರು ಮಕ್ಕಳ ತಂದೆ ಎಣಿಸಿಕೊಳ್ಳುವುದಕ್ಕೆ ನನಗೆ ಖುಷಿಯಿದೆ. ಈ ಎಲ್ಲ ಮಹಿಳೆಯರಿಗೆ ಇನ್ನು ನಮಗೆ ಮಕ್ಕಳಾಗುವುದಿಲ್ಲ ಎಂಬ ಸಂಕಷ್ಟದಲ್ಲಿದ್ದಾಗ ಅವರ ಕುಟುಂಬಕ್ಕೊಂದು ಹೊಸ ಸದಸ್ಯ ಬರುವಂತೆ ಮಾಡುವಲ್ಲಿ ನನ್ನ ಪಾತ್ರವಿರುವುದು ಖುಷಿಯ ವಿಚಾರವಾಗಿದೆ. ವಿಶ್ವದ ಒಟ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುವಂತೆ ಮಾಡುವಲ್ಲಿ ನಾನು ಇನ್ನೂ ದೂರದ ಹಾದಿ ಕ್ರಮಿಸಬೇಕಿದೆ. ನಿಜ ಹೇಳಬೇಕಂದರೆ ಇಷ್ಟೇ ಮಕ್ಕಳ ತಂದೆಯಾಗಬೇಕೆಂಬ ಗುರಿಯನ್ನು ನಾನೇನು ಇಟ್ಟುಕೊಂಡಿಲ್ಲ. ಮಹಿಳೆಯರಿಗೆ ನನ್ನ ಅಗತ್ಯವಿಲ್ಲವೆಂದಾಗುವಲ್ಲಿವರಗೆ ನಾನು ಅವರಿಗೆ ಮಕ್ಕಳನ್ನು ಹೊಂದಲು ಸಹಾಯ ಮಾಡುತ್ತಿರುತ್ತೇನೆ’ ಎಂದು ಕೈಲ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ.
ಈ ಸುದ್ದಿಯನ್ನೂ ಓದಿ: Viral Video: ಸೆಲ್ಫಿಗೆ ಪೋಸ್ ನೀಡಲು 100 ರೂ. ಚಾರ್ಚ್ ಮಾಡುವ ವಿದೇಶಿ ಮಹಿಳೆ; ಇದು ಹಣ ವಸೂಲಿ ಮಾಡುವ ಉಪಾಯ ಎಂದ ನೆಟ್ಟಿಗರು
ಇನ್ನೊಂದೆಡೆ, ವಿಶ್ವಾದ್ಯಂತ ಮಕ್ಕಳನ್ನು ಹೊಂದಲು ಶ್ರಮ ಪಡುತ್ತಿರುವವರಿಗೆ ತನ್ನ ವೀರ್ಯ ದಾನದ ಮೂಲಕ ಸಹಾಯ ಮಾಡುತ್ತಿರುವ ಕೈಲ್ ತನಗೊಂದು ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವಲ್ಲಿ ಇನ್ನೂ ಸಫಲನಾಗಿಲ್ಲ! ಅನಿಕಾ ಫಿಲಿಪ್ ಎಂಬ ಯುವತಿಯೊಂದಿಗೆ ಕೈಲ್ ಪ್ರೀತಿಯಲ್ಲಿದ್ದರೂ ಆ ಸಂಬಂಧ ಎಂಟು ತಿಂಗಳು ಮಾತ್ರವೇ ಉಳಿದಿತ್ತು. ಕೈಲ್ ಈಗಲೂ ಸಹ ತನಗೆ ಸೆಟ್ ಆಗುವ ಸೂಕ್ತ ಸಂಗಾತಿಯೊಬ್ಬಳ ಹುಡುಕಾಟದಲ್ಲಿದ್ದಾನೆ.
ಇದು ವಿಶ್ವದ ಹಲವೆಡೆ ಹಲವು ಮಕ್ಕಳಿಗೆ ಬಯಲಾಜಿಕಲ್ ಫಾದರ್ ಆಗಿರುವ ಕೈಲ್ ಎಂಬ ಯುವಕನ ವೀರ್ಯದಾನದ ನೈಜ ಕಥೆ. ಇದು ನಿಮಗೆ ಸರಿಯಾಗಿ ಅರ್ಥವಾಗಬೇಕಿದ್ರೆ 'ವಿಕಿ ಡೋನರ್' ಎಂಬ ಹಿಂದಿ ಫಿಲ್ಮನ್ನು ಒಮ್ಮೆ ನೋಡಿ!