Akaal Movie Controversy: ಸಿಖ್ಖರಿಗೆ ಅಪಮಾನ... ಅಕಾಲ್ ಚಿತ್ರತಂಡಕ್ಕೆ ಭಾರೀ ಸಂಕಷ್ಟ!
ಅಕಾಲ್ ಸಿನಿಮಾದಲ್ಲಿ(Akaal Controversy) ಸಿಖ್ ಸಮುದಾಯದ ಬಗ್ಗೆ ಅಗೌರವ, ನಕಾರಾತ್ಮಕವಾಗಿ ತೋರಿಸಿದ್ದು ಈ ಬಗ್ಗೆ ಸೋಷಿಯಲ್ ಮೀಡಿ ಯಾದಲ್ಲಿ ವ್ಯಾಪಕ ಚರ್ಚೆ ಕೂಡ ಉಂಟು ಮಾಡಿದೆ. ಅಕಾಲ್ ಸಿನಿಮಾವು ಸಿಖ್ಖರ ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತಿದೆ ಎಂದು ಖಲಿಸ್ತಾನ್ ಮಿಷನ್ ಫ್ರೆಂಟ್ ನ ಮಾಜಿ ಅಧ್ಯಕ್ಷ ಬಾಬಾ ಬಕ್ಷಿಸ್ ಸಿಂಗ್ ಅವರು ಆರೋಪಿಸಿದ್ದಾರೆ.


ನವದೆಹಲಿ: ಪಂಜಾಬ್ ನಟ, ಗಾಯಕ ಗಿಪ್ಪಿ ಗ್ರೆವಾಲ್ ಅಭಿನಯದ ಅಕಾಲ್ (Akaal Controversy) ಸಿನಿಮಾ ತೆರೆಕಂಡಿದ್ದು ಈಗಾಗಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಪಂಜಾಬ್ ನಲ್ಲಿ ಈ ಸಿನಿಮಾಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಖಲಿಸ್ತಾನ್ ಮಿಷನ್ ಫ್ರಂಟ್ ನ ಮಾಜಿ ಅಧ್ಯಕ್ಷ ಬಾಬಾ ಬಕ್ಷಿಸ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಕಾಲ್ ಸಿನಿಮಾದಲ್ಲಿ ಸಿಖ್ ಸಮುದಾಯದ ಬಗ್ಗೆ ಅಗೌರವ, ನಕಾರಾತ್ಮಕವಾಗಿ ತೋರಿಸಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಕೂಡ ಉಂಟು ಮಾಡಿದೆ. ಅಕಾಲ್ ಸಿನಿಮಾವು ಸಿಖ್ಖರ ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತಿದೆ ಎಂದು ಖಲಿಸ್ತಾನ್ ಮಿಷನ್ ಫ್ರೆಂಟ್‌ನ ಮಾಜಿ ಅಧ್ಯಕ್ಷ ಬಾಬಾ ಬಕ್ಷಿಸ್ ಸಿಂಗ್ ಆರೋಪಿಸಿದ್ದಾರೆ.
ಅಕಾಲ್ ಸಿನಿಮಾದಲ್ಲಿ ಸಿಖ್ಖರ ಘನತೆಗೆ ಚ್ಯುತಿ ತರುವ ಸಂಗತಿಗಳು ಸೇರ್ಪಡೆ ಆಗಿವೆ. ಸಿನಿಮಾದಲ್ಲಿ ಸಿಖ್ ಪಾತ್ರಗಳನ್ನು ಸಾಕಷ್ಟು ನೆಗೆಟಿವ್ ಆಗಿ ತೋರಿಸಲಾಗಿದ್ದು ಸಿಖ್ಖರು ಮದ್ಯ ಸೇವಿಸುವುದು, ತಂಬಾಕು ಸೇವಿಸುವುದನ್ನು ತೋರಿಸಲಾಗಿದೆ. ಅದರೊಂದಿಗೆ ಸಿಖ್ಖರನ್ನು ತಲೆ ಬೋಳಿಸಿಕೊಂಡವರು ಎಂದು ಕೂಡ ತೋರಿಸಲಾಗಿದೆ. ಇದು ಧಾರ್ಮಿಕ ನಂಬಿಕೆಗೆ ಕಳಂಕ ನೀಡಿದಂತಿದೆ ಎಂದು ಬಕ್ಷಿಸ್ ಸಿಂಗ್ ಆರೋಪ ಮಾಡಿದ್ದಾರೆ..
ಇದನ್ನು ಓದಿ: Varnavedam Movie: ʼವರ್ಣವೇದಂʼ ಚಿತ್ರದ ʼಓ ವೇದ ಓ ವೇದʼ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾದ ಸೋನು ನಿಗಂ
ಸಿಖ್ ಸಮುದಾಯಕ್ಕೆ ಘನತೆ ಬದ್ಧಇತಿಹಾಸವಿದೆ. ಆದರೆ ಸಿಖ್ ಪರಂಪರೆಯನ್ನು ದುರ್ಬಲಗೊಳಿಸುವ ರೀತಿಯಲ್ಲಿ ನಿರ್ಮಾಪಕರು ಕಥೆ ಬರೆದಿದ್ದಾರೆ. ಇಂತಹ ಸಿನಿಮಾವನ್ನು ಸರ್ಕಾರ ಕೂಡ ಬೆಂಬಲಿಸುತ್ತಿದೆ ಎನ್ನುವುದೇ ಬೇಸರದ ಸಂಗತಿ. ಈ ಸಿನಿಮಾವು ಹರಿಸಿಂಗ್ ನಲುವಾ, ಜಸ್ಸಾ ಸಿಂಗ್ ಅಹ್ಲುವಾಲಿಯಂತಹ ಸಿಖ್ ಯೋಧರನ್ನು ಆಧರಿಸಿದ್ದರೆ ಪೂರ್ಣ ಗೌರವ ಮತ್ತು ಘನತೆಯಿಂದ ತೋರಿಸಬೇಕಿತ್ತು. ಆದರೆ ಸಿಖ್ ಸಮುದಾಯ ವನ್ನು ನೆಗೆಟಿವ್ ಆಗಿ ತೋರಿಸಿದ್ದಾರೆ ಹೀಗಾಗಿ ಈ ರೀತಿಯ ಸಿನೆಮಾ ತೆರೆ ಕಾಣಲು ಸಾಧ್ಯವಿಲ್ಲ ಎಂದು ಖಲಿಸ್ತಾನ್ ಮಿಷನ್ ಫ್ರೆಂಟ್ ನ ಮಾಜಿ ಅಧ್ಯಕ್ಷ ಬಾಬಾ ಬಕ್ಷಿಸ್ ಸಿಂಗ್ ಆರೋಪಿಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ ಎಂದು ಚಿತ್ರ ತಂಡಕ್ಕೆ ಬೆದರಿಕೆ ಹಾಕಿದ್ದಾರೆ. ಆದರೆ ಅಕಾಲ್ ಚಿತ್ರದ ನಿರ್ಮಾಪಕರು ಈ ವಿವಾದದ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ಅಕಾಲ್ ಸಿನಿಮಾದಲ್ಲಿ 1840ರ ದಶಕದ ಪಂಜಾಬ್‌ನ ಇತಿಹಾಸವನ್ನು ಸಾರುವ ಕಥಾ ಹಂದರವಿದೆ. ಮಹಾರಾಜ ರಂಜೀತ್ ಸಿಂಗ್ ಮರಣದ ಬಳಿಕ ಜಂಗಿ ಜಹಾನ್‌ನಿಂದ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಸರ್ದಾರ್ ಅಕಾಲ್ ಸಿಂಗ್ ಯಶೋಗಾಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅದೇ ರೀತಿ ಸಿಖ್ ಯೋಧರ ಬದುಕಿನ ಚಿತ್ರಣ, ಯುದ್ಧ ಸನ್ನಿ ವೇಶಗಳು, ಕೌಟುಂಬಿಕ ಮೌಲ್ಯ ಇತ್ಯಾದಿಗಳ ದೃಶ್ಯ ಇರಲಿದ್ದು ಚಿತ್ರದಲ್ಲಿ ಗುರುಪ್ರೀತ್ ಗುಗ್ಗಿ, ನಿಮ್ರತ್ ಖೈರಾ ಮೊದ ಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.