Pahalgam Terror Attack: ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ; ಟಿಆರ್‌ಎಫ್ ಕಮಾಂಡರ್‌ಗಾಗಿ ಮುಂದುವರಿದ ಶೋಧ
ಕಾಶ್ಮೀರದಲ್ಲಿ ರಕ್ತಪಾತ ನಡೆಸಿದ್ದ ಉಗ್ರರ ಬೇಟಿಗೆ ಸೇನೆ ಸಜ್ಜಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಬುಧವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಟಾಪ್ ಕಮಾಂಡರ್‌ನ ಸುಳಿವು ಇದೀಗ ಸಿಕ್ಕಿದೆ.


ಶ್ರೀನಗರ: ಕಾಶ್ಮೀರದಲ್ಲಿ ರಕ್ತಪಾತ ನಡೆಸಿದ್ದ ಉಗ್ರರ ಬೇಟಿಗೆ ಸೇನೆ ಸಜ್ಜಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ (Pahalgam Terror Attack) ಬುಧವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿ ನಡೆಯುತ್ತಿದೆ. ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಟಾಪ್ ಕಮಾಂಡರ್‌ನ ಸುಳಿವು ಇದೀಗ ಸಿಕ್ಕಿದೆ. ಕಮಾಂಡರ್ ಇರುವ ಮನೆಯ ಸುತ್ತ ಭದ್ರತಾಪಡೆಗಳು ಸುತ್ತುವರೆದಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್‌ಮಾರ್ಗ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ಹೊಣೆಯನ್ನು ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಈ ವರೆಗೆ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮುಂಜಾನೆ, ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತು ಮತ್ತು ಭಾರೀ ಗುಂಡಿನ ಚಕಮಕಿಯ ನಂತರ ಅವರನ್ನು ಹೊಡೆದುರುಳಿಸಿತು. ಎನ್‌ಕೌಂಟರ್ ನಂತರ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಮತ್ತು ಪಾಕಿಸ್ತಾನಿ ಕರೆನ್ಸಿಯನ್ನು ವಶಪಡಿಸಿಕೊಂಡವು.
ಈ ಸುದ್ದಿಯನ್ನೂ ಓದಿ: Robert Vadra: "ಮುಸ್ಲಿಮರಿಗೆ ದುರ್ಬಲ ಅನ್ನೋ ಭಾವನೆ ಇದೆ"; ಪಹಲ್ಗಾಮ್ ದಾಳಿ ಕುರಿತು ವಿವಾದ ಸೃಷ್ಟಿಸಿದ ಸೋನಿಯಾ ಗಾಂಧಿ ಅಳಿಯ
ಏತನ್ಮಧ್ಯೆ, ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ನಿನ್ನೆ ಘಟನೆ ನಡೆದ ತಕ್ಷಣ ಪ್ರಧಾನಿಯವರ ಸೂಚನೆ ಮೇರೆಗೆ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರಕ್ಕೆ ತಲುಪಿದ್ದರು. ಇದೀಗ ಅವರು ದೆಹಲಿಗೆ ವಾಪಾಸಾಗಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಪ್ರಧಾನಿಯವರ ನಿವಾಸಕ್ಕೆ ತಲುಪಿದ್ದಾರೆ.