MS Dhoni: ನಿವೃತ್ತಿ ಬಗ್ಗೆ ಚಿಂತಿಸಿಲ್ಲ ಎಂದ ಧೋನಿ; ಮುಂದಿನ ಆವೃತ್ತಿಯಲ್ಲೂ ಆಡುವ ಸಾಧ್ಯತೆ
ಆತುರವಿಲ್ಲ. ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು. ನಾನು ಆಟ ಮುಗಿಸಿದ್ದೇನೆ ಎಂದು ಹೇಳುತ್ತಿಲ್ಲ, ನಾನು ಮತ್ತೆ ಬರುತ್ತೇನೆ ಎಂದು ಹೇಳುತ್ತಿಲ್ಲ. ನನಗೆ ಮುಂದಿನ ಐಪಿಎಲ್ ತನಕ ಇನ್ನೂ ಸಮಯವಿದೆ. ಅದರ ಬಗ್ಗೆ ಯೋಚಿಸಿ ನಂತರ ನಿರ್ಧರಿಸುತ್ತೇನೆ ಎಂದು ಧೋನಿ ತಮ್ಮ ನಿವೃತ್ತಿಯನ್ನು ಮತ್ತೆ ರಹಸ್ಯವಾಗಿಟ್ಟರು.


ಅಹಮದಾಬಾದ್: ಕಳೆದ ಮೂರು ವರ್ಷಗಳಿಂದ ಭಾರೀ ಕುತೂಹಲ ಮತ್ತು ಚರ್ಚೆಯಾಗಿದ್ದ ಧೋನಿ ಐಪಿಎಲ್ ನಿವೃತ್ತಿ(ms dhoni ipl retirement) ಇದೀಗ ಮುಂದಿನ ಆವೃತ್ತಿಗೂ ಮುಂದುವರಿದಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಧೋನಿ(MS Dhoni), ಸದ್ಯ ನಾನು ರಾಂಚಿಗೆ ತೆರಳಿ ಕೆಲವು ಬೈಕ್ ಸವಾರಿ ನಡೆಸಿ ಆನಂದಿಸುತ್ತೇನೆ. ಮುಂದಿನ 4-5 ತಿಂಗಳ ಒಳಗೆ, ಕಠಿಣ ಶ್ರಮದ ಒತ್ತಡಕ್ಕೆ ತಮ್ಮ ದೇಹ ಹೇಗೆ ಸ್ಪಂದಿಸುವುದೊ ಅದರ ಆಧಾರದಲ್ಲಿ ತಮ್ಮ ಐಪಿಎಲ್(IPL 2025) ಭವಿಷ್ಯದ ಬಗ್ಗೆ ನಿರ್ಧಾರ ಮಾಡುವೆ ಎಂದರು. ಈ ಮೂಲಕ ಮುಂದಿನ ಆವೃತ್ತಿಯಲ್ಲಿಯೂ ತಮ್ಮ ಆಟ ಮುಂದುವರಿಸುವ ಸುಳಿವು ನೀಡಿದ್ದಾರೆ.
"ಆತುರವಿಲ್ಲ. ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು. ನಾನು ಆಟ ಮುಗಿಸಿದ್ದೇನೆ ಎಂದು ಹೇಳುತ್ತಿಲ್ಲ, ನಾನು ಮತ್ತೆ ಬರುತ್ತೇನೆ ಎಂದು ಹೇಳುತ್ತಿಲ್ಲ. ನನಗೆ ಮುಂದಿನ ಐಪಿಎಲ್ ತನಕ ಇನ್ನೂ ಸಮಯವಿದೆ. ಅದರ ಬಗ್ಗೆ ಯೋಚಿಸಿ ನಂತರ ನಿರ್ಧರಿಸುತ್ತೇನೆ" ಎಂದು 43 ವರ್ಷದ ಧೋನಿ ನಿವೃತ್ತಿ ನಿರ್ಧಾರವನ್ನು ಮತ್ತೆ ರಹಸ್ಯವಾಗಿಯೇ ಇಟ್ಟರು.
"ನನ್ನ ಕ್ರಿಕೆಟ್ ಬದುಕಿನುದ್ದಕ್ಕೂ ಅಭಿಮಾನಿಗಳ ಪ್ರೀತಿ ಮತ್ತು ಅಕ್ಕರೆ ತಮಗೆ ಲಭಿಸಿದೆ. ಆದರೆ ನನಗೆ ಈಗ 43 ವರ್ಷ ಎಂಬುದನ್ನು ಮರೆಯುವಂತಿಲ್ಲ. ದೀರ್ಘ ಕಾಲದಿಂದ ಆಡುತ್ತಿದ್ದೇನೆ. ಸದ್ಯಕ್ಕೆ ನಿವೃತ್ತಿ ಬಗ್ಗೆ ಯಾವುದೇ ಹೇಳಿಕೆ ನೀಡಲ್ಲ" ಎಂದರು. 2023 ರಲ್ಲಿಯೇ ಧೋನಿ ಐಪಿಎಲ್ ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದರು.
Dear MS Dhoni, don't even think about retiring. You are known for your comebacks.
— Selfless⁴⁵ (@SelflessCricket) May 25, 2025
CSK already has its squad for 2026, so you can go out on a high note next season, and you truly deserve it. pic.twitter.com/eJfwkWzqRc
ಮೊಣಕೈ ಮೂಳೆ ಮುರಿತಕ್ಕೊಳಗಾಗಿ ಐಪಿಎಲ್‌ನಿಂದ ಋತುರಾಜ್ ಗಾಯಕ್ವಾಡ್ ಹೊರಬಿದ್ದ ಕಾರಣ ಉಳಿದ ಪಂದ್ಯಗಳಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.
278 ಐಪಿಎಲ್ ಪಂದ್ಯಗಳನ್ನು ಆಡಿರುವ ಧೋನಿ 3957 ರನ್ ಬಾರಿಸಿದ್ದಾರೆ. ಇದರಲ್ಲಿ 24 ಅರ್ಧಶತಕ ಒಳಗೊಂಡಿದೆ.