ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: ತಹಾವ್ವುರ್ ರಾಣಾನನ್ನು ಕೂಡಲೇ ಗಲ್ಲಿಗೇರಿಸಿ- 26/11 ಮುಂಬೈ ದಾಳಿಗೆ ಬಲಿಯಾಗಿದ್ದ ತುಕಾರಾಂ ಓಂಬ್ಳೆ ಸಹೋದರ ಒತ್ತಾಯ

Tahawwur Rana: 26/11 ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ದಿನವನ್ನು "ಮಹಾ ದಿನ" ಎಂದು ಕರೆದಿರುವ ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ ಮತ್ತು 26/11ರ ಹೀರೋ ತುಕಾರಾಂ ಓಂಬ್ಳೆ ಅವರ ಸಹೋದರ ಏಕನಾಥ್ ಓಂಬ್ಳೆ, ರಾಣಾನನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ತಹಾವ್ವುರ್ ರಾಣಾನನ್ನು ಕೂಡಲೇ ಗಲ್ಲಿಗೇರಿಸಿ!

ನವದೆಹಲಿ: 26/11 ಮುಂಬೈ ದಾಳಿಯ (Mumbai attack) ಆರೋಪಿ ತಹಾವ್ವುರ್ ರಾಣಾನನ್ನು (Tahawwur Rana) ಭಾರತಕ್ಕೆ ಹಸ್ತಾಂತರ ದಿನವನ್ನು "ಮಹಾ ದಿನ" ಎಂದು ಕರೆದಿರುವ ಅಶೋಕ ಚಕ್ರ ಪ್ರಶಸ್ತಿ (Ashok Chakra award) ಪುರಸ್ಕೃತ ಮತ್ತು 26/11ರ ಹೀರೋ ತುಕಾರಾಂ ಓಂಬ್ಳೆ (Tukaram Omble) ಅವರ ಸಹೋದರ ಏಕನಾಥ್ ಓಂಬ್ಳೆ, ರಾಣಾನನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಮುಂಬೈ ಪೊಲೀಸರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ತುಕಾರಾಂ ಓಂಬ್ಳೆ ಅವರು ಭಯೋತ್ಪಾದಕ ಅಜ್ಮಲ್ ಕಸಬ್‌ನ ರೈಫಲ್ ಹಿಡಿದು ಅವನ ಬಂಧನಕ್ಕೆ ಕಾರಣರಾದರು. ಆದರೆ ದುರದೃಷ್ಟವಶಾತ್ ಅವರು ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದರು.

ಈ ಘಟನೆಯಲ್ಲಿ ಅನೇಕ ಅಮಾಯಕರು ಮತ್ತು ಪೊಲೀಸರು ಮೃತಪಟ್ಟರು, ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಡೇವಿಡ್ ಹೆಡ್ಲಿಯ ಆಪ್ತ ಮಿತ್ರ ರಾಣಾನನ್ನು ಮೊದಲೇ ಗಲ್ಲಿಗೇರಿಸಬೇಕಿತ್ತು. ಆದರೆ, ಈಗ ಆ ಅವಕಾಶ ಒದಗಿ ಬಂದಿದೆ. ಇದು ದೇಶಕ್ಕೆ ಒಂದು ದೊಡ್ಡ ದಿನ. ಆದಷ್ಟು ಬೇಗ ಆತನನ್ನು ಗಲ್ಲಿಗೇರಿಸಬೇಕೆಂದು ನಾನು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ರಾಣಾಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಕಾರ್ಯ ಮಾಡುವ ಪಾಕಿಸ್ತಾನದಲ್ಲಿರುವವರು ಮುಂದೆ ಅಂತಹ ಕೆಲಸಗಳನ್ನು ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು. ಕಸಬ್‌ನ ಶಿಕ್ಷೆಯಲ್ಲಿನ ವಿಳಂಬವನ್ನು ನಾವು ಸಹಿಸಿಕೊಂಡಿದ್ದೇವೆ. ಯಾಕೆಂದರೆ ಅದು ಪಾಕಿಸ್ತಾನದ ನಿಜವಾದ ಮುಖವನ್ನು ಪ್ರಪಂಚದ ಮುಂದೆ ಬಹಿರಂಗಪಡಿಸಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Tahawwur Rana: ಮುಂಬೈ ದಾಳಿಯಲ್ಲಿ ತಹವ್ವುರ್ ರಾಣಾ ಪಾತ್ರ ಬೆಳಕಿಗೆ ಬಂದಿದ್ದು ಹೇಗೆ?

ಮುಂಬೈ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತುಕಾರಾಮ್ ಓಂಬ್ಲೆ ಅವರಿಗೆ 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಅವರ ಧೈರ್ಯಕ್ಕಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಲಾಯಿತು.

2008ರ ನವೆಂಬರ್ 26ರಂದು ರಾತ್ರಿ ಭಯೋತ್ಪಾದಕ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಓಂಬ್ಲೆ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರು ಕೇವಲ ಲಾಠಿ ಹಿಡಿದು ಬಂದು ಬಂದೂಕುಧಾರಿಯಾಗಿದ್ದ ಭಯೋತ್ಪಾದಕನನ್ನು ಎದುರಿಸಿದರು, ಭದ್ರತಾ ಪಡೆಗಳು ಕಸಬ್ ನನ್ನ ಸೆರೆ ಹಿಡಿಯಲು ಅವಕಾಶ ಮಾಡಿಕೊಟ್ಟರು. ಆದರೆ ಈ ವೇಳೆ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡರು.