Friday, 8th November 2024

Gruhalakshmi Scheme: ‘ಗೃಹಲಕ್ಷ್ಮೀ’ ಹಣದಿಂದ ಹೊಲಿಗೆ ಯಂತ್ರ ಖರೀದಿಸಿ ಮೊಮ್ಮಕ್ಕಳ ಬದುಕು ರೂಪಿಸಿದ ಮಹಿಳೆ!

Gruhalakshmi Scheme

ಬಾಗಲಕೋಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ (Gruhalakshmi Scheme) ಸಾಕಷ್ಟು ಹೆಣ್ಣು ಮಕ್ಕಳ ಬದುಕಿಗೆ ಆಸರೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ (Bagalkot) ಮಹಿಳೆಯೊಬ್ಬರು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು, ತನ್ನ ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಹೊಲಿಗೆ ತರಬೇತಿ ನೀಡಿ ಅವರ ಭವಿಷ್ಯಕ್ಕೆ ಬೆಳಕಾಗಾಗಲಿ ಎಂದು ಹೊಲಿಗೆ ಯಂತ್ರ ಖರೀದಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ನಿವಾಸಿ ಗಂಗವ್ವ ಬಿರಾದಾರ ಎನ್ನುವ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಒಟ್ಟು 12 ತಿಂಗಳ 24 ಸಾವಿರ ರೂಪಾಯಿ ಹಣವನ್ನು ಕೂಡಿಟ್ಟು, ಅದರಲ್ಲಿ 8 ಸಾವಿರ ರೂಪಾಯಿ ಹಣದಲ್ಲಿ ಮೊಮ್ಮಕ್ಕಳಿಗಾಗಿ ಹೊಲಿಗೆ ಯಂತ್ರ ಖರೀದಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Jog Falls: ಜೋಗ ಜಲಪಾತದ ಬಳಿ ರೋಪ್‌ವೇ, ಪಂಚತಾರಾ ಹೋಟೆಲ್: ಅರಣ್ಯ ಇಲಾಖೆ ಒಪ್ಪಿಗೆ

ಗಂಗವ್ವ ಬಿರಾದಾರ ಅವರು ಓದು ಬರಹ ಕಲಿತಿಲ್ಲ. ಆದರೆ, ಹೊಲಿಗೆ ತರಬೇತಿ ಪಡೆದಿದ್ದಾರೆ. ತನ್ನ ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಹೊಲಿಗೆಯ ತರಬೇತಿ ನೀಡಿ ಅವರ ಭವಿಷ್ಯಕ್ಕೆ ಬೆಳಕಾಗಾಗಲಿ ಎಂದು ಹೊಲಿಗೆ ಯಂತ್ರ ಖರೀದಿಸಿದ್ದಾರೆ. ಅಲ್ಲದೇ, 12 ಸಾವಿರ ರೂಪಾಯಿ ಹಣವನ್ನು ತನ್ನ ಮೊಮ್ಮಗನ ವಿದ್ಯಾಬ್ಯಾಸದ ಶುಲ್ಕ ಭರಿಸಲು ಹಾಗೂ ಉಳಿದ 4 ಸಾವಿರ ರೂಪಾಯಿಯನ್ನು ಕುಟುಂಬದ ನಿರ್ವಹಣೆಗೆ ಬಳಕೆ ಮಾಡಿದ್ದಾರೆ.

ಕಡುಬಡತನದ ನಡುವೆಯೂ ತನ್ನ ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಸ್ವಾವಲಂಬಿ ಬದುಕು ರೂಪಿಸಿ ಕೊಡಲು ಮುಂದಾಗಿರುವ ಗಂಗವ್ವ ಬಿರಾದಾರ ಅವರ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಾಗಲಕೋಟೆಯ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯಲ್ಲಿ ಗಂಗವ್ವ ಬಿರಾದಾರ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿ | Karnataka Rain: ನ.10ಕ್ಕೆ ಬೆಂಗಳೂರು ಸೇರಿ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ನಿರೀಕ್ಷೆ

ಗಂಗವ್ವ ಅವರ ಉದಾತ್ತ ಮನಸ್ಸಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಸ ವ್ಯಕ್ತಪಡಿಸಿ ಅವರಿಗೆ ಶುಭ ಹಾರೈಸಿದ್ದಾರೆ.