Donald Trump: ಸಾಲಾಗಿ ನಿಂತು ಕೂದಲನ್ನು ಬಿಚ್ಚಿಕೊಂಡು ಯುವತಿಯ ವಿಚಿತ್ರ ಡಾನ್ಸ್! ಟ್ರಂಪ್‌ಗೆ ಸೌದಿಯಲ್ಲಿ ಸಿಕ್ಕ ಸ್ವಾಗತ ಎಂಥದ್ದು ಗೊತ್ತಾ?
Viral Video: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಧ್ಯಪ್ರಾಚ್ಯ ಪ್ರವಾಸದ ಕೊನೆಯ ಹಂತದಲ್ಲಿ ಗುರುವಾರ ಯುಎಇಗೆ ಭೇಟಿ ನೀಡಿದರು. ಕತಾರ್ ಭೇಟಿಯ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಆಗಮಿಸಿದ ಅವರನ್ನು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಸ್ವಾಗತಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕತಾರ್ ಭೇಟಿ

ಅಬುಧಾಬಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಮಧ್ಯಪ್ರಾಚ್ಯ (Middle East) ಪ್ರವಾಸದ ಕೊನೆಯ ಹಂತದಲ್ಲಿ ಗುರುವಾರ ಯುಎಇಗೆ ಭೇಟಿ ನೀಡಿದರು. ಕತಾರ್ ಭೇಟಿಯ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (United Arab Emirates) ಆಗಮಿಸಿದ ಅವರನ್ನು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ (Mohammed bin Zayed Al Nahyan) ಸ್ವಾಗತಿಸಿದರು. ಅಬುಧಾಬಿಯಲ್ಲಿ ಅವರಿಗೆ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸ್ವಾಗತ ಕೋರಲಾಯಿತು. ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ.
ಯುಎಇ ಅಧ್ಯಕ್ಷೀಯ ಅರಮನೆ ಕಾಸರ್ ಅಲ್ ವತನ್‌ಗೆ ಆಗಮಿಸಿದ ಟ್ರಂಪ್ ಅವರನ್ನು ಸಾಂಪ್ರದಾಯಿಕ ‘ಅಲ್-ಅಯ್ಯಾಲ’ ಕಾರ್ಯಕ್ರಮದ ಮೂಲಕ ಸ್ವಾಗತಿಸಲಾಯಿತು. ಒಮಾನ್ ಮತ್ತು ಯುಎಇನ ಸಾಂಸ್ಕೃತಿಕ ಕಲೆಯಾದ ಈ ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ಉದ್ದನೆಯ ಕೂದಲನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಎಸೆಯುವ ಮೂಲಕ ಪ್ರದರ್ಶನ ನೀಡಿದರು.
ವೈಟ್ ಹೌಸ್ ಸಹಾಯಕಿ ಮಾರ್ಗೊ ಮಾರ್ಟಿನ್ ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಟ್ರಂಪ್ ಅವರು ಮಹಿಳೆಯರ ಈ ನೃತ್ಯವನ್ನು ವೀಕ್ಷಿಸುತ್ತಿರುವುದು ಕಂಡುಬಂದಿದೆ. ಡ್ರಮ್‌ಗಳ ಶಬ್ದ ಮತ್ತು ಸಾಂಪ್ರದಾಯಿಕ ಗೀತೆಗಳಿಗೆ ತಕ್ಕಂತೆ ಮಹಿಳೆಯರು ತಮ್ಮ ಕೂದಲನ್ನು ಬಿಚ್ಚಿಕೊಂಡು ಅತ್ತಿಂದ ಇತ್ತ ಬೀಸುತ್ತಾ ನೃತ್ಯ ಮಾಡುತ್ತಾರೆ. ಕೆಲವು ಪುರುಷರು ಕತ್ತಿಯಂತಹ ವಸ್ತುಗಳನ್ನು ಆಡಿಸುವುದೂ ಕಾರ್ಯಕ್ರಮದ ಭಾಗವಾಗಿತ್ತು. ಅದ್ದೂರಿ ಸ್ವಾಗತ ಎಂದು ಮಾರ್ಗೊ ಮಾರ್ಟಿನ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಈ ವಿಡಿಯೋ ಈಗಾಗಲೇ 53 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಕಾಮೆಂಟ್‌ಗಳ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಕೂದಲನ್ನು ಈತರ ಬೀಸುವುದರ ಅರ್ಥವೇನು?” ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ
The welcome ceremony in UAE continues! 🇺🇸🇦🇪 pic.twitter.com/sXqS1IboMN
— Margo Martin (@MargoMartin47) May 15, 2025
ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಷನ್ (ಯುನೆಸ್ಕೋ) ಪ್ರಕಾರ, ಅಲ್-ಅಯ್ಯಾಲ ಕಾರ್ಯಕ್ರಮವು ಕವಿತೆಯ ಗಾಯನ, ಡ್ರಮ್ ಸಂಗೀತ ಮತ್ತು ನೃತ್ಯವನ್ನು ಒಳಗೊಂಡಿದ್ದು, ಯುದ್ಧದ ದೃಶ್ಯವನ್ನು ಸಂಕೇತಿಸುತ್ತದೆ. ಸಾಂಪ್ರದಾಯಿಕ ಉಡುಗೆ ಧರಿಸಿದ ಯುವತಿಯರು ಮುಂಭಾಗದಲ್ಲಿ ಸಾಲಾಗಿ ನಿಂತು ತಮ್ಮ ಉದ್ದನೆಯ ಕೂದಲನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಎಸೆಯುತ್ತಾರೆ. ಎರಡು ಸಾಲುಗಳಲ್ಲಿ ಸುಮಾರು ಇಪ್ಪತ್ತು ಪುರುಷರು ಎದುರೆದುರಾಗಿ ನಿಂತು, ಈಟಿ ಅಥವಾ ಕತ್ತಿಗಳಂತ ತೆಳುವಾದ ಬಿದಿರಿನ ಕಡ್ಡಿಗಳನ್ನು ಹಿಡಿದಿರುತ್ತಾರೆ. ಈ ನೃತ್ಯವನ್ನು ಸಾಮಾನ್ಯವಾಗಿ ಒಮಾನ್ ಮತ್ತು ಯುಎಇನಲ್ಲಿ ಮದುವೆಗಳು ಮತ್ತು ಉತ್ಸವಗಳ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಎಲ್ಲ ವಯಸ್ಸಿನವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಯುಎಇ ಟ್ರಂಪ್ ಅವರ ಮಧ್ಯಪ್ರಾಚ್ಯ ಪ್ರವಾಸದ ಕೊನೆಯ ಸ್ಥಳವಾಗಿದೆ. ಈ ವಾರದ ಆರಂಭದಲ್ಲಿ ಅವರು ಕತಾರ್ ಮತ್ತು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ಗಲ್ಫ್ ರಾಷ್ಟ್ರಗಳಲ್ಲಿ ಅವರನ್ನು ಭವ್ಯವಾದ ಸ್ವಾಗತದೊಂದಿಗೆ ಗೌರವಿಸಲಾಯಿತು. ಸೌದಿ ಅರೇಬಿಯಾದಲ್ಲಿ, ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲಿ ಮಂಗಳವಾರ ಬೆಳಗ್ಗೆ ಆಗಮಿಸಿದಾಗ ಆರು ಫೈಟರ್ ಜೆಟ್‌ಗಳು ಸಾಥ್ ನೀಡಿದ್ದವು. ಕತಾರ್‌ನಲ್ಲಿ ಅವರ ವಿಮಾನವನ್ನು ಫೈಟರ್ ಜೆಟ್‌ಗಳು ಒಟ್ಟಿಗೆ ಕರೆದೊಯ್ದವು.