ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕೊರೆಯುವ ಚಳಿಯಲ್ಲಿ ನಂದಿಬೆಟ್ಟದಲ್ಲಿ ಕಾಣಿಸಿಕೊಂಡ ಗಾಂಧಿ ತಾತ! ಏನಿದು ವೈರಲ್‌ ವಿಡಿಯೊ?

ನಂದಿ ಬೆಟ್ಟದಲ್ಲಿ ಗಾಂಧಿ ಪ್ರತಿಮೆಯ ಹಾಗೆ ವೇಷ ಧರಿಸಿದ ವ್ಯಕ್ತಿಯೊಬ್ಬರು ಕೊರೆಯುವ ಚಳಿಯಲ್ಲೂ ಅಲುಗಾಡದೆ ನಿಂತಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ವಿಗ್ರಹದಂತೆ ನಿಂತ ಆತನನ್ನು ನೋಡಿ ಶಾಕ್ ಆಗಿದ್ದಾರೆ.

ನಂದಿಬೆಟ್ಟದಲ್ಲಿ ಕಾಣಿಸಿಕೊಂಡ ಗಾಂಧಿ; ನೆಟ್ಟಿಗರು ಹೇಳಿದ್ದೇನು?

Profile pavithra Jun 2, 2025 6:47 PM

ಬೆಂಗಳೂರು: ಬೆಂಗಳೂರಿನ ಬಳಿಯ ನಂದಿ ಬೆಟ್ಟದಲ್ಲಿ ಮಂಜಿನಿಂದ ಆವೃತವಾದ ಎತ್ತರದ ಪ್ರದೇಶದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಹೋಲುವ ಉಡುಗೆ ತೊಟ್ಟ ಅಪರಿಚಿತ ವ್ಯಕ್ತಿಯೊಬ್ಬ ಬರಿಗಾಲಿನಲ್ಲಿ ನಿಂತಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ವ್ಯಕ್ತಿ ಸರಳವಾದ ಬಿಳಿ ಧೋತಿ ಮತ್ತು ಶಾಲು ಧರಿಸಿ ಕೊರೆಯುವ ಚಳಿಯಲ್ಲೂ ಮಂಜಿನಲ್ಲಿ ನಿಂತಿದ್ದಾನೆ. ಇದನ್ನು ಕಂಡು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ವೈರಲ್ ವಿಡಿಯೊದಲ್ಲಿ ಕೊರೆಯುವ ಚಳಿಯಲ್ಲಿ ಆತ ಗಡಗಡ ನಡುಗುವುದು ಸೆರೆಯಾಗಿದೆ. ಅಲ್ಲಿದ್ದ ಪ್ರಯಾಣಿಕರು ಆ ವ್ಯಕ್ತಿಯ ಬಳಿಗೆ ಬಂದು ಅವನ ಪಾದಗಳ ಬಳಿ ಇರುವ ಬಕೆಟ್‌ನಲ್ಲಿ ಹಣವನ್ನು ಹಾಕಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೊ 1.3 ಮಿಲಿಯನ್ ವ್ಯೂವ್ಸ್‌ ಗಳಿಸಿದೆ. ಅದರಲ್ಲಿ ಕೆಲವರು ಆ ವ್ಯಕ್ತಿಯು ಕೊರೆಯುವ ಚಳಿಯಲ್ಲಿ ಅಚಲವಾಗಿ ನಿಂತ ಬಗ್ಗೆ ಹೊಗಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಅನೇಕರು ವಿಡಿಯೊವನ್ನು ಕಂಡು "ಬಾಪು ಅವರ ಅಚಲ ಸಂಕಲ್ಪದಂತೆ, ಚಳಿಯು ಈ ವ್ಯಕ್ತಿಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ" ಎಂದು ಒಬ್ಬರು ಹೇಳಿದ್ದಾರೆ. ಕೆಲವರು ಆ ಕ್ಷಣ ಎಷ್ಟು ಭಾವನಾತ್ಮಕವಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಒಬ್ಬರು "ಅವರು ಮೌನವಾಗಿ ನಿಂತಿರುವುದನ್ನು ನೋಡುತ್ತಿದ್ದಂತೆ ನನ್ನ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು" ಎಂದಿದ್ದಾರೆ. ಮತ್ತೊಬ್ಬರು "ಇದು ನನ್ನ ಮನಸ್ಸನ್ನು ಮುಟ್ಟಿತು" ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ ಶೋಕಿಗಾಗಿ ಸೇತುವೆ ಮೇಲೆ ಆಟೋದಲ್ಲಿ ಸ್ಟಂಟ್‌; ಕೊನೆಗೆ ಆಗಿದ್ದೇನು? ವಿಡಿಯೋ ನೋಡಿ

ನಂದಿ ಬೆಟ್ಟಕ್ಕೆ ಭೇಟಿ ನೀಡಿದ ಮಹಿಳೆಯೊಬ್ಬಳು ಈ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದು, ಈ ವೃದ್ಧ ಪ್ರತಿದಿನ ಆ ಸ್ಥಳಕ್ಕೆ ಬರುತ್ತಾನೆ ಎಂದು ಹೇಳಿದ್ದಾಳೆ. ಆತನಿಗೆ ಹೆಂಡತಿ ಮತ್ತು ಇಬ್ಬರು ಮೊಮ್ಮಕ್ಕಳನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ. ಮೊಣಕಾಲು ನೋವು ಇದ್ದರಿಂದ ಕೆಲಸ ಮಾಡಲು ಆಗದ ಕಾರಣ ಈ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾಳೆ.