Viral Video: ಮಕ್ಕಳನ್ನು ಚಿಕನ್ ಕ್ಯಾರಿಯರ್‌ನಲ್ಲಿ ಸಾಗಿಸಿದ ಅಪ್ಪ; ನೆಟ್ಟಿಗರು ಹೇಳಿದ್ದೇನು?
ವ್ಯಕ್ತಿಯೊಬ್ಬ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಹಿಂಬದಿಯಲ್ಲಿರುವ ಚಿಕನ್ ಕ್ಯಾರಿಯರ್‌ನೊಳಗೆ ಕೂರಿಸಿಕೊಂಡು ಬೈಕ್‍ನಲ್ಲಿ ಸವಾರಿ ಮಾಡಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ಇದನ್ನು ನೋಡಿ ಶಾಕ್ ಆಗಿದ್ದಾರೆ.


ಇತ್ತೀಚೆಗೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಚಿಕನ್ ಕ್ಯಾರಿಯರ್‌ನೊಳಗೆ ಕೂರಿಸಿಕೊಂಡು ಬೈಕ್‍ನಲ್ಲಿ ಸವಾರಿ ಮಾಡಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದು ಎಲ್ಲೆಡೆ ವೈರಲ್ (Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕಿನ ಹಿಂಭಾಗದಲ್ಲಿ ದೊಡ್ಡ ಚಿಕನ್ ಕ್ರೇಟ್ ಅನ್ನು ಜೋಡಿಸಿಟ್ಟುಕೊಂಡು ಅದರಲ್ಲಿ ಕೋಳಿಗಳನ್ನು ಇಟ್ಟುಕೊಳ್ಳುವ ಬದಲು ತನ್ನ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ರಸ್ತೆಯಲ್ಲಿ ಪ್ರಯಾಣ ಮಾಡಿದ್ದಾನೆ. ನೆಟ್ಟಿಗರು ಇದನ್ನು ನೋಡಿ ಶಾಕ್ ಆಗಿದ್ದಾರೆ.
ಮಕ್ಕಳು ಪಂಜರದೊಳಗೆ ಆರಾಮವಾಗಿ ಕುಳಿತುಕೊಂಡಿದ್ದಾರೆ. ಈ ಮೂಲಕ ಆತ ಸೇರಿ ಮೂವರು ಕುಳಿತು ಸಾಗಬಹುದಾದ ಬೈಕಿನಲ್ಲಿ ನಾಲ್ವರು ಆರಾಮವಾಗಿ ಪ್ರಯಾಣ ಬೆಳೆಸಿದ್ದಾರೆ. ಈ ವಿಡಿಯೊ 36 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಈ ವಿಡಿಯೊ ವೈರಲ್ ಆಗಿ ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, "ಸಂತೋಷದ ಕುಟುಂಬ, ನೀವು ಅದನ್ನು ಕಂಡು ನಗಬಹುದು ಆದರೆ ಅವರು ನಿಜವಾಗಿಯೂ ಸಂತೋಷವಾಗಿದ್ದಾರೆ, ಎಲ್ಲರೂ ದಯವಿಟ್ಟು ಏನೇನೊ ಹೇಳಬೇಡಿ" ಎಂದು ಕಾಮೆಂಟ್ ಮಾಡಿದ್ದಾರೆ.
ಬೈಕ್‌ನ ಚಿಕನ್ ಕ್ಯಾರಿಯರ್‌ನಲ್ಲಿ ಮಕ್ಕಳನ್ನು ಸಾಗಿಸಿದ ದೃಶ್ಯ ಇಲ್ಲಿದೆ ನೋಡಿ...
ಇನ್ನೊಬ್ಬರು, "ಸಮ್ಮರ್ ಎಫೆಕ್ಟ್, ಬ್ರದರ್" ಎಂದಿದ್ದಾರೆ. ಮತ್ತೊಬ್ಬರು, "ಇದು ಸುರಕ್ಷಿತ ಮತ್ತು ಸುಭದ್ರವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ನೆಟ್ಟಿಗರೊಬ್ಬರು ತಮಾಷೆಯಾಗಿ "ಅವು ಯಾವ ರೀತಿಯ ಕೋಳಿ?" ಎಂದು ಕೇಳಿದ್ದಾರೆ. "ಇದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ" ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. "360 ಹೆಲ್ಮೆಟ್" ಎಂದು ನೋಡುಗರೊಬ್ಬರು ಬರೆದಿದ್ದಾರೆ.
ಕೆಲವು ಬಳಕೆದಾರರು ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಮುಚ್ಚಿದ ಬಾಗಿಲುಗಳನ್ನು ಹೊಂದಿರುವ ಪಂಜರದಲ್ಲಿ ಮಕ್ಕಳನ್ನು ಸಾಗಿಸುವುದು ಅಪಾಯಕಾರಿ" ಎಂದು ಹಲವು ತಿಳಿಸಿದ್ದಾರೆ. "ಏನಾದರೂ ಸಂಭವಿಸಿದರೆ, ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?" ಎಂದು ಇನ್ನಂದಷ್ಟು ಮಂದಿ ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸ್ಕ್ಯಾಮರ್‌ಗೆ ಚಳ್ಳೆಹಣ್ಣು ತಿನ್ನಿಸಿದ ಯುವತಿ; ಫುಲ್ ಫನ್ನಿ ಆಗಿದೆ ಈ ವಿಡಿಯೊ
ಮಗುವನ್ನು ಚೀಲದಲ್ಲಿ ಇಟ್ಟು ಬೈಕ್‌ನ ಹ್ಯಾಂಡಲ್‌ಗೆ ಕಟ್ಟಿದ ಅಪ್ಪ!
ಈ ರೀತಿಯ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ವ್ಯಕ್ತಿಯೊಬ್ಬ ಚಿಕ್ಕ ಮಗುವನ್ನು ಚೀಲದಲ್ಲಿ ಇರಿಸಿ ಬೈಕ್‌ನ ಹ್ಯಾಂಡಲ್‍ಗೆ ಕಟ್ಟಿಕೊಂಡು ಪ್ರಯಾಣ ಮಾಡಿದ್ದಾನೆ. ದಿನಸಿ ಚೀಲಗಳನ್ನು ಬೈಕ್‍ನ ಹ್ಯಾಂಡಲ್‍ಗೆ ಕಟ್ಟುವುದನ್ನು ನಾವು ನೋಡಿರುತ್ತೇವೆ. ಆದರೆ ಈ ವ್ಯಕ್ತಿಯು ತನ್ನ ಮಗುವನ್ನು ಅದೇ ರೀತಿ ಸಾಗಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.