Vishwavani Special: ರಾಜ್ಯ ರಾಜಕಾರಣ: ಮತ್ತೆ ಸಾಹುಕಾರ್ ದರ್ಬಾರ್
ಬಿಜೆಪಿಯಲ್ಲಿದ್ದ ಬಣ ಬಡಿದಾಟ ಈಗ ಕಾಂಗ್ರೆಸಿಗೂ ವಕ್ಕರಿಸಿಕೊಂಡಿದ್ದು ಗದ್ದುಗೆ ಗುದ್ದಾಟ ಕಳೆದ ವಾರದಿಂದ ತಾರಕಕ್ಕೇರಿದೆ. ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿ ಕೊಳ್ಳಲು ಮತ್ತದೇ ಜಾರಕಿಹೊಳಿ ಕುಟುಂಬವನ್ನು ಆಶ್ರಯಿಸಿದಂತಾಗಿದೆ. ರಾಷ್ಟ್ರೀಯ ಪಕ್ಷ ಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರ ಸ್ಥಾನದ ಮೇಲೆ ಜಾರಕಿ ಹೊಳಿ ಬ್ರದರ‍್ಸ್ ಕಣ್ಣಿಟ್ಟಿದ್ದಾರೆ
Source : Vishwavani Daily News Paper
ವಿಶ್ವವಾಣಿ ವಿಶೇಷ
ಪ್ರಾದೇಶಿಕ ಪಕ್ಷಕ್ಕೂ ಬೇಕಿದೆ ಜಾರಕಿಹೊಳಿ ಸಹೋದರರು
ಬೆಂಗಳೂರು: ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಕ್ಕೆ ಬೆಳಗಾವಿಯೇ ಚಟುವಟಿಕೆಯ ಕೇಂದ್ರ ಸ್ಥಾನವಾಗಿದೆ. ಪ್ರತಿಪಕ್ಷಗಳಲ್ಲಿದ್ದರೂ ಜಾರಕಿಹೊಳಿ ಸಹೋ
ದರರೇ ಈ ಮೂರು ಪಕ್ಷಗಳಿಗೂ ಹೈಕಮಾಂಡ್ ಎನ್ನುವಂತಾಗಿದ್ದು, ಅವರ ಸುತ್ತಲೇ ರಾಜ್ಯ ರಾಜಕಾರಣ ಗಿರಕಿ ಹೊಡೆಯುವಂತಾಗಿದೆ.
ಬಿಜೆಪಿಯಲ್ಲಿದ್ದ ಬಣ ಬಡಿದಾಟ ಈಗ ಕಾಂಗ್ರೆಸಿಗೂ ವಕ್ಕರಿಸಿಕೊಂಡಿದ್ದು ಗದ್ದುಗೆ ಗುದ್ದಾಟ ಕಳೆದ ವಾರದಿಂದ ತಾರಕಕ್ಕೇರಿದೆ. ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿ ಕೊಳ್ಳಲು ಮತ್ತದೇ ಜಾರಕಿಹೊಳಿ ಕುಟುಂಬವನ್ನು ಆಶ್ರಯಿಸಿದಂತಾಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರ ಸ್ಥಾನದ ಮೇಲೆ ಜಾರಕಿ ಹೊಳಿ ಬ್ರದರ‍್ಸ್ ಕಣ್ಣಿಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ನಾನಾಗಲಿ ಎಂದು ಕೆಲವರ ಆಶಯವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರೆ, ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರನ್ನೇ ಬದಲಾಯಿಸಿ, ಹೊಸ ಅಧ್ಯಕ್ಷರ ನೇಮಿಸಿ ಎಂಬ ಹೋರಾಟದಲ್ಲಿ ರಮೇಶ್ ಜಾರಕಿಹೊಳಿ ತಂತ್ರ ಹೂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷತೆ ಮೇಲೆ ಜಾರಕಿಹೊಳಿ ಕಣ್ಣು..?
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ / ಇಲ್ಲವೇ ಒಪ್ಪಂದವಾಗಿದೆ ಎನ್ನಲಾದ ವಿಚಾರ ಸಂಬಂಧ ಕಳೆದ 15 ದಿನಗಳಿಂದ ನಡೆದಿರುವ ಚರ್ಚೆ ತಾರಕ್ಕೇರಿದೆ. ಇದೇ ವೇಳೆ ಡಿಸಿಎಂ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಪಟ್ಟ ಹಾಗೂ ಸಚಿವ ಸ್ಥಾನವೂ ಈಗ ಚರ್ಚಿತ ವಿಚಾರವಾಗಿದೆ.
ಹೈಕಮಾಂಡ್ ಮುಂದೆ ನಡೆದ ಒಪ್ಪಂದದಂತೆ ಸಿಎಂ ಬದಲಾವಣೆಯ ವಿಚಾರ ಬಂದಾಗ , ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗ ಹೊಂದಿರುವ ಹುದ್ದೆಗಳ ಮೇಲೂ ಚರ್ಚೆ ಯಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ವಿಚಾರ ಮುನ್ನಲೆಗೆ ಬಂದಿದ್ದು ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಈಗ ಸಚಿವ ಸತೀಶ್ ಜಾರಕಿಹೊಳಿ ಕಣ್ಣಿಟ್ಟಿ ದ್ದಾರೆ.
ಈ ಸಮಯದಲ್ಲೇ ಹುದ್ದೆ ಹಾಗೂ ಪಕ್ಷದ ವಿಚಾರವಾಗಿ ಬಹಿರಂಗ ಹೇಳಿಕೆ ನೀಡುವಂತಿಲ್ಲ ಹಾಗೂ ಡಿನ್ನರ್ ಪಾಲಿಟಿಕ್ಸ್ ಮಾಡುವಂತಿಲ್ಲ ಎಂದು ಹೈಕಮಾಂಡ್ ಸೂಚಿಸಿದ್ದರೂ,
ಕೆಪಿಸಿಸಿಗೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಆಗಲಿ ಎಂದು ಸತೀಶ್ ಜಾರಕಿಹೊಳಿ ಹೇಳಿ ದ್ದಾರೆ. ಈ ಹಿಂದೆ ಆಯೋಜಿಸಿದ್ದ ಡಿನ್ನರ್ ಸಭೆ ಮುಂದೂಡಲಾಗಿದ್ದರೂ, ಮತ್ತೊಮ್ಮೆ ಸಮಯ ಕೋರುವ ಇರಾದೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ಮದ್ಯೆ ಕೆಲ ಶಾಸಕರು ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಿ ಮಾತನಾಡಿ ದರೆ, ಮತ್ತೆ ಹಲವರು ಸಿಎಂ ಹುದ್ದೆ / ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಪಟ್ಟಕ್ಕೆ ಸಂಬಂಧಿಸಿದಂತೆ ಬೆಂಬಲಿಸುತ್ತಿದ್ದಾರೆ.
ಮತ್ತೊಂದೆಡೆ ಬಿಜೆಪಿಯಲ್ಲಿರುವ ರಮೇಶ್ ಜಾರಕಿಹೊಳಿ ಕೂಡ ತಮ್ಮ ಸಹೋದರ ಸತೀಶ್ ರನ್ನು ಸಮರ್ಥಿಸಿಕೊಂಡು ಮೂರು ಪಕ್ಷದಲ್ಲಿ ತಮ್ಮ ಛಾಪು ಮೂಡಿಸಿ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಅಣಿಯಾಗಿದ್ದಾರೆ.
ಪ್ರಾದೇಶಿಕಕ್ಕೂ ರಮೇಶ್ ಆಸರೆ: ಇನ್ನು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಈಗಾಗಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರದ ಸಚಿವರಾಗಿದ್ದಾರೆ. ಸ್ಥಳೀಯವಾಗಿ ಜೆಡಿಎಸ್ ಕಳೆದ ಚುನಾವಣೆಯಲ್ಲಿ ಹೇಳಿ ಕೊಳ್ಳುವ ಸಾಧನೆ ಮಾಡದಿದ್ದರೂ, ಇಲ್ಲೂ ರಾಜ್ಯಾಧ್ಯಕ್ಷರ ಪಟ್ಟಕ್ಕೆ ಕಾದಾಟಗಳಿದೆ. ನಿಖಿಲ್ ಕುಮಾರಸ್ವಾಮಿಯನ್ನು ರಾಜ್ಯ ಘಟಕಕ್ಕೆ ನೇಮಕ ಮಾಡಲಾಗುತ್ತದೆ ಎಂಬ ಮಾತಿ ದ್ದರೂ ಪಕ್ಷದಲ್ಲಿ ಹಲವರ ವಿರೋಧವಿದೆ.
ಇದೇ ವೇಳೆ ಪಕ್ಷವನ್ನು ಮೇಲಕ್ಕೆತ್ತಲು ಸಮರ್ಥ ಸಾರಥಿಯ ಅವಶ್ಯವಿದೆ. ಇದೇ ವೇಳೆ ರಾಜ್ಯ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ವಿಪ್ಲವಗಳು ಎದುರಾದರೆ ತಮ್ಮ ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟಿಕೊಳ್ಳಬೇಕೆಂಬ ಇರಾದೆಯೂ ಪಕ್ಷದ ವರಿಷ್ಠರಲ್ಲಿದೆ. ಇತ್ತ ಜೆಡಿಎಸ್‌ನ ಕೆಲ ಶಾಸಕರನ್ನು ಸಿಎಂ ಸಿದ್ದರಾಮಯ್ಯ, ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರು ವೈಯಕ್ತಿಕ ವಾಗಿ ಕರೆದು ಮಾತಾಡಿರುವುದು ಜೆಡಿಎಸ್ ವರಿಷ್ಠರ ಅಂಗಳಕ್ಕೆ ತಲುಪಿದೆ.
ಹೀಗಾಗಿ ಪಕ್ಷದ ಶಾಸಕರನ್ನು ಉಳಿಸುವ ಕಾರ್ಯತಂತ್ರ ಭಾಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖುದ್ದಾಗಿ ರಮೇಶ್ ಜಾರಕಿಹೊಳಿ ಬಳಿ ಸಹಾಯ ಹಸ್ತ ಬಾಚಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ರಾಜ್ಯ ರಾಜಕಾರಣ ಜಾರಕಿಹೊಳಿ ಸಹೋದರರ ಸುತ್ತ ಸುತ್ತುತ್ತಿದೆ.
ಬಣ ಬಡಿದಾಟ ನಿರಂತರ
ಬಿಜೆಪಿಯಲ್ಲಿ ಬಣ ಬಡಿದಾಟ ಆರಂಭವಾಗಿ ಆರು ತಿಂಗಳಾಗಿದೆ. ಮೊದಲಿಗೆ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ರಾಜ್ಯಾಧ್ಯಕ್ಷರ ಬದಲಾವಣೆಗೆ ಕೂಗು ಹಾಕಿದ್ದರು. ನಂತರ ಈ ವಿಚಾರ ಕೇಂದ್ರದ ಶಿಸ್ತು ಸಮಿತಿಯ ಮುಂದೆ ಹೋಗಿತ್ತಾದರೂ, ವಕ್ ಹೋರಾಟವೇ ಪ್ರಮುಖವಾಗಿತ್ತು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಆಗಲೇಬೇಕು ಎಂದು ಯತ್ನಾಳ್ ಹೇಳಿದ್ದಲ್ಲದೆ ಪ್ರತ್ಯೇಕವಾಗಿ ಬಣ ಮಾಡಿಕೊಂಡು ವಕ್ಫ್ ಹೋರಾಟ ಮಾಡಿದ್ದರು.
ಇದಾದ ನಂತರ ರಾಜ್ಯಾಧ್ಯಕ್ಷರ ಬಣ ಬಿಜೆಪಿ ಕಚೇರಿ ಸೇರಿದಂತೆ ಹಲವೆಡೆ ಸರಣಿ ಸಭೆಗಳನ್ನು ಮಾಡಿ ತಮಗಿರುವ ಬಲ ಪ್ರದರ್ಶಿಸಿಕೊಂಡಿತ್ತು. ಅಲ್ಲದೆ ಕೇಂದ್ರದ ನಾಯ ಕರು ಮಧ್ಯ ಪ್ರವೇಶಿಸಿ ರಾಜ್ಯ ಘಟಕದಲ್ಲಾಗಿರುವ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದ್ದರು. ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕಿಳಿದಾಗ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಬಿಎಸ್ವೈ ಸಹಕರಿಸಲಿ ಎಂದು ರಮೇಶ್ ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಯಿಸಿದ್ದ ವಿಜಯೇಂದ್ರ ಬಿಎಸ್‌ವೈ ಬಗ್ಗೆ ಮಾತನಾಡುವ ಹಕ್ಕು ರಮೇಶ್‌ಗಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು. ಬಿಜೆಪಿಯ ಕೇಂದ್ರ ನಾಯಕರನ್ನು ವಿಜಯೇಂದ್ರ ಹಾಗೂ ಭಿನ್ನ ಬಣದ ನಾಯಕರು ಭೇಟಿಯಾಗಿದ್ದರೂ ಕೂಡ ರಾಜ್ಯದಲ್ಲಿ ಬಣ ಬಡಿದಾಟ ನಿಂತಿಲ್ಲ. ಬಿಜೆಪಿಯಲ್ಲಿ ಪ್ರಮುಖ ನಾಯಕರಿದ್ದರೂ ಕೂಡ ಇಲ್ಲೂ ರಮೇಶ್ ಜಾರಕಿಹೊಳಿ ಅವರ ಅಬ್ಬರ ಮುಂದುವರೆದಿದೆ.
ಇದನ್ನೂ ಓದಿ: Rajendra Bhat Column: ದೊಡ್ಡ ಪ್ರಶಸ್ತಿಗಳನ್ನು ನಿರಾಕರಿಸಿ ದೊಡ್ಡವರಾದವರು!