BBK 11: ಮಿಡ್ ವೀಕ್ ಎಲಿಮಿನೇಷನ್ ಮಧ್ಯೆ ಸಂಕ್ರಾಂತಿ ಸಂಭ್ರಮ: ಬಿಗ್ ಬಾಸ್ಗೆ ಬಂದ್ರು ಹೊಸ ಗೆಸ್ಟ್
ದೊಡ್ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿ ನಡೆದಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಗೆಸ್ಟ್ ಕೂಡ ಬಿಗ್ ಬಾಸ್ಗೆ ಬಂದಿದ್ದಾರೆ. ಯಾರು ಹೊಸ ಗೆಸ್ಟ್?, ಬಿಗ್ ಬಾಸ್ನಲ್ಲಿ ಸಂಕ್ರಾಂತಿ ಸಂಭ್ರಮ ಹೇಗಿತ್ತು?. ಇಲ್ಲಿದೆ ನೋಡಿ ಮಾಹಿತಿ.
ಬಿಗ್ ಬಾಸ್ ಕನ್ನಡ ಸೀಸನ್ 11 ಅಂತಿಮ ಹಂತದಲ್ಲಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೇವಲ 10 ದಿನಗಳಷ್ಟೆ ಬಾಕಿ ಉಳಿದಿದೆ. ಫೈನಲ್ಗೆ ಕಾಲಿಡಲು ಮನೆಯೊಳಗಿರುವ 7 ಸ್ಪರ್ಧಿಗಳು ಸ್ನೇಹ-ಸಂಬಂಧವನ್ನು ಬಿಟ್ಟು ಆಡುತ್ತಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ ಎಂದು ವಾರದ ಆರಂಭದಲ್ಲಿ ಬಿಗ್ ಬಾಸ್ ಹೇಳಿದ್ದರು. ಅದರಂತೆ ಇಂದು ಮಹತ್ವದ ಎಲಿಮಿನೇಷನ್ ನಡೆಯಲಿದೆ. ಇದರ ನಡುವೆ ದೊಡ್ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿ ನಡೆದಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಗೆಸ್ಟ್ ಕೂಡ ಬಿಗ್ ಬಾಸ್ಗೆ ಬಂದಿದ್ದಾರೆ. ಯಾರು ಹೊಸ ಗೆಸ್ಟ್?, ಬಿಗ್ ಬಾಸ್ನಲ್ಲಿ ಸಂಕ್ರಾಂತಿ ಸಂಭ್ರಮ ಹೇಗಿತ್ತು?. ಇಲ್ಲಿದೆ ನೋಡಿ ಮಾಹಿತಿ.
ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಯಾರು ಹೋಗಬಹುದು ಎಂಬ ಟೆನ್ಶನ್ ಬಿಗ್ ಬಾಸ್ ಮನೆಯಲ್ಲಿರುವ ಆರು ಸ್ಪರ್ಧಿಗಳಿಗಿದೆ. ತ್ರಿವಿಕ್ರಮ್, ಭವ್ಯಾ ಗೌಡ, ಮಂಜು, ಗೌತಮಿ, ಮೋಕ್ಷಿತಾ ಪೈ ಮತ್ತು ರಜತ್ ಕಿಶನ್ ನಾಮಿನೇಟ್ ಆಗಿದ್ದಾರೆ. ಎಲಿಮಿನೇಷನ್ನಿಂದ ಪಾರಾಗಲು ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಗೆದ್ದು ಧನರಾಜ್ ಆಚಾರ್ ಬಚಾವ್ ಆಗಿದ್ದಾರೆ. ಹೀಗಾಗಿ ಉಳಿದ ಆರು ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಸ್ಪರ್ಧಿಗಳ ಟೆನ್ಶನ್ ಕೊಂಚ ಕಡಿಮೆ ಮಾಡಲು ಸಂಕ್ರಾಂತಿ ಪ್ರಯುಕ್ತ ಸದ್ಯ ಬಿಗ್ ಬಾಸ್ಗೆ ಸ್ಯಾಂಡಲ್ವುಡ್ನ ಹಿರಿಯ ನಟಿ ತಾರಾ ಕಾಲಿಟ್ಟಿದ್ದಾರೆ.
ತಾರಾ ಅವರನ್ನು ಕಂಡು ಬಿಗ್ ಬಾಸ್ ಸ್ಪರ್ಧಿಗಳ ಖುಷಿಗೆ ಪಾರವೇ ಇರಲಿಲ್ಲ. ಹೊಸ ಉಡುಗೆ ತೊಟ್ಟು ಸ್ಪರ್ಧಿಗಳು ತಾರಾ ಅವರ ಜೊತೆ ಅದ್ಧೂರಿಯಾಗಿ ಸಂಕ್ರಾಂತಿ ಸೆಲೆಬ್ರೆಟ್ ಮಾಡಿದ್ದಾರೆ. ಇದರ ಜೊತೆ ಸಣ್ಣ ಟಾಸ್ಕ್ ಕೂಡ ತಾರಾ ಅವರು ಎಲ್ಲರಿಗೂ ನೀಡಿದ್ದಾರೆ. ಸಂಕ್ರಾಂತಿ ದಿನ ಎಳ್ಳು-ಬೆಲ್ಲ ತಿಂದು ಎರಡು ಒಳ್ಳೆಯ ಮಾತನಾಡಬೇಕು ಎಂದು ಹೇಳಿದ್ದಾರೆ.
ಮೊದಲಿಗೆ ಮಾತನಾಡಿದ ರಜತ್ ಕಿಶನ್ ಅವರು ಧನರಾಜ್ ಜೊತೆಗಿನ ಜಗಳದ ಬಗ್ಗೆ ಕೆಲ ನೆನಪು ಹಂಚಿಕೊಂಡಿದ್ದಾರೆ. ಬಂದ ಎರಡು ವಾರಕ್ಕೆ ಧನು ಜೊತೆ ಜಗಳ ಆಯಿತು.. ಅದು ಮಾಡಬಾರದಿತ್ತು. ಇಲ್ಲಿಂದ ಆಚೆ ಹೋದ ನಂತ್ರವೂ ನಾವಿಬ್ರು ಓನೆ.. ಓನೆ ಅಂತ ಹಾಗೆ ಇರ್ತೇವೆ ಎಂದಿದ್ದಾರೆ. ಇನ್ನು ಮೋಕ್ಷಿತಾ ಅವರು ಮಂಜು ಜೊತೆಗಿನ ಅಣ್ಣ-ತಂಗಿ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ನಾನು ಈ ಮನೆಯಲ್ಲಿ ಅತಿ ಹೆಚ್ಚು ಜಗಳ ಆಡಿರೋದು ಮಂಜಣ್ಣನ ಜೊತೆ.. ಆದ್ರೆ ಆ ಪ್ರೀತಿ ಯಾವಾಗಲೂ ಹೀಗೆ ಇರುತ್ತೆ ಎಂದು ಹೇಳಿದ್ದಾರೆ. ಈ ಸಂದರ್ಭ ಭಾವುಕಾರದ ಮಂಜಣ್ಣ, ಅಣ್ಣ ಅಂತ ಕರೀತಾಳೆ, ಆದ್ರೆ ತಂಗಿಗೆ ಇರುವ ಮೆಚ್ಯೂರಿಟಿ ನನ್ಗೆ ಇಲ್ವವಲ್ಲ.. ಒಂದುಕಡೆ ನಾನು ಸಿಕ್ಕಾಪಟ್ಟೆ ದುಡುಕಿದೆ.. ಸಿಕ್ಕಾಪಟ್ಟೆ ನೋವು ಕೊಟ್ಟೆ.. ನನ್ನ ಬಾಯಿಂದ ಬಂದ ಆ ಪದಗಳಿಗೆ ಕ್ಷಮೆ ಇರಲಿದೆ ಎಂದು ಹೇಳಿ ಇಬ್ಬರು ತಬ್ಬಿಕೊಂಡಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿ ನಡೆದಿದೆ. ನಗು-ಅಳುವಿನ ಜೊತೆ ಸಂಬಂಧದ ಬಗ್ಗೆ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.